ಮಿಡಲ್ ಕ್ಲಾಸ್ ರಾಮಾಯಣದಲ್ಲಿ ಬದುಕಲು ಹೆಣಗಾಡಿದ ಸ್ವಾಭಿಮಾನಿ ಹೀರೋ
ಸಿನಿಮಾದ ನಾಯಕಿ ನಟಿಯಾಗಿ ಬಿಗ್ ಬಾಸ್ ಖ್ಯಾತಿಯ ಮೋಕ್ಷಿತಾ ಪೈ ಮನೋಜ್ಞವಾಗಿ ನಟಿಸಿದ್ದಾರೆ.
ಸಿನಿಮಾದಲ್ಲಿ ಪೋಷಕ ನಟರಾಗಿ ಎಸ್. ನಾರಾಯಣ್, ವೀಣಾ ಸುಂದರ್, ಶೋಭರಾಜ್, ಸುಂದರ್ ಮಂದಾರಾ, ಕ್ವಾಟ್ಲೆ ಕಿಚನ್ ತುಕಾಲಿ ಸಂತೋಷ್, ವಿಜಯ್ ಚಂದ್ರು, ಬಾಲರಾಜ್, ಬ್ಯಾಂಕ್ ಜನಾರ್ದನ್, ಕಾಮಿಡಿ ಕಿಲಾಡಿ ಹುಲಿ ಕಾರ್ತಿಕ್, ಸುಶ್ಮಿತಾ ಜಗ್ಗಪ್ಪ ಇತರರು ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ.
ಜೀವನದಲ್ಲಿ ಬದುಕೋಕೆ ಕಷ್ಟ ಬೀಳೋ ವರ್ಗ ಮಿಡಲ್ ಕ್ಲಾಸ್ ವರ್ಗದವರು. ಅದೇನೊಪ್ಪ ಮೂರಕ್ಕೆಇಳಿಯಲ್ಲ ಆರಕ್ಕೆ ಏರಲ್ಲ ಅನ್ನೋ ತರ ದುಡಿದಷ್ಟು ಸಂಪಾದನೆ ಇಲ್ಲ. ನೆಮ್ಮದಿಯಂತು ಮೊದಲೇ ಇಲ್ಲ ಅನ್ನೋ ತರ
ಅಂತದೊಂದು ಫ್ಯಾಮಿಲಿ ಸುತ್ತ ಓಡ್ತಾ ಇರೋ ಸಿನಿಮಾನೇ ಮಿಡಲ್ ಕ್ಲಾಸ್ ರಾಮಾಯಣ. midle class raamayana movie
ಸಿನಿಮಾ ಟೈಟಲ್ ಹೇಳುವಂತೆ ಮುಕ್ಕಲೆಕ್ರೆ ಜಮೀನು ಅಪ್ಪನ ಕಡೆದು ಅಂತ ಇದ್ರೂ ಬಾಡಿಗೆ ಮನೆಲಿ ವಾಸ. ಮಗ ಕೃಷ್ಣ ಬೆಳೆದು ಓದಿ ಉದ್ಯೋಗ ಹಿಡಿಯಬೇಕು ಅನ್ನೋವಾಗ್ಲೆ ದೇವರ ಪಾದ ಸೇರಿದ ಅಪ್ಪ. ಡಿಗ್ರಿ ಅರ್ಧಕ್ಕೆ ಕೈಬಿಟ್ಟು ಜಿಮ್ ನಲ್ಲಿ ಕಸ ಹೊಡೆಯೋಕೆ ಸೇರ್ಕೊಂಡ ಸಿನಿಮಾ ನಾಯಕ ಜಿಮ್ ಟ್ರೈನರ್ ಆಗ್ಬೇಕು ಅನ್ನೋವಾಗ್ಲೆ ಜಿಮ್ ಗೆ ಬರ್ತಾ ಇದ್ದ ತೆಳ್ಳಗೆ ಬೆಳ್ಳಗೆ ಚೆಂದ ಇದ್ದ ಹುಡುಗಿಯ ಲವ್ ನಲ್ಲಿ ಬಿದ್ಬಿಡ್ತಾನೆ.
ಆತನಿಗೊಬ್ಬ ಗೆಳೆಯ ಕೂಡ ಇರ್ತಾನೆ. ಆತ ನಾಯಕನಿಗೆ ಹೊಸ ಐಡಿಯಾ ಕೊಡ್ತಾ ನಾಯಕನ ಬಾಳಲ್ಲಿ ಮುಖ್ಯ ಪಾತ್ರ ವಹಿಸ್ತಾನೆ. ಅಂದಹಾಗೆ ಈ ಸಿನಿಮಾದ ನಾಯಕ ನಟನಾಗಿ ಮುಖ್ಯ ಭೂಮಿಕೆಯಲ್ಲಿ ವಿನು ಗೌಡ ನಟಿಸಿದ್ದಾರೆ. ಗೆಳೆಯನ ಪಾತ್ರದಲ್ಲಿ ಕಾಮಿಡಿ ಕಿಲಾಡಿ ನಟ ಜಗ್ಗಪ್ಪ ಅಭಿನಯಿಸಿದ್ದಾರೆ. ಪ್ರಿಯತಮೆ ಪಾತ್ರದಲ್ಲಿ ಯುಕ್ತ ರಣ್ಧೀರ್ ಪೆರ್ವಿ ಅಭಿನಯಿಸಿದ್ದಾರೆ.
ಸಿನಿಮಾ ಹೀರೋ ಜಿಮ್ ನಲ್ಲಿ ಆದ ಲವ್ ನಂಬಿ ಮೋಸ ಹೋಗ್ತಾನೆ. ಆಗ ತುಂಬಾ ನೊಂದುಕೊಂಡ ಅವನು ಆ ಜಿಮ್ ಬಿಟ್ಟು ಬೇರೆ ಜಿಮ್ ಟ್ರೈನರ್ ಆಗಿ ಸೇಕ್ಕೊಳ್ತಾನೆ ಆದರೆ ಜಿಮ್ ಓನರ್ ನಡುವಿನ ವೈಮನಸ್ಸಿಗೆ ಸ್ವಾಭಿಮಾನ ಅಡ್ಡ ಬಂದು ಅಲ್ಲಿಯೂ ಕೆಲಸ ಬಿಟ್ಟು ಸ್ವಂತ ಜಿಮ್ ಆರಂಭಿಸಿ ಓನರ್ ಆಗ್ತೀನಿ ಅಂತ ಚಾಲೆಂಜ್ ಮಾಡಿ ಹೊರಬರ್ತಾನೆ.
ಮನೆಯಲ್ಲಿ ಕೆಲಸ ಇಲ್ಲದೆ ಖಾಲಿ ಕೂತಾಗ ಊರ ಹೆಂಗಸರ ಬಾಯಿ ಮಾತು ಕೇಳ್ಬೇಕೇ. ತಲೆಗೊಂದು ಕೈಗೊಂದು ಮಾತನಾಡಿ ಹೊಟ್ಟೆ ಉರಿಸೋದೆ ಅಭ್ಯಾಸ ಮಾಡಿಕೊಂಡಿರ್ತಾರೆ. ಇದನ್ನು ನೋಡಿ ಬೇಸತ್ತು ಹೀರೋ ನಾ ಅಮ್ಮ ಸುಂದರಿ ಹುಡುಗಿನ ಮಗನಿಗೆ ಮದ್ವೆ ಮಾಡ್ತೇನೆ ಎಂದು ಪಣ ತೊಡುತ್ತಾಳೆ. ಹುಡುಗಿ ಹುಡುಕುತ್ತಾ ಮನೆ ಮನೆ ಅಲೆಯೋದೆ ಕೆಲಸ ಆಗುತ್ತದೆ.
ಆದರೆ ಅಮ್ಮ ಭಾಗ್ಯಮ್ಮನ ಗೆಳತಿ ಮಗಳೇ ಕೊನೆಗೆ ಮನೆ ಸೊಸೆ ಆಗುತ್ತಾಳೆ.
ತುಂಬಾ ಶ್ರೀಮಂತೆ ನೋಡಲು ಕಪ್ಪಗೆ ಇದ್ದ ಹುಡುಗಿಗೆ ಒಂದು ಲಕ್ಷ ಸಂಬಳ, ಸಾಫ್ಟವೇರ್ ಇಂಜೀನಿಯರ್ ಎಂದು ದುಡ್ಡಿನ ಆಸೆಗೆ ಜಿಮ್ ಆರಂಭಿಸುವ ಕನಸು ಹೊತ್ತು ಹೀರೋ ಇಷ್ಟವಿಲ್ಲದಿದ್ದರೂ ಮದುವೆಯಾಗುತ್ತಾನೆ.
ಆದರೆ ಆಸ್ತಿ ಪಾಸ್ತಿ ಇಲ್ಲ ಅನ್ನುವ ಕಾರಣಕ್ಕೆ ಮಾವನಿಗೆ ಅಳಿಯನನ್ನು ಕಂಡರೆ ಆಗುತ್ತಿರಲಿಲ್ಲ. ಆದರೆ ಈ ನಾಟಕದ ಮಧ್ಯೆ ದಂಪತಿ ಹೊರಗೆ ಹೋದಾಗೆಲ್ಲ ಬಣ್ಣದ ಬಗ್ಗೆ ಜೋಡಿ ಬಗ್ಗೆ ಅಪಹಾಸ್ಯ ಮಾಡತೊಡಗುತ್ತಾರೆ.ಈ ಜೋಡಿ ಹೇಗೆ ಸಂಸಾರ ಮಾಡಿದರು?.
ಅಲ್ಪನಿಗೆ ಐಶ್ವರ್ಯ ಬಂದಾಗ ಅರ್ಧ ರಾತ್ರಿಗೆ ಕೊಡೆ ಹಿಡಿದ ಹೀರೋ ದುಡ್ಡಿನ ಆಸೆಗೆ ಏನು ಮಾಡಿದ?. ಹ್ಯಾಂಡ್ಸಮ್ ಹುಡುಗ ಎಂದು ಮದುವೆ ಆದ ಹುಡುಗಿ ಜೀವನ ಏನಾಯ್ತು? ಎನ್ನುವುದಕ್ಕೆ ಮಿಡಲ್ ಕ್ಲಾಸ್ ರಾಮಾಯಣ ಸಿನಿಮಾವನ್ನು ನೀವು ನೋಡಬೇಕು.
ಈ ಸಿನಿಮಾದ ನಾಯಕಿ ನಟಿಯಾಗಿ ಬಿಗ್ ಬಾಸ್ ಖ್ಯಾತಿಯ ಮೋಕ್ಷಿತಾ ಪೈ ಮನೋಜ್ಞವಾಗಿ ನಟಿಸಿದ್ದಾರೆ.
ಈ ಸಿನಿಮಾದಲ್ಲಿ ಪೋಷಕ ನಟರಾಗಿ ಎಸ್. ನಾರಾಯಣ್, ವೀಣಾ ಸುಂದರ್, ಶೋಭರಾಜ್, ಸುಂದರ್ ಮಂದಾರಾ, ಕ್ವಾಟ್ಲೆ ಕಿಚನ್ ತುಕಾಲಿ ಸಂತೋಷ್, ವಿಜಯ್ ಚಂದ್ರು, ಬಾಲರಾಜ್, ಬ್ಯಾಂಕ್ ಜನಾರ್ದನ್, ಕಾಮಿಡಿ ಕಿಲಾಡಿ ಹುಲಿ ಕಾರ್ತಿಕ್, ಸುಶ್ಮಿತಾ ಜಗ್ಗಪ್ಪ ಇತರರು ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ.
ಈ ಸಿನಿಮಾದಲ್ಲಿ ಹಾಡುಗಳು ಬಹಳ ಸುಂದರವಾಗಿ ಮೂಡಿ ಬಂದಿದ್ದು ರಾಜೇಶ್ ಕೃಷ್ಣನ್, ಅನುರಾಧ ಭಟ್, ನಿಹಾಲ್ ತಾವೂರ್, ಶ್ರೀಲಕ್ಷ್ಮಿ ಪೆಲಮಣ್ಣು ಧ್ವನಿಗೂಡಿಸಿದ್ದಾರೆ.
ಈ ಸಿನಿಮಾ ಒಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸ್ಟೋರಿಯಾಗಿದ್ದು ನಿರ್ದೇಶಕ ಧನುಷ್ ಗೌಡ ಹಾಗೂ ನಿರ್ಮಾಪಕರಾಗಿ ಜಯರಾಮ್ ಗಣಗಪ್ಪನಹಳ್ಳಿ ಅಂಜನಾದ್ರಿ ಪ್ರೋಡಕ್ಷನ್ ನಿಂದ ಈ ಚಿತ್ರ ಮೂಡಿಬಂದಿದೆ. ಡೈಲಾಗ್ಸ್, ಸ್ಕ್ರೀನ್ ಪ್ಲೇ, ಬ್ಯಾಕ್ ಗ್ರೌಂಡ್ ಮ್ಯೂಸಿಕ್, ಕಥೆ ಎಳೆದೊಯ್ದ ರೀತಿ ತುಂಬಾ ಚೆನ್ನಾಗಿದೆ.
ಒಟ್ಟಾರೆಯಾಗಿ ಜೀವನದಲ್ಲಿ ಹಣವೇ ಮುಖ್ಯವಲ್ಲ, ಸಂಬಂಧ ಸಂಸಾರವೂ ಮುಖ್ಯ ಎನ್ನುವುದನ್ನು ಸಮಾಜಕ್ಕೆ ತೋರಿಸುವ ಪ್ರಯತ್ನ ಮಾಡುವಲ್ಲಿ ಈ ಸಿನಿಮಾ ಯಶಸ್ವಿಯಾಗಿದೆ.
ಇದನ್ನು ಓದಿ: