Back To Top

 ಡಿಜಿಟಲ್ ಅರೆಸ್ಟ್: 14 ಲಕ್ಷ ರೂಪಾಯಿ ಕಳೆದುಕೊಂಡ ಜನಪ್ರಿಯ ಸಂಸದನ ಪತ್ನಿ

ಡಿಜಿಟಲ್ ಅರೆಸ್ಟ್: 14 ಲಕ್ಷ ರೂಪಾಯಿ ಕಳೆದುಕೊಂಡ ಜನಪ್ರಿಯ ಸಂಸದನ ಪತ್ನಿ

ಮಾಜಿ ಆರೋಗ್ಯ ಸಚಿವ ಹಾಗೂ ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್‌ ಅವರ ಪತ್ನಿ ಡಿಜಿಟಲ್‌ ಆರೆಸ್ಟ್‌ ವಂಚನೆಗೆ ಒಳಗಾಗಿದ್ದು, 14 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಬೆಂಗಳೂರು: ದೇಶದಲ್ಲಿ ಸೈಬರ್‌ ಅಪರಾಧಗಳ ಸಂಖ್ಯೆ ಗಂಭೀರವಾಗಿ ಏರಿಕೆಯಾಗುತ್ತಿದೆ. cyber crime ಅಕ್ರಮ ಚಟುವಟಿಕೆ ಜೊತೆಗೆ ಕೊಲೆ, ಮೋಸ, ವಂಚನೆ ಜೊತೆಗೆ ಪೋನ್ ಹ್ಯಾಕ್ phone hack ಪ್ರಕರಣಗಳು ಹೆಚ್ಚಾಗುತ್ತಿವೆ.
ಕೆಲದಿನಗಳ ಹಿಂದೆ ಕನ್ನಡ ಚಿತ್ರರಂಗದ ನಟ ಉಪ್ಪೇಂದ್ರ ಅವರ ಹೆಂಡತಿ ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ ಆಗಿತ್ತು. ಈ ಸಂದರ್ಭದಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಮಾಜಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಬ್ಯಾಂಕ್‌ ಖಾತೆಗೆ ಕನ್ನ ಹಾಕಿ 3 ಲಕ್ಷ ರೂಪಾಯಿ ಎಗರಿಸಲಾಗಿತ್ತು.

ಈಗ ಮಾಜಿ ಆರೋಗ್ಯ ಸಚಿವ ಹಾಗೂ ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್‌ ಅವರ ಪತ್ನಿ digital arrest ಡಿಜಿಟಲ್‌ ಆರೆಸ್ಟ್‌ ವಂಚನೆಗೆ ಒಳಗಾಗಿದ್ದು, 14 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಸಂಸದ ಡಾ. ಕೆ ಸುಧಾಕರ್ ಪತ್ನಿ ಡಾ. ಪ್ರೀತಿ ಸುಧಾಕರ್ ಗೆ ಸೈಬರ್ ವಂಚನೆ ಮಾಡಿ 14 ಲಕ್ಷ ರೂಪಾಯಿ ಎಗರಿಸಿದ್ದಾರೆ. ಆಗಸ್ಟ್ 26ರಂದು ಡಾ. ಪ್ರೀತಿ ಸುಧಾಕರ್ ಬೆಳಿಗ್ಗೆ 9.30ಕ್ಕೆ ಕರೆ ಬಂದಿತ್ತು. ನಾವು ಮುಂಬೈ ಸೈಬರ್ ಇಲಾಖೆಯಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ದಾಖಲೆಗಳನ್ನ ಸದ್ಭತ್ ಖಾನ್ ಎಂಬ ಅಪರಿಚಿತ ಬಳಸಿಕೊಂಡಿದ್ದಾನೆ. ನಿಮ್ಮ ಹೆಸರಲ್ಲಿ ಕ್ರೆಡಿಟ್ ಕಾರ್ಡ್ credit card ಮಾಡಿಸಿ ಅಕ್ರಮ ಹಣ ವರ್ಗಾವಣೆ money transfer ಮಾಡಿದ್ದಾನೆ ಎಂದು ವಂಚಕ ಹೇಳಿದ್ದಾನೆ.
ವಿದೇಶಕ್ಕೆ ಕಾನೂನುಬಾಹಿರವಾಗಿ ಚಟುವಟಿಕೆ ನಡೆಸಲು ಆತ ಜನರನ್ನು ಕಳುಹಿಸಿದ್ದಾನೆ. ಸದ್ಯಕ್ಕೆ ಸದ್ಬತ್ ಖಾನ್‌ರನ್ನು ಅರೆಸ್ಟ್ ಮಾಡಲಾಗಿದ್ದು, ಆತನ ಹೇಳಿಕೆಯಲ್ಲಿ ನಿಮ್ಮ ಹೆಸರಿನ ದಾಖಲೆಯಿದೆ. ಇದರ ವಿಚಾರಣೆ ನಡೆಸೋದಕ್ಕೆ ವಿಡಿಯೋ ಕಾಲ್ ಮಾಡುತ್ತಿದ್ದೇವೆ. ನಿಮ್ಮ ದಾಖಲೆ ಹಾಗೂ ವೈಯಕ್ತಿಕ ದಾಖಲೆಗಳನ್ನು ರದ್ದು ಮಾಡುತ್ತಿದ್ದೇವೆ ಎಂದು ವಂಚಕ ಬೆದರಿಕೆ ಹಾಕಿದ್ದಾನೆ.
ನಿಮ್ಮ ಅಕೌಂಟ್ ಅಕ್ರಮವಾಗಿದ್ದು ಹಣ ಹಾಕಿ ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ಪ್ರೀತಿ ಅವರು 14 ಲಕ್ಷ ಹಣವನ್ನು ವಂಚಕರ ಖಾತೆಗೆ ಹಾಕಿದ್ದಾರೆ. ಆರ್ಬಿಐ ರೂಲ್ಸ್ ಪರಿಶೀಲನೆ ಮಾಡಿ 45 ನಿಮಿಷದಲ್ಲಿ ವಾಪಸ್ ಹಾಕೋದಾಗಿ ವಂಚಕ ತಿಳಿಸಿದ್ದಾನೆ. ಪ್ರೀತಿ ಸುಧಾಕರ್ ಇಂದ 14 ಲಕ್ಷ ಹಣವನ್ನು ವಂಚಕರು ಆರ್‌ಟಿಜಿಎಸ್‌ ಮಾಡಿಸಿಕೊಂಡಿದ್ದಾರೆ. ಹಣ ಹಾಕಿದ ನಂತರ ವಂಚನೆಗೊಳಗಾಗಿರುವುದು ಬೆಳಕಿಗೆ ಬಂದಿದೆ. ಪ್ರೀತಿ ಸುಧಾಕರ್ ನೀಡಿದ ದೂರಿನ ಮೇರೆಗೆ ಸೈಬರ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ. ತನಿಖೆ ನಡೆಸಲಾಗುತ್ತಿದೆ.
ಸೈಬರ್ ವಂಚಕರು ನಾನಾ ವಿಧದಲ್ಲಿ ಜನರನ್ನು ಮೋಸಗೊಳಿಸುತ್ತಿದ್ದು ಜನರು ಇನ್ನಷ್ಟು ಎಚ್ಚರಗೊಳ್ಳಬೇಕಿದೆ.

ಇದನ್ನು ಓದಿ:

Prev Post

ಪಾಕ್ ಆಟಗಾರರಿಗೆ ಭಾರತ ಆಟಗಾರರು ಶೇಕ್‌ಹ್ಯಾಂಡ್‌ ನೀಡಿಲ್ಲ

Next Post

ಮಿಡಲ್ ಕ್ಲಾಸ್ ರಾಮಾಯಣದಲ್ಲಿ ಬದುಕಲು ಹೆಣಗಾಡಿದ ಸ್ವಾಭಿಮಾನಿ ಹೀರೋ

post-bars

Leave a Comment

Related post