ಅರಸಯ್ಯನ ಪ್ರೇಮಕ್ಕೆ ಒಲಿದ ಪೋಸ್ಟ್ ಮೇಡಂ
ಅರಸಯ್ಯನಿಗೆ ಹಾರ್ಮೋನಿಯಂ, ಆರತಿ ತಟ್ಟೆ ಪುಡಿಗಾಸು ಬಿಟ್ಟರೆ ಹೇಳಿಕೊಳ್ಳೋ ಕೆಲಸ ಏನಿಲ್ಲ. ಮೂರು ಎಕ್ರೆ ಜಮೀನು ಇದೆ ಎನ್ನುತ್ತಾ ಕಿವಿ ಸ್ವಲ್ಪ ದೂರ ಎನ್ನುತ್ತಲೇ ಹುಡುಗಿ ಮಾತುಕತೆಗೆ ಹೋಗುವ ದಳ್ಳಾಳಿ ಸೇರಿ ಅರಸಯ್ಯನ ಚಪ್ಪಲಿ ಸವೆಯಿತೇ ಹೊರತು ಹುಡುಗಿ ಫಿಕ್ಸ್ ಆಗಲೇ ಇಲ್ಲ.
ಸಾವಿನ ಮನೆಯಲ್ಲಿ ಊರು ಸುದ್ದಿ ಪುರಾಣ ಮಾತನಾಡುವ ಜನರ ನಡುವೆ ಹಾರ್ಮೋನಿಯಂ ವಾದಕನ “ನೋಡಕಾಯ್ತಿಲ್ಲ ದೇವರ್ರೆ ನೋಡಕಾಯ್ತಿಲ್ಲ” ಎಂಬ ಭಜನೆಯಿಂದ ತೆರೆದುಕೊಳ್ಳುವ “ಅರಸಯ್ಯನ ಪ್ರೇಮ ಪ್ರಸಂಗ” arasayyana prema prasanga ಹಳ್ಳಿಗಾಡಿನ ಬದುಕು ಬವಣೆಯ ನಡುವೆ ಹುಟ್ಟಿದ ಒಂದು ಸುಂದರ ಕಥೆಯಾಗಿದೆ. ಸಿನಿಮಾ ಸಂಪೂರ್ಣ ಹಾಸ್ಯಮಯವಾಗಿದ್ದು, ಸಿನಿಮಾ ನೋಡುಗರನ್ನು ನಗಿಸಿ ಹೊಟ್ಟೆ ಹುಣ್ಣಾಗಿಸುತ್ತದೆ.
ಹೊಟ್ಟೆ ಬಟ್ಟೆಗೆ ಅನುಕೂಲವಾಗಿರುವ ಜಿಪುಣ ತಂದೆಗೆ ಮಗನಾದ ಹೀರೋ ಅರಸಯ್ಯ, ಸದ್ಗುಣ ಸಂಪನ್ನ ಆದರೆ ಆಂತರಿಕ ಸೌಂದರ್ಯ ಇರುವ ನಮ್ಮ ಹೀರೋ ಬಾಹ್ಯ ಸೌಂದರ್ಯದಿಂದ ಆತನಿಗೆ ಮದ್ವೆ ಎನ್ನುವುದು ಮಾರುದ್ದ ದೂರವಿತ್ತು.
ದೇವಸ್ಥಾನದ ಅರ್ಚಕನಾಗಿ ಕೆಲಸ ಮಾಡುತ್ತಿದ್ದ ನಮ್ಮ ಸಿನಿಮಾ ನಾಯಕ ಹಾರ್ಮೋನಿಯಂ ವಾದಕ ಸುತ್ತ ಹತ್ತಾರು ಮನೆಯಲ್ಲಿ ಹರಿಕಥೆ ಮಾಡೋ ಕಾಯಕವಾದರೂ ಸತ್ತ ಮನೆಗೆ ಮಾತ್ರವಲ್ಲ, ಮದುವೆ ಮುಂಜಿಗೆ ಶಾಮಿಯಾನ, ಪಾತ್ರೆ ಪಗರ ಬಾಡಿಗೆ ಕೊಡ್ತಾ ಇದ್ದ.
ಶಿವ ಶಿವಾ ಟೆಂಟ್ ಹೌಸ್ ನ ವ್ಯವಹಾರ ಜಿಪುಣ ತಂದೆ ನೋಡಿಕೊಳ್ಳುತಿದ್ದರೂ ಮನೆಗೆ ಬಂದ ಅತಿಥಿಗಳಿಗೆ ಊಟ ಹಾಕುವುದು ಕಂಡರೆ ಉರಿದು ಬಿಡುತ್ತಿದ್ದ.
ಅರಸಯ್ಯನಿಗೆ ಹಾರ್ಮೋನಿಯಂ, ಆರತಿ ತಟ್ಟೆ ಪುಡಿಗಾಸು ಬಿಟ್ಟರೆ ಹೇಳಿಕೊಳ್ಳೋ ಕೆಲಸ ಏನಿಲ್ಲ. ಮೂರು ಎಕ್ರೆ ಜಮೀನು ಇದೆ ಎನ್ನುತ್ತಾ ಕಿವಿ ಸ್ವಲ್ಪ ದೂರ ಎನ್ನುತ್ತಲೇ ಹುಡುಗಿ ಮಾತುಕತೆಗೆ ಹೋಗುವ ದಳ್ಳಾಳಿ ಸೇರಿ ಅರಸಯ್ಯನ ಚಪ್ಪಲಿ ಸವೆಯಿತೇ ಹೊರತು ಹುಡುಗಿ ಫಿಕ್ಸ್ ಆಗಲೇ ಇಲ್ಲ.
ಈ ಸಂದರ್ಭದಲ್ಲಿ ಪೋಸ್ಟ್ ಆಫೀಸ್ ಗೆ ಒಬ್ಬಳು ಸುಂದರಿ ಕೆಲಸಕ್ಕೆಂದು ಸೇರಿಕೊಳ್ಳುತ್ತಾಳೆ. ಅರಸಯ್ಯಗೆ ಅವಳ ಮೇಲೆ ಪ್ರೀತಿ ಆಗುತ್ತದೆ. ಆದರೆ ಕರ್ರಗೆ, ಕುಳ್ಳಗೆ, ದುಂಡಗೆ ಗುಂಡನಂತಿದ್ದ ಕಿವುಡ ಅರಸಯ್ಯಗೆ ಅವಳು ಒಲಿಯುವಳೇ ಎನ್ನುವುದಕ್ಕೆ ಅರ್ಥ ಕಥೆ ಮುಗಿಯುತ್ತದೆ.
ರಾಜ್ ಕಮಲ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮೇಘಶ್ರೀ ರಾಜೇಶ್ ನಿರ್ಮಾಣದ, ಜೆ.ವಿ.ಆರ್. ದೀಪು ನಿರ್ದೇಶನದ ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ “ಫ್ರೆಂಚ್ ಬಿರಿಯಾನಿ” ಖ್ಯಾತಿಯ ಮಹಾಂತೇಶ್ ಹಿರೇಮಠ, ನಾಯಕಿ ನಟಿಯಾಗಿ ರಶ್ಮಿತ ಗೌಡ ಅಭಿನಯಿಸಿದ್ದಾರೆ. ಸಿನಿಮಾದ ಉದ್ದಕ್ಕೂ ಪ್ರಧಾನ ಪೋಷಕ ಪಾತ್ರದಲ್ಲಿ ಬಸಲಿಂಗಯ್ಯನಾಗಿ ಪಿ.ಡಿ.ಸತೀಶ್ ಅಭಿನಯಿಸಿದ “ಅರಸಯ್ಯನ ಪ್ರೇಮ ಪ್ರಸಂಗ”ದಲ್ಲಿ ಸಂಗೀತ ಪ್ರವೀಣ್ ಬಿ.ವಿ. ಮತ್ತು ಪ್ರದೀಪ್ ಬಿ.ವಿ. ಅವರದ್ದಾಗಿದೆ.
ಡಾಕ್ಟರ್ ರನ್ನು ನಂಬದ ಜನ ಊರಿನ ಜ್ಯೋತಿಷ್ಯರನ್ನು ನಂಬೋತರ ಜ್ಯೋತಿಷ್ಯರೇ ಜಾತಕ ಸರಿ ಇಲ್ಲ ಎಂದಾಗ ಮದುವೆಗೆ ಬಂದ ಸಂಬಂಧ ಮುರಿಯೋ ಹಂತಕ್ಕೆ ಬರುತ್ತದೆ.
ಹಠಕ್ಕೆ ಬಿದ್ದ ಅರಸಯ್ಯ ಮದ್ವೆ ಆಗ್ತಾನಾ? ಅಥ್ವಾ ಜಾತಕ ನಂಬಿ ತಂದೆಗೆ ಬರೋ ಸಾವು ತಪ್ಪಿಸ್ತಾನಾ? ಪೋಸ್ಟ್ ಹುಡುಗಿ ಕಥೆ ಏನಾಯ್ತು? ಅಜ್ಜಿ ಕೇಳ್ತಾ ಇದ್ದ ರೇಡಿಯೋ ಏನಾಯ್ತು? ಇದೆಲ್ಲದಕ್ಕೆ ಉತ್ತರ ಸಿಗ್ಬೇಕಾದ್ರೆ ನೀವು ಸಿನಿಮಾ ನೋಡಲೇ ಬೇಕು. ಅದ್ಭುತ ಹಾಸ್ಯ, ಉತ್ತಮ ಹಾಡುಗಳು, ಹಳ್ಳಿ ಜೀವನ, ಪಂಚ್ ಡೈಲಾಗ್ ಗಳು ಸಿನಿಮಾಗೆ ಇನ್ನಷ್ಟು ಮಜಾ ಕೊಡುತ್ತದೆ. ಪ್ರತಿಯೊಬ್ಬರೂ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದು ಮೊದಲ ದಿನವೇ ಸಿನಿಮಾ ಹೌಸ್ ಫುಲ್ ಕಂಡಿದೆ. ಈ ಸಿನಿಮಾ ಪಿಆರ್ ಒ ಆಗಿ ಸುಧೀಂದ್ರ ವೆಂಕಟೇಶ್ ಕೆಲಸ ನಿರ್ವಹಿಸಿದ್ದಾರೆ.
ಶರಣ್ಯ ಕೋಲ್ಚಾರ್, ಸುಳ್ಯ ತಾಲ್ಲೂಕು
ಇದನ್ನು ಓದಿ: