Back To Top

 ನೇಪಾಳ ಮಾಜಿ ಪ್ರಧಾನಿ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಪತ್ನಿ ಮೃತ್ಯು
September 10, 2025

ನೇಪಾಳ ಮಾಜಿ ಪ್ರಧಾನಿ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಪತ್ನಿ ಮೃತ್ಯು

ದಲ್ಲುವಿನಲ್ಲಿನ ಮಾಜಿ ಪ್ರಧಾನಿ ಜಲನಾಥ್ ನಿವಾಸಕ್ಕೆ ಬೆಂಕಿ ಹಚ್ಚಿದಾಗ ಅವರ ಪತ್ನಿ ರಬಿ ಲಕ್ಷ್ಮಿ ಚಿತ್ರಾಕರ್ ಸುಟ್ಟ ಗಾಯಗಳಿಂದ ಗಂಭೀರವಾಗಿದ್ದರು. ಕೀರ್ತಿಪುರ ಬರ್ನ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ̤

ಕಠ್ಮಂಡು: ಸಾಮಾಜಿಕ ಜಾಲತಾಣ ಬ್ಯಾನ್ ಮಾಡಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ನಾಗರೀಕರು ನೇಪಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ ತೊಡಗಿದ್ದಾರೆ. ಸಾಕಷ್ಟು ಗಲಭೆಗಳ ನಂತರ ಮಾಜಿ ಪ್ರಧಾನಿ ಜಲನಾಥ್ ಖಾನಲ್ ಅವರ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದರಿಂದ ಅವರ ಪತ್ನಿ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ದಲ್ಲುವಿನಲ್ಲಿನ ನೇಪಾಳ nepala ಮಾಜಿ ಪ್ರಧಾನಿ ಜಲನಾಥ್ ನಿವಾಸಕ್ಕೆ ಬೆಂಕಿ ಹಚ್ಚಿದಾಗ ಅವರ ಪತ್ನಿ ರಬಿ ಲಕ್ಷ್ಮಿ ಚಿತ್ರಾಕರ್ ಸುಟ್ಟ ಗಾಯಗಳಿಂದ ಗಂಭೀರವಾಗಿದ್ದರು. ಅವರನ್ನು ಕೀರ್ತಿಪುರ ಬರ್ನ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿರುವ ಬಗ್ಗೆ ವರದಿಯಾಗಿದೆ.
ಸಾಮಾಜಿಕ ಮಾಧ್ಯಮ Nepal Banned 26 Social Media Platforms ಮೇಲಿನ ನಿಷೇಧವನ್ನು ತೆರವುಗೊಳಿಸಿರುವುದಾಗಿ ಸರಕಾರ ಘೋಷಿಸಿದರೂ ನೇಪಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆ ಮುಂದುವರಿದಿತ್ತು. ಇದರಿಂದಾಗಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಕೂಡ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸದ್ಯ ನೇಪಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ರಾಜಕೀಯ ಪ್ರಕ್ಷುಬ್ಧತೆಯ ನಡುವೆ, ದುಷ್ಕರ್ಮಿಗಳು ಮನೆಯನ್ನ ಧ್ವಂಸಗೊಳಿಸಿದ್ದಲ್ಲದೆ, ಬೆಂಕಿ ಹಚ್ಚಿದ್ದರು. ಸಾಮಾಜಿಕ ಜಾಲತಾಣಗಳನ್ನು ಬ್ಯಾನ್ ಮಾಡಿರುವ ಹಿನ್ನೆಲೆ ರೊಚ್ಚಿಗೆದ್ದಿರುವ ಜನ ಇಂತಹ ಪಾಪ ಕೃತ್ಯಕ್ಕೆ ತೊಡಗಿದ್ದು ಸಾಕಷ್ಟು ಸಾವು ನೋವು ಸಂಭವಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಓದಿ:

Prev Post

ಶಿಕ್ಷಕ ಹುದ್ದೆ ಬಡ್ತಿಗೆ ಅರ್ಹತಾ ಪರೀಕ್ಷೆ (TET) ಕಡ್ಡಾಯ

Next Post

ಆಂಟಿ ಮೋಹಕ್ಕೆ ಬಿದ್ದ ಪತಿ, ಹೆಂಡತಿ ಮೇಲೆ ಕಾರು ಹತ್ತಿಸಿ ಕೊಲೆ

post-bars

Leave a Comment

Related post