Back To Top

 ಆಂಟಿ ಮೋಹಕ್ಕೆ ಬಿದ್ದ ಪತಿ, ಹೆಂಡತಿ ಮೇಲೆ ಕಾರು ಹತ್ತಿಸಿ ಕೊಲೆ
September 10, 2025

ಆಂಟಿ ಮೋಹಕ್ಕೆ ಬಿದ್ದ ಪತಿ, ಹೆಂಡತಿ ಮೇಲೆ ಕಾರು ಹತ್ತಿಸಿ ಕೊಲೆ

ಪತ್ನಿ ಗರ್ಭಿಣಿ pregnant wife ಯಾಗಿದ್ದರೂ ಈತನಿಗೆ ಬುದ್ದಿ ಬಂದಿರಲಿಲ್ಲ. ಪ್ರೀತಿಸಿ ಮದ್ವೆ ಆದ ಪ್ರದೀಪ್ ಆಂಟಿ ಮೋಹಕ್ಕೆ ಬಿದ್ದು ರಾಕ್ಷಸೀಯ ಕೃತ್ಯ ಎಸಗಿದ್ದಾನೆ. ಕಾರಿನಲ್ಲಿ ಟೆಸ್ಟ್ ಡ್ರೈವ್ ಗೆ ಅಂತ ಕರೆದುಕೊಂಡು ಹೋಗಿ ಕಾರು ಹತ್ತಿಸಿ ಕೊಲೆ ಮಾಡಿದ್ದಾನೆ.

ಬೆಳಗಾವಿ: ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾದ ಹೆಂಡತಿಯೊಂದಿಗೆ ಆರಂಭದಲ್ಲಿ ಚೆನ್ನಾಗಿದ್ದ ಜೀವನ. ಪಕ್ಕದ ಮನೆಯ ಪರ ಸ್ತ್ರೀ ಜೊತೆಗೆ ಸಂಬಂಧ ಹೊಂದಿದ ಗಂಡ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗರ್ಭಿಣಿ ಪತ್ನಿ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿದ್ದಾನೆ.
ಸದ್ಯ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಹೂಗಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪತ್ನಿ ಗರ್ಭಿಣಿ pregnant wife ಯಾಗಿದ್ದರೂ ಈತನಿಗೆ ಬುದ್ದಿ ಬಂದಿರಲಿಲ್ಲ. ಪ್ರೀತಿಸಿ ಮದ್ವೆ ಆದ ಪ್ರದೀಪ್ ಆಂಟಿ ಮೋಹಕ್ಕೆ ಬಿದ್ದು ರಾಕ್ಷಸೀಯ ಕೃತ್ಯ ಎಸಗಿದ್ದಾನೆ. ಕಾರಿನಲ್ಲಿ ಟೆಸ್ಟ್ ಡ್ರೈವ್ ಗೆ ಅಂತ ಕರೆದುಕೊಂಡು ಹೋಗಿ ಕಾರು ಹತ್ತಿಸಿ ಕೊಲೆ ಮಾಡಿದ್ದಾನೆ.
ಪಕ್ಕದ ಮನೆಯ ಆಂಟಿ ಮೋಹಕ್ಕೆ ಬಿದ್ದ, ಪ್ರದೀಪ್ ತುಂಬು ಗರ್ಭಿಣಿ ಹೆಂಡತಿಗೆ ರಾಡ್ನಿಂದ ಹೊಡೆದು ಕೊಂದಿದ್ದಾನೆ. ಕೊಲೆಯನ್ನು ಅಪಘಾತ ಎಂದು ಬಿಂಬಿಸಲು ಹೊರಟ ಆತ ಹೆಂಡತಿ ಮೇಲೆ ಕಾರು car ಹತ್ತಿಸಿ ನಂತರ ಅಪಘಾತವಾಗಿದೆ ಎಂದು ಕತೆ ಕಟ್ಟಿದ್ದನು.
ಶವ ಪರೀಕ್ಷೆಯಲ್ಲಿ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಕಥೆ ಬಯಲಿಗೆ ಬಂದಿದೆ. ಸದ್ಯ ಪಾಪಿ ಗಂಡ ಜೈಲು ಸೇರಿದರೆ ಅಮಾಯಕ ಹೆಂಡತಿ ಮಸಣ ಸೇರಿದ್ದಾಳೆ.

ಇದನ್ನು ಓದಿ:

Prev Post

ನೇಪಾಳ ಮಾಜಿ ಪ್ರಧಾನಿ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಪತ್ನಿ ಮೃತ್ಯು

Next Post

ಮಂಡ್ಯದಲ್ಲಿ ಹಿಂದೂ- ಮುಸ್ಲಿಂ ಗಲಾಟೆ ತಾರಕಕ್ಕೆ: ಲಾಠಿ ಚಾರ್ಜ್, ವ್ಯಾಪಕ ಪ್ರತಿಭಟನೆ

post-bars

Leave a Comment

Related post