Back To Top

 ರಾಜ್ಯದ ಡಿಸಿಎಂ ದೇಶದಲ್ಲಿ ಎರಡನೇ ಶ್ರೀಮಂತ ಸಚಿವರಂತೆ!!!
September 5, 2025

ರಾಜ್ಯದ ಡಿಸಿಎಂ ದೇಶದಲ್ಲಿ ಎರಡನೇ ಶ್ರೀಮಂತ ಸಚಿವರಂತೆ!!!

ರಾಜ್ಯದಲ್ಲಿ ಪ್ರಥಮ ದೇಶದಲ್ಲಿ ಎರಡನೇ ಅತ್ಯಂತ ಶ್ರೀಮಂತ ಸಚಿವರಾಗಿ ಡಿ.ಕೆ. ಶಿವಕುಮಾರ್ ಹೊರ ಹೊಮ್ಮಿದ್ದಾರೆ.

ನವದೆಹಲಿ: ರಾಜ್ಯದ ಡಿಸಿಎಂ ಡಿ.ಕೆ. ಶಿವಕುಮಾರ್ dk shivakumar ಅವರು ದೇಶದ ಎರಡನೇ ಶ್ರೀಮಂತ ಸಚಿವ ̄̄̄̄richest ministerಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಹೇಳಿದೆ.
ಕರ್ನಾಟಕದಲ್ಲಿ ನೂರು ಕೋಟಿಗಿಂತ ಹೆಚ್ಚು ಆಸ್ತಿ ಇರುವ ಎಂಟು ಸಚಿವರು ಇದ್ದಾರೆ. ಆಂಧ್ರ ಪ್ರದೇಶವು ನಂತರದ ಸ್ಥಾನದಲ್ಲಿದೆ.
ಆದರೆ ರಾಜ್ಯದಲ್ಲಿ ಪ್ರಥಮ ದೇಶದಲ್ಲಿ ಎರಡನೇ ಅತ್ಯಂತ ಶ್ರೀಮಂತ ಸಚಿವರಾಗಿ ಡಿ.ಕೆ. ಶಿವಕುಮಾರ್ ಹೊರ ಹೊಮ್ಮಿದ್ದಾರೆ.

ಡಿಕೆ ಶಿವಕುಮಾರ್ ಸೇರಿದಂತೆ ಶ್ರೀಮಂತ ರಾಜಕಾರಣಿಗಳ ಆಸ್ತಿಮೌಲ್ಯ

ಚಂದ್ರಶೇಖರ ಪೆಮ್ಮಸಾನಿ (ಕೇಂದ್ರ ಸಚಿವ-ಟಿಡಿಪಿ) – 5,705 ಕೋಟಿ ರೂ
ಡಿಕೆ ಶಿವಕುಮಾರ್ (ಕಾಂಗ್ರೆಸ್)- 1,413 ಕೋಟಿ. ರೂ
ಚಂದ್ರಬಾಬು ನಾಯ್ಡು (ಟಿಡಿಪಿ)- 971 ಕೋಟಿ.ರೂ
ನಾರಾಯಣ ಪೊಂಗೂರು (ಟಿಡಿಪಿ)- 824 ಕೋಟಿ ರೂ
ಸುರೇಶ್ ಬಿ.ಎಸ್( ಕಾಂಗ್ರೆಸ್)- 648 ಕೋಟಿ ರೂ
ರಾಜ್ಯ ವಿಧಾನಸಭೆಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವರು ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಪ್ರಮಾಣಪತ್ರಗಳನ್ನು ವಿಶ್ಲೇಷಿಸಿ ಎಡಿಆರ್ ವರದಿ ಬಿಡುಗಡೆ ಮಾಡಿದೆ.
27 ವಿಧಾನಸಭೆಗಳು, 3 ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರದ 652 ಸಚಿವರ ಪೈಕಿ 643 ಸಚಿವರು ಸಲ್ಲಿಸಿರುವ ಪ್ರಮಾಣಪತ್ರಗಳನ್ನು ವಿಶ್ಲೇಷಿಸಲಾಗಿದೆ.ದೇಶದ ಅತ್ಯಂತ ಶ್ರೀಮಂತ ಮಂತ್ರಿ ಎಂದರೆ ಟಿಡಿಪಿ ಪಕ್ಷದ ಡಾ. ಚಂದ್ರಶೇಖರ್ ಪೆಮ್ಮಸಾನಿ. ಅವರು ಆಂಧ್ರ ಪ್ರದೇಶದ ಗುಂಟೂರು ಲೋಕಸಭಾ ಕ್ಷೇತ್ರದ ಸದಸ್ಯರು. ಅವರು 5,705 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.
643 ಸಚಿವರ ಪೈಕಿ 302 ಮಂದಿ (ಶೇ 47) ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿವೆ.
174 ಸಚಿವರ ವಿರುದ್ಧ (ಶೇ 27) ಗಂಭೀರ ಅಪರಾಧ ಪ್ರಕರಣಗಳಿವೆ. ಈ ಸಚಿವರು ಕೊಲೆ, ಕೊಲೆಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧಗಳು ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಸಚಿವ ಸಂಪುಟದ 72ರಲ್ಲಿ 29(ಶೇ 40) ಮಂದಿ ವಿರುದ್ಧ ಪ್ರಕರಣಗಳಿವೆ ಎಂದು ತಿಳಿದುಬಂದಿದೆ.

ಇದನ್ನು ಓದಿ:

Prev Post

ದರ್ಶನ್ ವಿಚಾರಣೆ ವೇಳೆ ಕೋರ್ಟಿಗೆ ಅರ್ಜಿ ಹಿಡಿದು ಬಂದ ಅಪರಿಚಿತ

Next Post

ಧರ್ಮಸ್ಥಳ ವಿವಾದ: ಕ್ಲೀನ್‌ಚಿಟ್‌ ಪಡೆದಿದ್ದ ಆರೋಪಿಗಳಿಗೆ ಎಸ್ಐಟಿಯಿಂದ ತನಿಖೆ

post-bars

Leave a Comment

Related post