ವರದಕ್ಷಿಣೆ ಕಿರುಕುಳ: ಪತ್ನಿಯ ಮಾನ ಹರಾಜು ಮಾಡಿದ ಪತಿ
ಪತಿಯೊಬ್ಬ ತನ್ನ ಪತ್ನಿಯ ವಾಟ್ಸಾಪ್ ಗ್ರೂಪ್ whatsup groupಗಳಲ್ಲಿ ಖಾಸಗಿ ಫೋಟೋ ವೈರಲ್ photo viralಮಾಡಿ ಕಿರುಕುಳ ನೀಡಿದ್ದಾನೆ. ಪತಿ ವಂದೇಮಾತರಂ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ police station ಪತ್ನಿ ದೂರು case ನೀಡಿದ್ದಾರೆ.
ಬೆಂಗಳೂರು: ವರದಕ್ಷಿಣೆ dowry ಕಿರುಕುಳ ಪ್ರಕರಣಗಳು ಅತಿ ಹೆಚ್ಚಾಗುತ್ತಿದ್ದು ಕೆಲವು ಕೊಲೆಯಲ್ಲಿ ಅಂತ್ಯವಾದರೆ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 4 ಕೋಟಿ ರೂಪಾಯಿ ವರದಕ್ಷಿಣೆ ಕೊಡದಿದ್ದಕ್ಕೆ ಬೆಂಗಳೂರಿನ ಪತಿಯೊಬ್ಬ ತನ್ನ ಪತ್ನಿಯ ವಾಟ್ಸಾಪ್ ಗ್ರೂಪ್ whatsup groupಗಳಲ್ಲಿ ಖಾಸಗಿ ಫೋಟೋ ವೈರಲ್ photo viralಮಾಡಿ ಕಿರುಕುಳ ನೀಡಿದ್ದಾನೆ. ಪತಿ ವಂದೇಮಾತರಂ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ police station ಪತ್ನಿ ದೂರು case ನೀಡಿದ್ದಾರೆ.
ಪಶ್ಚಿಮ ವಿಭಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಇದೀಗ ಪತ್ನಿಯ ದೂರು ಆಧರಿಸಿ ಪತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಬೆಂಗಳೂರಿನಲ್ಲಿ ರಾಜಸ್ಥಾನದ ಬಲೋತ್ರ ಜಿಲ್ಲೆಯ ದಂಪತಿ ವಾಸವಾಗಿದ್ದಾರೆ. ಸ್ವಂತ ಬಿಜಿನೆಸ್ ಮಾಡಲು 4 ಕೋಟಿ ರೂಪಾಯಿ ವರದಕ್ಷಿಣೆಗಾಗಿ ವಂದೇ ಮಾತರಂ ತನ್ನ ಪತ್ನಿಯ ಬಳಿ ಬೇಡಿಕೆ ಇಟ್ಟಿದ್ದಾನೆ. ಹಣ ತರದಿದಕ್ಕೆ ವಾಟ್ಸಾಪ್ ಗ್ರೂಪ್ ಗಳಲ್ಲಿ ತನ್ನ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ್ದಾನೆ.
ಈ ವಿಚಾರವನ್ನು ಸಂಬಂಧಿಕರು ಸಂತ್ರಸ್ಥೆಗೆ ತಿಳಿಸಿದ್ದಾರೆ. ವಿಚಾರ ಗೊತ್ತಾಗಿ ಪತಿಯನ್ನು ವಿಚಾರಿಸಿದಾಗ ಆಕೆಯ ಮೇಲೆ ಪತಿ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಒಟ್ಟಾರೆಯಾಗಿ ಪತಿಯೇ ಹಣಕ್ಕಾಗಿ ಪತ್ನಿಯ ಮಾನ ಹರಾಜು ಮಾಡಿದ್ದಾನೆ.
ಇದನ್ನು ಓದಿ: