ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ತಾಯಿ ಮಗು ಆತ್ಮಹತ್ಯೆ
32 ವರ್ಷದ ಶಾಲಾ ಉಪನ್ಯಾಸಕಿ ಮನೆಗೆ ಹಿಂತಿರುಗಿ, ಒಳಗಿನಿಂದ ಬಾಗಿಲು ಲಾಕ್ ಮಾಡಿ, ಕುರ್ಚಿ ಮೇಲೆ ಕುಳಿತು, ತನ್ನ ಮತ್ತು ತನ್ನ ಮಗಳ ಮೇಲೆ ಪೆಟ್ರೋಲ್ petrol ಸುರಿದುಕೊಂಡು, ಬೆಂಕಿ ಹಚ್ಚಿಕೊಂಡಿದ್ದಾರೆ.
ರಾಜಸ್ಥಾನ: ಸಮಾಜ ಎಷ್ಟೇ ಮುಂದುವರಿದರೂ ವರದಕ್ಷಿಣೆ dowry case ಪಿಡುಗು ಇನ್ನೂ ಕೂಡ ಸಮಾಜದ ಕುಟುಂಬಗಳಲ್ಲಿ ಸಾಕಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದೆ. ಜೋಧ್ಪುರದಲ್ಲಿ ವರದಕ್ಷಿಣೆ ಕಿರುಕುಳದಿಂದ ತಾಯಿ ಮಗಳೊಂದಿಗೆ ಆತ್ಮಹತ್ಯೆ susaide ಮಾಡಿ ಸಾವನ್ನಪ್ಪಿದ ಘಟನೆ ನಡೆದಿದೆ. ಶಾಲಾ ಉಪನ್ಯಾಸಕಿಯೊಬ್ಬರು ಶುಕ್ರವಾರ ತನ್ನ ಮೂರು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಕ್ಷಿಣೆಗೆ ಪತಿ ದಿಲೀಪ್ ಮತ್ತು ಅತ್ತೆ ಮಾವ ಕಿರುಕುಳ ನೀಡುತ್ತಿದ್ದಾರೆ ಮಹಿಳೆdeath note ಡೆತ್ ನೋಟ್ ಬರೆದಿಟ್ಟಿದ್ದಾರೆ. ದಂಗಿಯಾವಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಕೆಲಾವ್ನಲ್ಲಿರುವ ಸರ್ನಾದ ಕಿ ಧನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 32 ವರ್ಷದ ಶಾಲಾ ಉಪನ್ಯಾಸಕಿ ಮನೆಗೆ ಹಿಂತಿರುಗಿ, ಒಳಗಿನಿಂದ ಬಾಗಿಲು ಲಾಕ್ ಮಾಡಿ, ಕುರ್ಚಿ ಮೇಲೆ ಕುಳಿತು, ತನ್ನ ಮತ್ತು ತನ್ನ ಮಗಳ ಮೇಲೆ ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡಿದ್ದಾರೆ. ಈ ವೇಳೆ ಆಕೆಯ ಪತಿ ಅಥವಾ ಅತ್ತೆ-ಮಾವ ಇಬ್ಬರೂ ಮನೆಯಲ್ಲಿ ಇರಲಿಲ್ಲ. ಮೂರು ವರ್ಷದ ಮಗು ನೆಲಕ್ಕೆ ಬಿದ್ದು ತೀವ್ರ ಸುಟ್ಟಗಾಯಗಳಿಂದಾಗಿ ತಕ್ಷಣವೇ ಸಾವನ್ನಪ್ಪಿತು.
ಮನೆಯಿಂದ ಹೊಗೆ ಬರುತ್ತಿರುವುದನ್ನು ನೋಡಿದ ನೆರೆಹೊರೆಯವರು ಮಹಿಳೆಯ ಕುಟುಂಬ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರು ಮನೆಗೆ ಬಂದು ನೋಡಿದಾಗ ಅವರ ಮಗಳು ಮತ್ತು ಮೊಮ್ಮಗ ಬೆಂಕಿಯಲ್ಲಿ ಸುಟ್ಟು ಹೋಗಿರುವುದನ್ನು ಬೆಳಕಿಗೆ ಬಂದಿದೆ.
ಉಪನ್ಯಾಸಕಿಯನ್ನು ಮಹಾತ್ಮ ಗಾಂಧಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು. ಸದ್ಯ ಮೃತ ಮಹಿಳೆ ತಂದೆ ಒಮಾರಾಮ್ ಬಿಷ್ಣೋಯ್ ಅವರು ಅತ್ತೆ-ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಪೋಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನು ಓದಿ: