Back To Top

 ಸವತಿ ಮಗಳ ಮೇಲೆ ಮಲತಾಯಿ ಕೆಸರು ಗದ್ದೆಯಲ್ಲೇ ದಾಳಿ
August 26, 2025

ಸವತಿ ಮಗಳ ಮೇಲೆ ಮಲತಾಯಿ ಕೆಸರು ಗದ್ದೆಯಲ್ಲೇ ದಾಳಿ

ಮಲ್ಲಿಗೆರೆ ಗ್ರಾಮದಲ್ಲಿ ಸವತಿ ಮಗಳನ್ನು ಜಮೀನನಲ್ಲಿ ಕೆಡವಿ ಎದೆ ಮೇಲೆ ಕುಳಿತು‌ ಹಲ್ಲೆ ನಡೆಸಿ ಮಲತಾಯಿ ಬೆದರಿಕೆ ಹಾಕಿರುವಂತ ಘಟನೆ ನಡೆದಿದೆ.

ಮಂಡ್ಯ: ಸವತಿ ಮಗಳ ಮೇಲೆ ಮಲತಾಯಿ ಧೋರಣೆ ಅನಾದಿಕಾಲದಿಂದಲೂ ಫೇಮಸ್. ಆದರೆ ಅದನ್ನು ಈ ಕಾಲದಲ್ಲೂ ನಿಜವಾಗಿಸಿದ ಘಟನೆಯೊಂದು ಮಂಡ್ಯದ ಮದ್ದೂರಿನಲ್ಲಿ ನಡೆದಿದೆ. ಕುಟುಂಬದಲ್ಲಿನ ಆಸ್ತಿ ಕಲಹ ಸವತಿ ಮಗಳ ಮೇಲೆ ಮಲತಾಯಿ ಅಟ್ಯಾಕ್ attack ಮಾಡಿದ್ದಾಳೆ. ಇದೀಗ ಸವತಿ ಮಗಳ ಮೇಲೆ ಮಲತಾಯಿ ಕೆಸರು ಗದ್ದೆಯಲ್ಲೇ ದಾಳಿ ನಡೆಸಿರುವಂತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಲ್ಲಿಗೆರೆ ಗ್ರಾಮದಲ್ಲಿ ಸವತಿ ಮಗಳನ್ನು ಜಮೀನನಲ್ಲಿ ಕೆಡವಿ ಎದೆ ಮೇಲೆ ಕುಳಿತು‌ ಹಲ್ಲೆ ನಡೆಸಿ ಮಲತಾಯಿ ಬೆದರಿಕೆ ಹಾಕಿರುವಂತ ಘಟನೆ ನಡೆದಿದೆ.
ಜಮೀನಿನ ಜಾಗದಲ್ಲಿ ವಿಚಾರದಲ್ಲಿ ಮಲಮಗಳ ರೋಜಾ ಮೇಲೆ ಜೊತೆ ಕದನಕ್ಕಿಳಿದ second mother ಮಲತಾಯಿ. ಮೊದಲನೆ ಹೆಂಡತಿ ಮಗಳಾದ ರೋಜಾಳನ್ನು ಕೆಸರಿನ ಜಮೀನಲ್ಲಿ ಕೆಳಕ್ಕೆ ಕೆಡವಿ ಮಲತಾಯಿ ಭಾಗ್ಯ ಹಲ್ಲೆ ಮಾಡಿದ್ದಾರೆ.
ಹಲ್ಲೆಯ ವೇಳೆ ಮಗಳು ಕಿರುಚಾಡಿದರು ಮಲತಾಯಿಯ ಮನಸ್ಸು ಮಾತ್ರ ಕರಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಜಡೆ ಜಗಳದ ವೀಡಿಯೋ ವೈರಲ್ ಆಗಿದೆ. ಈ ಸಂಬಂಧ ಹಲ್ಲೆಗೊಳದ ಮಗಳಿಂದ ಮಲತಾಯಿ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪಿತ್ರಾರ್ಜಿತ ಆಸ್ತಿಯಲ್ಲಿ ಎಲ್ಲಾ ಮಕ್ಕಳಿಗೂ ಪಾಲಿದ್ದು‌ ಮೊದಲ ಮಗಳಿಗೆ ಆಸ್ತಿ ನೀಡಲ್ಲ ಎನ್ನುವ ಕಾರಣಕ್ಕೆ ಯುವತಿ ಮೇಲೆ ಮಲ ತಾಯಿ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಓದಿ:

Prev Post

“ಯಕ್ಷಕಲಾ ಸಂಪನ್ನ”yakshakala sampanna

Next Post

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ತಾಯಿ ಮಗು ಆತ್ಮಹತ್ಯೆ

post-bars

Leave a Comment

Related post