ಮಹಿಳೆಯನ್ನು ಹತ್ಯೆಗೈದು ಕಾರು ಕೆರೆಗೆ ಬಿದ್ದ ಕಥೆ ಕಟ್ಟಿದ ವ್ಯಕ್ತಿ
ಪ್ರೀತಿ ನಿರಾಕರಿಸಿದಕ್ಕೆ ವಿವಾಹಿತ ಮಹಿಳೆಯನ್ನು ಕೊಲೆ ಮಾಡಿರುವಂತ ಆರೋಪ ಕೇಳಿ ಬಂದಿದೆ. ಸಿನಿಮೀಯ ರೀತಿಯಲ್ಲಿ ಕಾರು ಕೆರೆಗೆ ತಳ್ಳಿ ಮಹಿಳೆ ಹತ್ಯೆ women murder ಗೈಯ್ಯಲಾಗಿದೆ.
ಹಾಸನ: ಪ್ರತಿದಿನ ಅಪರಾಧ ಕೃತ್ಯಗಳು ವಿವಿಧ ರೀತಿಯಲ್ಲಿ ನಡೆಯುತ್ತಲೇ ಇದೆ. ಹಾಸನ ಜಿಲ್ಲೆಯ ಬೇಲೂರು belur ತಾಲೂಕಿನ ಚಂದನಹಳ್ಳಿ ಗ್ರಾಮದಲ್ಲಿ ಸಿನಿಮೀಯ ರೀತಿಯಲ್ಲಿ ಕಾರು ಕೆರೆಗೆ ತಳ್ಳಿ ಮಹಿಳೆಯನ್ನು ಹತ್ಯೆಗೈದು, ಕಿಡಿಗೇಡಿಗಳು ಕತೆ ಕಟ್ಟಿದ ಪ್ರಕರಣ ಒಂದು ಬೆಳಕಿಗೆ ಬಂದಿದೆ.
ಪ್ರೀತಿ ನಿರಾಕರಿಸಿದಕ್ಕೆ ವಿವಾಹಿತ ಮಹಿಳೆಯನ್ನು ಕೊಲೆ ಮಾಡಿರುವಂತ ಆರೋಪ ಕೇಳಿ ಬಂದಿದೆ. ಸಿನಿಮೀಯ ರೀತಿಯಲ್ಲಿ ಕಾರು ಕೆರೆಗೆ ತಳ್ಳಿ ಮಹಿಳೆ ಹತ್ಯೆಗೈಯ್ಯಲಾಗಿದೆ.
ಚಂದನಹಳ್ಳಿ ಸಮೀಪದ ಬೇಲೂರಿನ ಶ್ವೇತಾ(32) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಗಂಡನಿಂದ ದೂರಾಗಿದ್ದ ಶ್ವೇತಾ ತವರು ಮನೆ ಹಾಸನದಲ್ಲಿ ಕೆಲಸ ಮಾಡುವಾಗ ರವಿ ಎಂಬಾತ ಪರಿಚಯವಾಗಿದ್ದನು. ಪರಿಚಯ ಸ್ನೇಹವಾಗಿ ನಂತರ ಪ್ರೀತಿಗೆ love ತಿರುಗಿದ್ದು ನಾನು ಪತ್ನಿ ಬಿಟ್ಟು ಬರ್ತೀನಿ, ನೀನು ಬಾ ಎಂದು ರವಿ ಎಂಬಾತ ಶ್ವೇತಾಗೆ ಪೀಡಿಸಿದ್ದನಂತೆ. ಆದರೆ ಶ್ವೇತಾ ರವಿ ಪ್ರಸ್ತಾಪ ನಿರಾಕರಿಸಿದ್ದಳು. ಇದೇ ಕಾರಣಕ್ಕೆ ರವಿ ಶ್ವೇತಾಳನ್ನು ಹತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ.
ನಿನ್ನೆ ಹಾಸನದಿಂದ hasan ]ತನ್ನ ಕಾರಿನಲ್ಲಿ ಶ್ವೇತಾಳನ್ನು ರವಿ ಕರೆತಂದಿದ್ದನು. ಆದರೇ ಚಂದನಹಳ್ಳಿ ಕೆರೆಗೆ ಕಾರು ಬೀಳಿಸಿದ ಕತೆಯನ್ನು ಆರೋಪಿ ರವಿ ಕಟ್ಟಿದ್ದು ಆತನೇ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸಲಾಗಿದೆ.
ಇದನ್ನು ಓದಿ: