ವರದಕ್ಷಿಣೆ ಕಿರುಕುಳ ಆರೋಪ: ಮದುವೆಯಾದ ಒಂದು ವರುಷಕ್ಕೆ ಪತ್ನಿ ಸಾವು, ಕೊಲೆ ಶಂಕೆ
ನೇಣು ಬಿಗಿದ ರೀತಿಯಲ್ಲಿ ಸುಶ್ಮಿತಾ ಮೃತದೇಹ ಪತ್ತೆಯಾಗಿದ್ದು, ಆಕೆಯ ಪತಿ ಮೋಹನ್, ಆತನ ತಂದೆ-ತಾಯಿ ಮತ್ತು ಮಾವ ನಟರಾಜು ಕೊಲೆ ಮಾಡಿ, ಶವವನ್ನು ನೇಣು ಬಿಗಿದ ಸ್ಥಿತಿಯಲ್ಲಿ ಇರಿಸಿದ್ದಾರೆ ಎಂದು ಆರೋಪ.
ತುಮಕೂರು: ಹೆಂಡತಿ ಕಡೆಯಿಂದ ವರದಕ್ಷಿಣೆ ಎಂದು ಸೈಟ್ (Site) ಕೊಟ್ಟಿಲ್ಲ, ಮಕ್ಕಳು ಆಗಿಲ್ಲ ಎಂದು ಹೆಂಡತಿಗೆ ನಿರಂತರ ಹಿಂಸೆ ನೀಡುತ್ತಿದ್ದ ಗಂಡ (Husband Kills Wife) ಮತ್ತು ಗಂಡನ ಮನೆಯವರ ಹಿಂಸೆ ತಾಳಲಾಗದೆ ಮದುವೆಯಾಗಿ ಕೇವಲ ಒಂದೂವರೆ ವರ್ಷಕ್ಕೆ ಸುಶ್ಮಿತಾ ಸಾವನ್ನಪ್ಪಿದ್ದಾರೆ.
ತುಮಕೂರು ನಗರದ ಎಸ್‌ಎಸ್ ಪುರಂನ ಮೂರನೇ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ. ನೇಣು ಬಿಗಿದ ರೀತಿಯಲ್ಲಿ ಸುಶ್ಮಿತಾ ಮೃತದೇಹ ಪತ್ತೆಯಾಗಿದ್ದು, ಆಕೆಯ ಪತಿ ಮೋಹನ್, ಆತನ ತಂದೆ-ತಾಯಿ ಮತ್ತು ಮಾವ ನಟರಾಜು ಕೊಲೆ ಮಾಡಿ, ಶವವನ್ನು ನೇಣು ಬಿಗಿದ ಸ್ಥಿತಿಯಲ್ಲಿ ಇರಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಲಾಗಿದೆ.
ಕೇವಲ ಒಂದೂವರೆ ವರ್ಷಗಳ ಹಿಂದೆ ಮದುವೆಯಾದ ಸುಷ್ಮಿತಾ (23) ಎಂಬ ಯುವತಿಯನ್ನು ಕೊರಟಗೆರೆ ತಾಲೂಕಿನ ಪುಟ್ಟಸಂದ್ರ ಗ್ರಾಮದ ಮೋಹನ್ ಮದುವೆಯಾಗಿದ್ದ.
ಪ್ರತಿನಿತ್ಯ ಆಕೆಗೆ ಸೈಟ್‌ಗಾಗಿ ಮತ್ತು ಮಕ್ಕಳಾಗದಿದ್ದಕ್ಕೆ ಒತ್ತಡ ಹೇರಲಾಗಿತ್ತು ಎಂಬುದು ತಿಳಿದುಬಂದಿದೆ. ಇದೀಗ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಮಾಗಡಿಯ ಸುಷ್ಮಿತಾ 2024ರ ಆರಂಭದಲ್ಲಿ ಕೊರಟಗೆರೆ ತಾಲೂಕಿನ ಪುಟ್ಟಸಂದ್ರ ಗ್ರಾಮದ ಮೋಹನ್‌ನೊಂದಿಗೆ ವಿವಾಹವಾಗಿದ್ದರು. ಮಕ್ಕಳಾಗದಿರುವ ಕಾರಣಕ್ಕೆ ಸುಷ್ಮಿತಾರನ್ನು ನಿರಂತರವಾಗಿ ಹಿಂಸಿಸುತ್ತಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಹಿಂದೆ ಮೋಹನ್ ಸುಷ್ಮಿತಾರ ಮೇಲೆ ಹಲವಾರು ಬಾರಿ ದೈಹಿಕ ಹಲ್ಲೆ ನಡೆಸಿದ್ದಾನೆ ಎಂದು ಆರೋಪವಿದೆ. ಕುಟುಂಬದವರು ರಾಜಿ ಸಂಧಾನ ಮಾಡಿದರೂ, ಮೋಹನ್‌ನ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿರಲಿಲ್ಲ.
ನಿನ್ನೆ ಸಂಜೆ 4:48ಕ್ಕೆ ಸುಷ್ಮಿತಾ ತನ್ನ ತಾಯಿಗೆ ಕೊನೆ ಸಂದೇಶ ಕಳುಹಿಸಿದ್ದರು. ಅತ್ತೆ-ಮಾವ ಬಂದಿದ್ದಾರೆ, ಅವರು ಹೋದ ನಂತರ ಮಾತನಾಡುತ್ತೇನೆ ಎಂದು ಆಕೆ ಮೆಸೇಜ್ ಮಾಡಿ ತಿಳಿಸಿದ್ದರಂತೆ. ಅದಾದ ಕೆಲವೇ ಹೊತ್ತಲ್ಲಿ ಸುಶ್ಮಿತಾ ಶವವಾಗಿದ್ದಾಳೆ.
ಸಂಜೆ 5 ರಿಂದ 6 ಗಂಟೆಗೆ ಸುಮಾರಿಗೆ ಸುಷ್ಮಿತಾರ ಶವ ಎಸ್‌ಎಸ್ ಪುರಂನ ಮೂರನೇ ಕ್ರಾಸ್‌ನಲ್ಲಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಮಾಡಲಾಗಿದೆ. ಕುಟುಂಬದವರು ಇದು ಆತ್ಮಹತ್ಯೆಯಲ್ಲ, ಬದಲಿಗೆ ಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ. ತುಮಕೂರು ಎಸ್‌ಎಸ್ ಪುರಂ ಪೊಲೀಸ್ ಠಾಣೆಯಲ್ಲಿ ಮೋಹನ್, ಆತನ ತಂದೆ-ತಾಯಿ ಮತ್ತು ಮಾವ ನಟರಾಜು ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಶವದ ಮರಣೋತ್ತರ ತನಿಖೆಯಲ್ಲಿ ಸುಷ್ಮಿತಾರ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ತಿಳಿಯಬೇಕಾಗಿದ್ದು ತನಿಖೆ ತೀವ್ರವಾಗಿ ನಡೆಸಲಾಗುತ್ತಿದೆ. ಮಗಳು ಸಾವಿಗೆ ನ್ಯಾಯ ಕೋರಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: