ಸು ಫ್ರಮ್ ಸೋ’ (Su From So) ಸಿನಿಮಾ 100 ಕೋಟಿ ಕಲೆಕ್ಷನ್
ಸು ಫ್ರಮ್ ಸೋ’ ಸಿನಿಮಾ ಅದ್ಭುತ ಕಲೆಕ್ಷನ್ (Su From So Box Office Collection) ಮಾಡಿದೆ. sacnilk ವರದಿ ಪ್ರಕಾರ, ವಿಶ್ವಾದ್ಯಂತ ಈ ಚಿತ್ರಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಸಿನಿಮಾ ಮುನ್ನುಗ್ಗುತ್ತಿದೆ.
ಬೆಂಗಳೂರು: ಲೈಟರ್ ಬುದ್ದ ಪ್ರೋಡಕ್ಷನ್ ಹೌಸಿನಲ್ಲಿ ನಿರ್ಮಾಣವಾದ ಮತ್ತು ರಾಜ್ ಬಿ ಶೆಟ್ಟಿ ತಂಡದ ಈಗಾಗಲೇ ಹೌಸ್ ಫುಲ್ ಕಂಡಿರುವ ಸಿನಿಮಾ. ಸು ಫ್ರಂ ಸೋ ಸಿನಿಮಾವೂ ಹಾರರ್ ಕಾಮಿಡಿ ಕಥಾ ಹಂದರದ ‘ಸು ಫ್ರಮ್ ಸೋ’ (Su From So) ಸಿನಿಮಾ ಬಿಡುಗಡೆ ಆಗಿ ಉತ್ತಮ ವಿಮರ್ಶೆ ಪಡೆದುಕೊಳ್ಳಲು ಆರಂಭಿಸಿದ ಬಳಿಕ ಎಲ್ಲರ ಬಾಯಲ್ಲೂ ಇದೇ ಸಿನಿಮಾದ ಚರ್ಚೆ ಶುರುವಾಗಿದೆ. ‘ಸು ಫ್ರಮ್ ಸೋ’ ಸಿನಿಮಾ ಅದ್ಭುತ ಕಲೆಕ್ಷನ್ (Su From So Box Office Collection) ಮಾಡಿದೆ. sacnilk ವರದಿ ಪ್ರಕಾರ, ವಿಶ್ವಾದ್ಯಂತ ಈ ಚಿತ್ರಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ರಾಜ್ ಬಿ. ಶೆಟ್ಟಿ (Raj B. Shetty) ಮತ್ತು ಅವರ ತಂಡಕ್ಕೆ ಈ ಯಶಸ್ಸಿನಿಂದ ಸಖತ್ ಖುಷಿ ಆಗಿದೆ.
ಜೆ.ಪಿ. ತುಮಿನಾಡು ಅವರು ‘ಸು ಫ್ರಮ್ ಸೋ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕನಾಗಿ ಇದು ಅವರ ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲೇ 100 ಕೋಟಿ ರೂಪಾಯಿ ಯಶಸ್ಸು ಕಾಣುವುದು ಎಂದರೆ ತಮಾಷೆಯೇ ಅಲ್ಲ. ಅಂಥ ಸಾಧನೆಯನ್ನು ಜೆ.ಪಿ. ತುಮಿನಾಡು ಅವರು ಮಾಡಿದ್ದಾರೆ.
ಸಿನಿಮಾದಲ್ಲಿ ಜೆ.ಪಿ. ತುಮಿನಾಡು, ರಾಜ್ ಬಿ. ಶೆಟ್ಟಿ, ದೀಪಕ್ ರೈ ಪಣಾಜೆ, ಪ್ರಕಾಶ್ ತುಮಿನಾಡು, ಸಂಧ್ಯಾ ಅರಕೆರೆ, ಶನೀಲ್ ಗೌತಮ್, ಮೈಮ್ ರಾಮದಾಸ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಎಲ್ಲರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿದ್ದರೂ ಕೂಡ ‘ಸು ಫ್ರಮ್ ಸೋ’ ಹವಾ ಕಡಿಮೆ ಆಗಿಲ್ಲ.
ಬಿಡುಗಡೆ ಆಗಿ 24 ದಿನ ಕಳೆದರೂ ಸಹ ‘ಸು ಫ್ರಮ್ ಸೋ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. 23 ದಿನಕ್ಕೆ ಕರ್ನಾಟಕದಲ್ಲಿ ಈ ಸಿನಿಮಾ 69.2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮಲಯಾಳಂನಲ್ಲಿ 5.07 ಕೋಟಿ ರೂಪಾಯಿ, ತೆಲುಗಿನಲ್ಲಿ 1.23 ಕೋಟಿ ರೂಪಾಯಿ ಗಳಿಸಿದೆ. ವಿದೇಶದ ಗಳಿಕೆಯನ್ನೂ ಸೇರಿಸಿದರೆ 100.99 ಕೋಟಿ ರೂಪಾಯಿ ಆಗಲಿದೆ.
ಆಗಸ್ಟ್ 14ರಂದು ‘ಕೂಲಿ’ ಮತ್ತು ‘ವಾರ್ 2’ ಸಿನಿಮಾಗಳು ಬಿಡುಗಡೆ ಆದವು. ಆ ಸಿನಿಮಾಗಳು ಸಾಕಷ್ಟು ಪರದೆಗಳನ್ನು ಆಕ್ರಮಿಸಿಕೊಂಡವು. ಹಾಗಿದ್ದರೂ ಕೂಡ ‘ಸು ಫ್ರಮ್ ಸೋ’ ಸಿನಿಮಾದ ಹವಾ ತಗ್ಗಿಲ್ಲ. ಬೆಂಗಳೂರಿನಲ್ಲಿ ಈಗಲೂ ಕೂಡ ಈ ಸಿನಿಮಾ ಅನೇಕ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಪ್ರತಿ ವೀಕೆಂಡ್ ನಲ್ಲಿ ಈ ಚಿತ್ರಕ್ಕೆ ಅತ್ಯುತ್ತಮವಾಗಿ ಕಲೆಕ್ಷನ್ ಆಗುತ್ತಿದೆ. ಟಿಕೆಟ್ ಸಿಗದೆ ಪರದಾಡಿದ ಸಿನಿಮಾ ಪ್ರೇಮಿಗಳು ಥಿಯೇಟರ್ ಗಳಿಗೆ ಲಗ್ಗೆ ಇಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೆಂಗಳೂರು, ಮಂಗಳೂರಿಗರಿಗೆ ಇದೊಂದು ಅದ್ಭುತ ಹಾಸ್ಯವೆನಿಸಿದರೆ ಕೇರಳಿಗರಿಗೆ, ತಮಿಳಿಗರಿಗೆ ಜೀವನಕ್ಕೆ ಹತ್ತಿರದ ಸಿನಿಮಾವಾಗಿದೆ. ಒಳ್ಳೆಯ ಪಂಚ್, ಕಾಮಿಡಿ, ಬಂದರೋ ಬಂದರೋ ಬಾವ ಬಂದರೋ ಹಾಡು ಖ್ಯಾತಿ ಗಳಿಸಿದ್ದು ಸಿನಿ ಪ್ರೀಯರಿಗೆ, ರೀಲ್ಸ್ ಸ್ಟಾರ್ ಗಳಿಂದ ಜನಪ್ರಿಯವಾಗಿದೆ.
ಇದನ್ನು ಓದಿ: