ಸುಳ್ಳು ಕಥೆ, ಮದುವೆ, ಮತಾಂತರ ದಂಧೆಗೆ 12 ಹಿಂದೂ ಯುವತಿಯರಿಗೆ ಮೋಸ: ಮುಸ್ಲಿಂ ವ್ಯಕ್ತಿ ಬಂಧನ
ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ನಕಲಿ ಗುರುತಿನ ಮೂಲಕ ಉತ್ತರ ಪ್ರದೇಶ ಸೇರಿದಂತೆ ಮೂರು ರಾಜ್ಯಗಳಲ್ಲಿ ಕನಿಷ್ಠ 12 ಯುವತಿಯರನ್ನು ವಿವಾಹವಾಗಿರುವುದಾಗಿ ರಿಜ್ವಿ ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಸಾರನಾಥ ಪೊಲೀಸರು ತಿಳಿಸಿದ್ದಾರೆ.
ಲೌಖನೌ: ಹಿಂದೂ ವ್ಯಕ್ತಿ ಎಂದು ಹುಡುಗಿಯರನ್ನು ನಂಬಿಸಿ ಹಲವು ಹುಡುಗಿಯರನ್ನು ಮದುವೆಯಾಗಿ ಮತಾಂತರ ದಂಧೆ ನಡೆದಿದ್ದು, ಪ್ರಕರಣವೊಂದರಲ್ಲಿ ಶರಾಫ್ ರಿಜ್ವಿ ಎಂಬ ಮುಸ್ಲಿಂ ವ್ಯಕ್ತಿ ಸಾಮ್ರಾಟ್ ಸಿಂಗ್ ಹೆಸರಿನಲ್ಲಿ ಹಿಂದೂ ವ್ಯಕ್ತಿ ಅಂತಾ ನಂಬಿಸಿ ಅನೇಕ ಹಿಂದೂ ಯುವತಿಯರನ್ನು ವಿವಾಹವಾಗಿದ್ದಾನೆ. ಇವರನ್ನು ಸಾರನಾಥ ಪೊಲೀಸರು ಫರೂಕಾಬಾದ್‌ನಿಂದ ಬಂಧಿಸಿದ್ದಾರೆ.
ಸಾರಾನಾಥದ ಮಹಿಳೆಯೊಬ್ಬರು ದೂರು ನೀಡಿದ ಬಳಿಕ ರಿಜ್ವಿ ಸಿಕ್ಕಿಬಿದ್ದಿದ್ದಾನೆ. ಈತ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆ. ರೂ.5 ಲಕ್ಷ ಸುಲಿಗೆ ಮಾಡಿದ್ದು, ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹಾಕುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ನಕಲಿ ಗುರುತಿನ ಮೂಲಕ ಉತ್ತರ ಪ್ರದೇಶ ಸೇರಿದಂತೆ ಮೂರು ರಾಜ್ಯಗಳಲ್ಲಿ ಕನಿಷ್ಠ 12 ಯುವತಿಯರನ್ನು ವಿವಾಹವಾಗಿರುವುದಾಗಿ ರಿಜ್ವಿ ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಸಾರನಾಥ ಪೊಲೀಸರು ತಿಳಿಸಿದ್ದಾರೆ.
ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ರಿಜ್ವಿ, ಹಣ ಮತ್ತು ಉಡುಗೊರೆಗಳನ್ನು ಸುಲಿಗೆ ಮಾಡುತ್ತಿದ್ದ. ದೈಹಿಕ ಸಂಬಂಧ ಹೊಂದಿದ್ದ ನಂತರ ತನ್ನ ನೈಜ ಗುರುತನ್ನು ಬಹಿರಂಗಪಡಿಸುತ್ತಿದ್ದ. ಆಗಾಗ್ಗೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ.
ತನ್ನನ್ನು ಶ್ರೀಮಂತ ಹಿಂದೂ ಉದ್ಯಮಿ ಎಂದು ಹೇಳಿಕೊಂಡು ಅವರನ್ನು ಭಾವನಾತ್ಮಕ ಮತ್ತು ಆರ್ಥಿಕವಾಗಿ ಸೆಳೆಯುತ್ತಿದ್ದ. ನಂಬಿಕೆ ಗಳಿಸಿ ದೈಹಿಕ ಸಂಬಂಧ ಹೊಂದಿದ್ದ ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಕ್ಕೆ ಬಲವಂತಪಡಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
ರಿಜ್ವಿ, ಸಾಮ್ರಾಟ್ ಸಿಂಗ್, ಅಜಯ್ ಕುಮಾರ್ ಮತ್ತು ವಿಜಯ್ ಕುಮಾರ್ ಎಂಬ ವಿಭಿನ್ನ ಹಿಂದೂ ಹೆಸರುಗಳಲ್ಲಿ ಮೂರು ಫೇಸ್‌ಬುಕ್ ಖಾತೆಗಳನ್ನು ನಿರ್ವಹಿಸುತ್ತಿರುವುದಾಗಿ ವರದಿಯಾಗಿದೆ.
ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆದು ದುಬಾರಿ ಉಡುಪುಗಳನ್ನು ಧರಿಸುತ್ತಿದ್ದ. ಕೋಟ್ಯಾಧೀಶನಂತೆ ಫೋಸ್ ನೀಡುತ್ತಿದ್ದ.
ಮದುವೆಯ ಸಿದ್ಧತೆಗಾಗಿ ರೂ. 5 ಲಕ್ಷ ನೀಡಿದ ನಂತರ ಆತನ ನಿಜವಾದ ಗುರುತು ಪತ್ತೆ ಹಚ್ಚಿದ ಸಾರನಾಥದ ಮಹಿಳೆ ದೂರು ದಾಖಲಿಸಿದ್ದಾರೆ. ತದನಂತರ ಆತನನ್ನು ಬಂಧಿಸಲಾಗಿದೆ. ಆಕೆಯ ಫ್ಲಾಟ್‌ನಲ್ಲಿ ಉಳಿದುಕೊಂಡಿದ್ದ ರಿಜ್ವಿ ವಾರಣಾಸಿ ಮತ್ತು ಲಕ್ನೋದಲ್ಲಿನ ಹೋಟೆಲ್‌ಗಳಿಗೆ ಆಕೆಯನ್ನು ಕರೆದೊಯ್ಯುತ್ತಿದ್ದ. ಆಕೆ ಹಣ ಹಿಂತಿರುಗಿಸುವಂತೆ ಒತ್ತಾಯಿಸಿದಾಗ ಬೆದರಿಕೆ ಹಾಕುತ್ತಿದ್ದ ಎಂದು ವರದಿಯಾಗಿದೆ. ಒಟ್ಟಾರೆಯಾಗಿ ಹಿಂದೂ ಹುಡುಗಿಯರನ್ನು ಯಾಮಾರಿಸಿ ಹಣ ಕೀಳುವುದಲ್ಲದೇ ದೈಹಿಕ ಸಂಪರ್ಕ ಬೆಳೆಸಿ ಮತಾಂತರ ಆಗಲು ಒತ್ತಾಯಿಸಿದ ಆರೋಪದಡಿ ಪೋಲೀಸರ ಅತಿಥಿಯಾಗಿದ್ದಾನೆ.
ಇದನ್ನು ಓದಿ: