ಕಾಡಾನೆ ಜತೆ ಸೆಲ್ಪಿ’ ಕ್ಲಿಕ್ಕಿಸಿದ ಪ್ರವಾಸಿಗನಿಗೆ ಅರಣ್ಯ ಇಲಾಖೆ 25,000 ರೂ. ದಂಡ
ನಂಜನಗೂಡಿನ ಬಸವರಾಜು ಎಂಬುವವರು ಕಾಡಾನೆ elephant ಜತೆ ಸೆಲ್ಪಿ selfi ತೆಗೆದುಕೊಳ್ಳಲು ಹೋಗಿ ಅಪಾಯಕ್ಕೆ ಸಿಲುಕಿದ್ದರು. ವನ್ಯಜೀವಿಗಳಿಗೆ Forest Animalsತೊಂದರೆ ಕೊಡದಂತೆ, ಇನ್ನು ಮುಂದೆ ಇಂತಹ ಕೆಲಸ ಮಾಡದಂತೆ ಮುಚ್ಚಳಿಕೆ ಬರೆಸಿಕೊಂಡು 25,000 ರೂ ದಂಡ ವಿಧಿಸಿದೆ.
ಬಂಡೀಪುರ: ಕರ್ನಾಟಕದ ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಪ್ರವಾಸಿಗನೊಬ್ಬ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಕಾಡಾನೆ ಮುಂದೆ ಹೋಗಿದ್ದಾನೆ. ಈ ವೇಳೆ ಕಾಡಾನೆ ದಾಳಿ ನಡೆಸಿದ್ದು, ಆನೆ ಆತನನ್ನು ನೆಲಕ್ಕೆ ತಳ್ಳಿದೆ. ಆನೆಯ ಕಾಲಿನ ಕೆಳಗೆ ಆತ ಸಿಲುಕಿಕೊಂಡಿದ್ದ. ಆದರೆ ಆನೆ ನಿಧಾನವಾಗಿ ಆತನ ಮೇಲೆ ಕಾಲು ಇರಿಸಿದ್ದು, ಅದೃಷ್ಟವಶಾತ್ ಪ್ರವಾಸಿಗ ಪ್ರಾಣಾಪಾಯದಿಂದ ಬದುಕುಳಿದಿದ್ದಾನೆ. ಆದರೆ ಘಟನೆಗೆ ಸಂಬಂಧಿಸಿದಂತೆ ಇದೀಗ ‘ಸೆಲ್ಪಿ’ ಕ್ಲಿಕ್ಕಿಸಿದ ಪ್ರವಾಸಿಗನಿಗೆ ಅರಣ್ಯ ಇಲಾಖೆ 25,000 ರೂ. ದಂಡ ವಿಧಿಸಿದೆ.
ನಂಜನಗೂಡಿನ ಬಸವರಾಜು ಎಂಬುವವರು ಕಾಡಾನೆ ಜತೆ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಅಪಾಯಕ್ಕೆ ಸಿಲುಕಿದ್ದರು. ವನ್ಯಜೀವಿಗಳಿಗೆ ತೊಂದರೆ ಕೊಡದಂತೆ, ಇನ್ನು ಮುಂದೆ ಇಂತಹ ಕೆಲಸ ಮಾಡದಂತೆ ಮುಚ್ಚಳಿಕೆ ಬರೆಸಿಕೊಂಡು 25,000 ರೂ ದಂಡ ವಿಧಿಸಿದೆ.
ಪ್ರಾಣಿಗಳನ್ನು ಕಂಡಾಗ ಪ್ರವಾಸಿಗರು ಉತ್ಸಾಹಿತರಾಗಿ photo ಫೋಟೋ ಕ್ಲಿಕ್ಕಿಸಿಕೊಳ್ಳೊದು, ತೊಂದರೆ ಕೊಡೋದು ಮಾಡುತ್ತಾರೆ. ಆದರೆ ಬಂಡೀಪುರದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದ ಪ್ರವಾಸಿಗನನ್ನು ಕಾಡಾನೆಯೊಂದು ಅಟ್ಟಾಡಿಸಿ ತುಳಿದಿರುವ ಘಟನೆ ನಡೆದಿದೆ.
ಸದ್ಯ ಭಯಾನಕ ಘಟನೆಯ ವಿಡಿಯೋ ವೈರಲ್ ಆಗಿದ್ದು ಕರ್ನಾಟಕದ ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಪ್ರವಾಸಿಗನೊಬ್ಬ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಕಾಡಾನೆ ಮುಂದೆ ಹೋಗಿದ್ದಾಗ ಈ ಘಟನೆ ನಡೆದಿದೆ.
ವಾಹನಗಳು ಮತ್ತು ಜನರಿಂದ ತುಂಬಿದ್ದ ರಸ್ತೆಯಲ್ಲಿ ನಿಂತಿದ್ದ ಆನೆ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪ್ರವಾಸಿಗರ ಮೇಲೆ ಇದ್ದಕ್ಕಿದ್ದಂತೆ ಆನೆ ದಾಳಿ ನಡೆಸಿದೆ. ಕಾಡು ಆನೆಯನ್ನು ಕಂಡ ಆ ವ್ಯಕ್ತಿ ಪ್ರಾಣ ಉಳಿಸಿಕೊಳ್ಳಲು ಓಡುತ್ತಿರುವುದು ಕಂಡುಬರುತ್ತದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಇದನ್ನು ಓದಿ: