ಹೆಣ್ಣು ಮಗು ಎನ್ನುವ ಕಾರಣಕ್ಕೆ ಮಗುವಿಗೆ ವಿಷವುಣಿಸಿ ಕೊಂದ ರೈಫಲ್ಸ್ ಸಿಬ್ಬಂದಿಯಾದ ತಂದೆ
ಹೆಣ್ಣು ಮಗು girl babyಎಂಬ ಕಾರಣಕ್ಕೆ ಮಗುವಿಗೆ ವಿಷವುಣಿಸಿ ರೈಫಲ್ಸ್ ಸಿಬ್ಬಂದಿ ತಂದೆಯೇ ಹತ್ಯೆಗೈರುವ ಘಟನೆ ತ್ರಿಪುರಾದ ಖೋವಾಯಿ ಜಿಲ್ಲೆಯ ಅಹೆಡಬಾರಿ ಗ್ರಾಮದಲ್ಲಿ ನಡೆದಿದೆ.
ಅಗರ್ತಲ: ಸಮಾಜದಲ್ಲಿ ಎಂಥೆಂಥ ಆಘಾತಕಾರಿ ಘಟನೆಗಳು ನಡೆಯುತ್ತವೆ ಎನ್ನುವುದಕ್ಕೆ ಕೆಟ್ಟ ಉದಾಹರಣೆಯಾಗಿ ಈ ಘಟನೆ ನಡೆದಿದ್ದು ಹೆಣ್ಣು ಮಗು ಎಂಬ ಕಾರಣಕ್ಕೆ ಮಗುವಿಗೆ ವಿಷವುಣಿಸಿ ರೈಫಲ್ಸ್ ಸಿಬ್ಬಂದಿ ತಂದೆಯೇ ಹತ್ಯೆಗೈರುವ ಘಟನೆ ತ್ರಿಪುರಾದ ಖೋವಾಯಿ ಜಿಲ್ಲೆಯ ಅಹೆಡಬಾರಿ ಗ್ರಾಮದಲ್ಲಿ ನಡೆದಿದೆ.
ತ್ರಿಪುರಾ ರಾಜ್ಯ ರೈಫಲ್ಸ್ ಸಿಬ್ಬಂದಿಯಾಗಿರುವ ತಂದೆಯೇ ಈ ಕೃತ್ಯವೆಸಗಿದ್ದಾನೆ. ಹೆಣ್ಣು ಮಗು ಎಂಬ ಕಾರಣಕ್ಕೆ ಮಗುವಿಗೆ ವಿಷಹಾಕಿದ್ದು, ಮಗು ಸ್ಥಿತಿ ಗಂಭೀರವಾಗಿದೆ.
ತಕ್ಷಣ ಮಗುವನ್ನು ಖೋವಾಯಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಅಷ್ಟರಲ್ಲಿ ಮಗು ಕೊನೆಯುಸಿರೆಳೆದಿತ್ತು.
ಮಗುವಿನ ತಂದೆ ಎಡಿಸಿ ಖುಮುಲ್ವಾಂಗ್ ಪ್ರಧಾನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 10ನೇ ಬೆಟಾಲಿಯನ್ ಟಿಎಸ್ ಆರ್ ರಾಥೀಂದ್ರಾ ಡೆಬ್ಬರ್ಮಾನನ್ನು ಬಂಧಿಸಲಾಗಿದೆ. ವಿಚಾರಣೆಗೆ ಮೂರು ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಣ್ಣು ಮಗು, ಮಕ್ಕಳು, ಮಹಿಳೆ ಎಷ್ಟು ಶೋಷಣೆಗೆ ಒಳಗಾಗುತ್ತಾರೆ ಎನ್ನುವುದಕ್ಕೆ ಈ ಘಟನೆಯೂ ಸಾಕ್ಷಿಯಾಗಿದೆ.
ಇದನ್ನು ಓದಿ: