Back To Top

 ಬುಡಕಟ್ಟು ಮಹಿಳೆ ಮೇಲೆ ಮೂವರಿಂದ ಅತ್ಯಾಚಾರ , ಬಂಧನ
August 12, 2025

ಬುಡಕಟ್ಟು ಮಹಿಳೆ ಮೇಲೆ ಮೂವರಿಂದ ಅತ್ಯಾಚಾರ , ಬಂಧನ

ಮುಖ್ಯ ರಸ್ತೆಯಿಂದ ಸ್ವಲ್ಪ ದೂರದಲ್ಲಿರುವ ನಿರ್ಜನ ಸ್ಥಳಕ್ಕೆ ಆಕೆಯನ್ನು ಬಲವಂತವಾಗಿ ಕರೆದೊಯ್ದು, ಅಲ್ಲಿ ಸಾಮೂಹಿಕ ಅತ್ಯಾಚಾರ gang rape ಎಸಗಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಅತ್ಯಾಚಾರ ನಡೆದ ತಕ್ಷಣ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಭುವನೇಶ್ವರ: ಮೂತ್ರ ವಿಸರ್ಜಿಸಲು ಕಾಡಿನ ಬದಿ ಹೋದ ಬುಡಕಟ್ಟು ಮಹಿಳೆ tribel women ಮೇಲೆ ಟ್ರ್ಯಾಕ್ಟರ್ ನಲ್ಲಿ ಬಂದ ಮೂವರು ಆಕೆಯನ್ನು ಕಾಡೊಳಗೆ ಎಳೆದೊಯ್ದು ಅತ್ಯಾಚಾರ ನಡೆಸಿದ ಘಟನೆ ನಡೆದಿದೆ.
ಅಂಗುಲ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು ಭಾನುವಾರ ಬುಡಕಟ್ಟು ಸಮುದಾಯದ ಮಹಿಳೆ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ (Sexual Harassment) ಎಸಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಮೂವರಲ್ಲಿ ಇಬ್ಬರು ಅಪ್ರಾಪ್ತರಾಗಿದ್ದಾರೆ.
ಆಕೆಯ ದೂರಿನ ಪ್ರಕಾರ, ಆಕೆ ತನ್ನ ಸೋದರಳಿಯನೊಂದಿಗೆ ಅಂಗುಲ್‌ನ ಛೇಂಡಿಪಾಡ ಪ್ರದೇಶದ ಆಸ್ಪತ್ರೆಗೆ ಭೇಟಿ ನೀಡಿದ್ದರು. ಮಧ್ಯಾಹ್ನ ಸುಮಾರು 3 ಗಂಟೆಗೆ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಆ ಮಹಿಳೆ ಮತ್ತು ಅವರ ಸೋದರಳಿಯ ಕಾರಿಗೆ ಪೆಟ್ರೋಲ್ ತುಂಬಿಸಿ, ಊಟ ಮಾಡಲು petrol pumpಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದರು. ಆಗ ಸೋದರಳಿಯನಿಗೆ ಅಲ್ಲೇ ನಿಲ್ಲಲು ಹೇಳಿ ಆಕೆ ಮೂತ್ರ ವಿಸರ್ಜಿಸಲು ಅಲ್ಲೇ ಪಕ್ಕದಲ್ಲಿದ್ದ ಕಾಡಿನ ಬಳಿ ಹೋದರು. ಆಗ ಆಕೆ ಒಂಟಿಯಾಗಿದ್ದಾಗ ಟ್ರ್ಯಾಕ್ಟರ್‌ನಲ್ಲಿ ಮೂವರು ಪುರುಷರು ಬಂದು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಮುಖ್ಯ ರಸ್ತೆಯಿಂದ ಸ್ವಲ್ಪ ದೂರದಲ್ಲಿರುವ ನಿರ್ಜನ ಸ್ಥಳಕ್ಕೆ ಆಕೆಯನ್ನು ಬಲವಂತವಾಗಿ ಕರೆದೊಯ್ದು, ಅಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಅತ್ಯಾಚಾರ ನಡೆದ ತಕ್ಷಣ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಆರೋಪಿಗಳು ಬಳಸಿದ ಟ್ರ್ಯಾಕ್ಟರ್, ಎರಡು ಮೊಬೈಲ್ ಫೋನ್‌ಗಳು ಮತ್ತು ಅಪರಾಧದ ಸಮಯದಲ್ಲಿ ಆರೋಪಿಗಳು ಮತ್ತು ಆ ಮಹಿಳೆ ಧರಿಸಿದ್ದ ಬಟ್ಟೆ ಸೇರಿದಂತೆ ಹಲವಾರು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಗಸ್ಟ್ 5ರಂದು ಮಹಿಳೆ ಪೊಲೀಸ್ ದೂರು ದಾಖಲಿಸಿದ್ದಾರೆ. ದೂರು ದಾಖಲಾದ 24 ಗಂಟೆಗಳ ಒಳಗೆ, ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.

ಇದನ್ನು ಓದಿ:

Prev Post

ಹೆಣ್ಣು ಮಗು ಎನ್ನುವ ಕಾರಣಕ್ಕೆ ಮಗುವಿಗೆ ವಿಷವುಣಿಸಿ ಕೊಂದ ರೈಫಲ್ಸ್ ಸಿಬ್ಬಂದಿಯಾದ ತಂದೆ

Next Post

ಕಾಡಾನೆ ಜತೆ ಸೆಲ್ಪಿ’ ಕ್ಲಿಕ್ಕಿಸಿದ ಪ್ರವಾಸಿಗನಿಗೆ ಅರಣ್ಯ ಇಲಾಖೆ 25,000 ರೂ. ದಂಡ

post-bars

Leave a Comment

Related post