ಬ್ಯೂಟೀಷಿಯನ್ ಯುವತಿ ಮೇಲೆ ಪಾರ್ಲರ್ ಮಾಲಕಿಯಿಂದ ಹಲ್ಲೆ, ಬ್ಲಾಕ್ ಮೇಲ್ ಆರೋಪ
ಬ್ಯೂಟೀಷಿಯನ್ beautician ಆಗಿ ಕೆಲಸ ಮಾಡುತ್ತಿದ್ದ ನನಗೆ ಗ್ರಾಹಕರಿಗೆ ಮಸಾಜ್ ಮಾಡುವಂತೆ ಒತ್ತಾಯಿಸುತ್ತಿದ್ದರು. ಮಾತ್ರವಲ್ಲದೆ ಮಾಲಕಿ ಹಲ್ಲೆ ನಡೆಸಿ, ಅರೆಬೆತ್ತಲೆ ಫೋಟೋ ತೆಗೆದು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು: ಹೆಣ್ಣು ಮಕ್ಕಳು ಸೌಂದರ್ಯ ಹೆಚ್ಚಿಸಲು ಸೆಲೂನ್ , ಪಾರ್ಲರ್ ಹೋಗುವುದು ಸಹಜ. ತೀರಾ ಪರ್ಸನಲ್ ಆಗಿರುವ ಪಾರ್ಲರ್ ನಲ್ಲಿ ಗೌಪ್ಯತೆ ಕಾಪಾಡುವುದು ಕೂಡ ಮುಖ್ಯವಾಗಿದೆ.
ಮಂಗಳೂರಿನ (Mangaluru) ಸಲೂನ್ (Salon)ನಲ್ಲಿ ಮಸಾಜ್ (Massage) ದಂಧೆ ನಡೆಸುತ್ತಿದ್ದ ಆರೋಪ ಕೇಳಿಬಂದಿದೆ. ಅದೇ ಸಲೂನ್‌ನಲ್ಲಿ ಬ್ಯೂಟೀಷಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವತಿಗೆ ಮಾಲಕಿ ಹಲ್ಲೆ ನಡೆಸಿದ್ದಲ್ಲದೇ ತನ್ನ ಅರೆಬೆತ್ತಲೆ ಫೋಟೋ ತೆಗೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಹಂಪನ ಕಟ್ಟೆಯ ಯುನಿಸೆಕ್ಸ್ ಸೆಲೂನ್‌ನಲ್ಲಿ ಈ ಘಟನೆ ನಡೆದಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಕೆ ಬ್ಯೂಟೀಷಿಯನ್ beautician ಆಗಿ ಕೆಲಸ ಮಾಡುತ್ತಿದ್ದ ನನಗೆ ಗ್ರಾಹಕರಿಗೆ ಮಸಾಜ್ ಮಾಡುವಂತೆ ಒತ್ತಾಯಿಸುತ್ತಿದ್ದರು. ಮಾತ್ರವಲ್ಲದೆ ಮಾಲಕಿ ಹಲ್ಲೆ ನಡೆಸಿ, ಅರೆಬೆತ್ತಲೆ ಫೋಟೋ ತೆಗೆದು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬ್ಯೂಟೀಷಿಯನ್ ಕೋರ್ಸ್ ಮಾಡಿದ್ದ ನಾನು ಸುಮಾರು ಒಂದೂವರೆ ತಿಂಗಳ ಹಿಂದೆ ಸೆಲೂನ್‌ನಲ್ಲಿ ಕೆಲಸಕ್ಕೆ ಸೇರಿದ್ದೆ. ಆಗ ಅಲ್ಲಿನ ಮಾಲಕಿ ಗ್ರಾಹಕರೊಂದಿಗೆ ಆತ್ಮೀಯವಾಗಿದ್ದು ಅವರಿಗೆ ಮಸಾಜ್ ಸೇವೆ ಒದಗಿಸುವಂತೆ ಮತ್ತು ಅವರಿಂದ 500 ರೂ.ನಿಂದ 1 ಸಾವಿರ ರೂ. ವರೆಗೆ ಟಿಪ್ಸ್ ಪಡೆಯುವಂತೆ ತಿಳಿಸಿದ್ದರು.
ಸೋಮವಾರ ಮಾಲಕಿಯ ಪರಿಚಯದ ಪುರುಷ ಗ್ರಾಹಕರೊಬ್ಬರು ಬಂದು ಮಸಾಜ್ ಮಾಡಿಸಿಕೊಂಡಿದ್ದಾರೆ. ಈ ವೇಳೆ ಅವರೊಂದಿಗೆ ಮಾತನಾಡಿದ್ದನ್ನು ವಾಯ್ಸ ರೆಕಾರ್ಡ್ ಮಾಡಿ ಮಾಲಕರಿಗೆ ನೀಡಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಮಾಲಕರು ಒಳಗೆ ಬಂದು, ನನ್ನ ಮೇಲೆ ಹಲ್ಲೆ ನಡೆಸಿ, ಅರೆಬೆತ್ತಲೆ ಫೋಟೋ ತೆಗೆದು ಬೆದರಿಕೆ ಒಡ್ಡಿದ್ದಾರೆ. ಮರುದಿನ ಪತಿಯನ್ನು ಕರೆಸಿ ಅವರಿಗೂ ಫೋಟೋ ತೋರಿಸಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ನನಗೆ ಮೂರು ವರ್ಷದ ಮಗುವಿದೆ. ಇಂತಹ ಪರಿಸ್ಥಿತಿಯಲ್ಲಿ ಮಾನಸಿಕ ಒತ್ತಡದಿಂದ ಆತ್ಮಹತ್ಯೆಯ ಯೋಚನೆಯನ್ನೂ ಮಾಡಿದ್ದೆ. ಬಳಿಕ ನಾನು ಈ ವಿಚಾರವನ್ನು ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರ ಗಮನಕ್ಕೆ ತಂದೆ. ಅವರ ಸೂಚನೆಯಂತೆ ನಾನು ಬಂದರು ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದೆ ಎಂದು ತಿಳಿಸಿದ್ದಾರೆ.
ಇಂತಹ ಅನುಭವ ನನಗೆ ಮಾತ್ರವಲ್ಲ, ಸೆಲೂನ್‌ನಲ್ಲಿ ಕೆಲಸ ಮಾಡುವ ಇತರ ಯುವತಿ-ಯುವಕರ ಮೇಲೂ ಹಲ್ಲೆ, ಬೆದರಿಕೆ ಒಡ್ಡಿದಂತಹ ಘಟನೆಗಳು ನಡೆದಿದೆ. ಆದರೆ ಮರ್ಯಾದೆ ಹಾಗೂ ಉದ್ಯೋಗ ಕಳೆದುಕೊಳ್ಳುವ ಭಯದಿಂದ ಈ ಬಗ್ಗೆ ಯಾರೂ ಮಾತನಾಡಿಲ್ಲ. ನಾನು ಮಾನಸಿಕವಾಗಿ ನೊಂದಿದ್ದೇನೆ. ಇಂತಹ ಪರಿಸ್ಥಿತಿ ಯಾವ ಮಹಿಳೆಗೂ ಬರಬಾರದು ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.
ಸದ್ಯ ಮಹಿಳೆ ನ್ಯಾಯಕ್ಕಾಗಿ ಆಗ್ರಹಿಸಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಇದನ್ನು ಓದಿ: