Back To Top

 ಕುಡಿತದ ಚಟ ಬಿಡಿಸಲು ಸೇವಿಸಿದ ಔಷಧಕ್ಕೆ ಮೂವರು ಬಲಿ: medicine overdose
August 9, 2025

ಕುಡಿತದ ಚಟ ಬಿಡಿಸಲು ಸೇವಿಸಿದ ಔಷಧಕ್ಕೆ ಮೂವರು ಬಲಿ: medicine overdose

ಕಲಬುರಗಿ ಜಿಲ್ಲೆಯಲ್ಲಿ ಕುಡಿತದ ಚಟ ಬಿಡಿಸಲು ನೀಡಿದಂತ ಔಷಧಿ medicine ಸೇವಿಸಿ ಮೂವರು ಸಾವನ್ನಪ್ಪಿರುವಂತ ಶಾಕಿಂಗ್ ಘಟನೆ ನಡೆದಿದೆ.

ಕಲಬುರ್ಗಿ: ಕುಡಿತ ಮನುಷ್ಯರ ಜೀವನವನ್ನು ಹಲವು ವಿಧದಲ್ಲಿ ಹಾಳು ಮಾಡುತ್ತದೆ. ಕುಡಿತದ ಚಟ ಬಿಡಿಸಲು ಹಲವರು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಆ ಪ್ರಯತ್ನ ಕೆಲವೊಂದು ಬಾರೀ ತೀರಾ ಎನ್ನಿಸಿ ಸಾವಿಗೂ ಕಾರಣವಾಗಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ಈ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯಲ್ಲಿ ಕುಡಿತದ ಚಟ ಬಿಡಿಸಲು ನೀಡಿದಂತ ಔಷಧಿ medicine ಸೇವಿಸಿ ಮೂವರು ಸಾವನ್ನಪ್ಪಿರುವಂತ ಶಾಕಿಂಗ್ ಘಟನೆ ನಡೆದಿದೆ. ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಇಮಡಾಪುರದಲ್ಲಿ ಈ ದುರ್ಘಟನೆ ನಡೆದಿದೆ.
ಮೃತರನ್ನು ಸೇಡಂ ತಾಲೂಕಿನ ಬುರಗಪಳ್ಳಿ ಗ್ರಾಮದ ಲಕ್ಷ್ಮೀ ನರಸಿಂಹಲು(45) ಹಾಗೂ ಶಹಬಾದ್ ಪಟ್ಟಣದ ನಿವಾಸಿ ಗಣೇಶ್ ರಾಠೋಡ್(30) ಮದಕಲ್ ಗ್ರಾಮದ ನಾಗೇಶ ಭೀಮಶಪ್ಪ ಗಡಗು (25) ಮೃತರು.
ಇದೇ ಔಷಧಿ ಸೇವಿಸಿದ ಲಕ್ಷ್ಮೀ ನರಸಿಂಹಲು ಅವರ ಪುತ್ರ ನಿಂಗಪ್ಪನರಸಿಂಹಲು ಅವರ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಔಷಧಿ ನೀಡಿದ ತಜ್ಞ ಕುಡಿತದ ಚಟ ಬಿಡಿಸುತ್ತೇನೆ ಎಂಬುದಾಗಿ ಸಾಯಪ್ಪ ಮುತ್ಯಾ ಮದ್ಯ ವ್ಯಸನಿಗಳ ಮೂಗಿನಲ್ಲಿ ಔಷಧಿ ಹಾಕಿದ್ದರು. ಸಾಯಪ್ಪ ಮುತ್ಯಾ ನೀಡಿದಂತ ಔಷಧಿಯಿಂದ ಲಕ್ಷ್ಮೀ ಹಾಗೂ ಗಣೇಶ್ ಸ್ಥಳದಲ್ಲೇ ಸಾವನ್ನಪ್ಪಿರೋದಾಗಿ ಕುಟುಂಬಸ್ಥರು ನಾಟಿ ವೈದ್ಯನ ಮೇಲೆ ಆರೋಪಿಸಿದ್ದಾರೆ. ಸದ್ಯ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನು ಓದಿ:

Prev Post

ಎದೆ ಹಾಲು ದಾನ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್…

Next Post

ಅಕ್ರಮ ಸಂಬಂಧ, ಕುಡುಕ ಗಂಡನ ಕಿವಿಗೆ‌ ಕೀಟನಾಶಕ ಸುರಿದು ಕೊಂದ ಹೆಂಡತಿ ಮತ್ತು…

post-bars

Leave a Comment

Related post