ಅಕ್ರಮ ಸಂಬಂಧ, ಕುಡುಕ ಗಂಡನ ಕಿವಿಗೆ ಕೀಟನಾಶಕ ಸುರಿದು ಕೊಂದ ಹೆಂಡತಿ ಮತ್ತು ಲವರ್
ಸಂಪತ್ ಎಂಬಾತ ಕೊಲೆಯಾದ ವ್ಯಕ್ತಿಯಾಗಿದ್ದು ಸಂಪತ್ ಪತ್ನಿ ರಮಾದೇವಿ ಹಾಗೂ ಆಕೆಯ ಲವರ್ ರಾಜಯ್ಯ ಹಾಗೂ ಆತನ ಗೆಳೆಯ ಶ್ರೀನಿವಾಸ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣ: ಗಂಡ ಹೆಂಡತಿ ಗಲಾಟೆ, ಅನೈತಿಕ ಸಂಬಂಧ ಕೊಲೆ ಪ್ರಕರಣ ದಿನೇ ದಿನೇ ಹೆಚ್ಚಾಗ್ತಿರೋ ಬೆನ್ನಲ್ಲೇ ತೆಲಂಗಾಣದಲ್ಲಿ ಮಹಿಳೆಯೊಬ್ಬಳು ಗಂಡನನ್ನು ಯೂಟ್ಯೂಬ್ ವೀಡಿಯೋ ನೋಡಿ ಕೊಲೆ ಮಾಡಿದ್ದಾಳೆ. ಅನೈತಿಕ ಸಂಬಂಧದ ಕಾರಣಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ. ಸಂಪತ್ ಎಂಬಾತ ಕೊಲೆಯಾದ ವ್ಯಕ್ತಿಯಾಗಿದ್ದು ಸಂಪತ್ ಪತ್ನಿ ರಮಾದೇವಿ ಹಾಗೂ ಆಕೆಯ ಲವರ್ ರಾಜಯ್ಯ ಹಾಗೂ ಆತನ ಗೆಳೆಯ ಶ್ರೀನಿವಾಸ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಗಂಡ ಸಂಪತ್ ಲೈಬ್ರರಿಯೊಂದರಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದು ಕುಡಿದು ಬಂದು ಹೆಂಡತಿಗೆ ಕಿರುಕುಳ ನೀಡುತ್ತಿದ್ದ. ಗಂಡ ಹೆಂಡತಿ ಮಧ್ಯೆ ದಿನವೂ ಜಗಳಗಳಾಗುತ್ತಿದ್ದವು.
ಇಬ್ಬರು ಮಕ್ಕಳನ್ನು ಸಾಕುವುದಕ್ಕೆ ಈತನ ಪತ್ನಿ ರಮಾದೇವಿ ಟಿಫನ್ ಅಂಗಡಿ ಇಟ್ಟಿದ್ದಳು. ಅಂಗಡಿ ತೆರೆದ ನಂತರ ರಮಾದೇವಿಗೆ 50 ವರ್ಷದ ಕರಣ್ ರಾಜಯ್ಯ ಎಂಬಾತನ ಪರಿಚಯವಾಗಿತ್ತು. ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿದೆ.
ಗಂಡನ ಕಿರುಕುಳ ಆಕೆಗೆ ಅಸಹನೀಯವೆನಿಸತೊಡಗಿತು. ಯೂಟ್ಯೂಬ್‌ನಲ್ಲಿ ಸುಲಭವಾಗಿ ಕೊಲೆ ಮಾಡುವ ಬಗ್ಗೆ ಹುಡುಕಾಟ ನಡೆಸಿದ್ದು ಕೀಟನಾಶಕ ಸುರಿದು ಮನುಷ್ಯರನ್ನು ಕೊಲ್ಲುವ ಬಗ್ಗೆ ಮಾಹಿತಿ ಸಿಕ್ಕಿದ್ದು. ಅದರಂತೆ ಆಕೆ ಲವರ್ ರಾಜಯ್ಯ ಜೊತೆ ಸೇರಿ ಸಂಪತ್ ಕೊಲೆಗೆ ಸಂಚು ರೂಪಿಸಿದ್ದಾರೆ.
ಕೊಲೆಗೆ ಮೊದಲು ಸಂಪತ್‌ಗೆ ರಮದೇವಿಯ ಗೆಳೆಯ ರಾಜಯ್ಯ ಕಂಠಪೂರ್ತಿ ಕುಡಿಸಿದ್ದಾನೆ. ಇದಾದ ನಂತರ ರಮಾದೇವಿ ಹಾಗೂ ಆಕೆಯ ಗೆಳೆಯ ರಾಜಯ್ಯ ಸಂಪತ್ ಕಿವಿಗೆ ಕೀಟನಾಶಕ ಹಾಕಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರಮಾದೇವಿ ಗಂಡ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆಗಸ್ಟ್ 1 ರಂದು ಸಂಪತ್ ಮೃತದೇಹ ಪತ್ತೆಯಾಗಿದ್ದು, ರಮಾದೇವಿ ಹಾಗೂ ರಾಜಯ್ಯ ಸಂಪತ್ ಮರಣೋತ್ತರ ಪರೀಕ್ಷೆ ನಡೆಸುವುದು ಬೇಡ ಎಂದು ಹೇಳಿದಾಗ ಅನುಮಾನ ವ್ಯಕ್ತವಾಗಿದೆ.
ಮಗನೂ ಪೊಲೀಸರಿಗೆ ತನಿಖೆ ಮಾಡುವಂತೆ ಮನವಿ ಮಾಡಿದ್ದಾನೆ. ಈ ವೇಳೆ ಪತ್ನಿ ರಮಾದೇವಿ, ರಾಜಯ್ಯ , ಸ್ನೇಹಿತ ಶ್ರೀನಿವಾಸ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಸಂಪತ್‌ನನ್ನು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಇದನ್ನು ಓದಿ: