
ಆ.13ರಂದು ‘ಇದೊಳ್ಳೆ ವರಸೆ’ ಪುಸ್ತಕ ಬಿಡುಗಡೆ: book publishing program
ಲೇಖಕ ಸಂದೇಶ್ ನಾಯ್ಕ ಹಕ್ಲಾಡಿ ಅವರ “ಇದೊಳ್ಳೆ ವರಸೆ” idolle varase ಪುಸ್ತಕ ಬಿಡುಗಡೆ ಕಾರ್ಯಕ್ರಮವೂ ಆಗಸ್ಟ್ 13ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಧ್ಯಾಹ್ನ 1 ಗಂಟೆಯಿಂದ ಆಟಿಯ ವಿಶೇಷ ಭೋಜನ ಇರಲಿದೆ.
ಪ್ರತೀ ವಿಷಯಕ್ಕೂ ಬೇರೆ ಬೇರೆ ಆಯಾಮಗಳಿರುತ್ತವೆ. ಒಂದು ವಿಷಯ ಒಬ್ಬರಿಗೆ ಕಂಡ ರೀತಿಯಲ್ಲಿ ಇನ್ನೊಬ್ಬರಿಗೆ ಕಾಣಬೇಕೆಂದಿಲ್ಲ. ಹಾಗೆ ಅಂಥ ಕೆಲವು ವಿಷಯಗಳನ್ನು ವ್ಯಂಗ್ಯ-ವಿಡಂಬನೆ, ಚುಟುಕ, ಹಾಸ್ಯ ವಿಶ್ಲೇಷಣೆಯ ಚೌಕಟ್ಟಿನಲ್ಲಿ ಹಿಡಿದಿಡುವ ಪ್ರಯತ್ನವೇ, ‘ಇದೊಳ್ಳೆ ವರಸೆ’ ಪುಸ್ತಕದ ಬರಹಗಳು.

ಲೇಖಕ ಸಂದೇಶ್ ನಾಯ್ಕ ಹಕ್ಲಾಡಿ ಅವರ “ಇದೊಳ್ಳೆ ವರಸೆ” ಪುಸ್ತಕ ಬಿಡುಗಡೆ ಕಾರ್ಯಕ್ರಮವೂ ಆಗಸ್ಟ್ 13ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಧ್ಯಾಹ್ನ 1 ಗಂಟೆಯಿಂದ ಆಟಿಯ ವಿಶೇಷ ಭೋಜನ ಇದ್ದು, 2 ಗಂಟೆಯಿಂದ ಸಂವಾದ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವು ಕ್ರಿಯೇಟಿವ್ ಪುಸ್ತಕ ಮನೆ pustaka mane ಪ್ರಕಾಶನದಿಂದ ನಡೆಯಲಿದ್ದು 22 ಕೃತಿಗಳ ಬಿಡುಗಡೆಯಾಗಲಿದೆ.
“ಇದೊಳ್ಳೆ ವರಸೆ” ಪುಸ್ತಕ ಲೇಖಕ ಸಂದೇಶ್ ಎಚ್. ನಾಯ್ಕ Sandesh H Nayaka Publisher ಅವರ ಪ್ರಕಾರ ಪ್ರಚಲಿತ ವಿದ್ಯಮಾನಗಳು ಹಾಗೂ ಅವುಗಳ ವಿಶ್ಲೇಷಣೆಗಳೆಂದರೆ ಸಾಮಾನ್ಯವಾಗಿ ಆಯಾ ಸಮಯ-ಸಂದರ್ಭಕ್ಕೆ ಸೀಮಿತವಾದುದು. ಅತೀವ ವೇಗದ ಈ ಕಾಲಘಟ್ಟದಲ್ಲಿ, ಇಂದಿನ ಸುದ್ದಿ ನಾಳೆಗೆ ಹಳಸು, ನಾಳೆಯದ್ದು ನಾಡಿದ್ದಿಗೆ ಎಂಬಂತಿರುತ್ತದೆ ಸುದ್ದಿ ಪ್ರವಾಹ. ಆ ಪ್ರವಾಹಕ್ಕೆ ಜೊತೆಯಾದಂತೆ ಜನರ ಆಲೋಚನಾ ಧಾಟಿ, ಒಲವು-ನಿಲುವುಗಳೂ ಹರಿಯುತ್ತವೆ. ಅದನ್ನು ಕೊಂಚ ತಡೆದು ಮನಸ್ಸಿನ ಗಮನವನ್ನು ಬೇರೆಡೆಗೆ, ಅಂದರೆ ಅದರದ್ದೇ ಆದ ಒಂದು ಭಿನ್ನ ಯೋಚನಾ ಲಹರಿಯತ್ತ ಹರಿಸುವ ನಿಟ್ಟಿನಲ್ಲಿ ಅವುಗಳಿಗೆ ಲಘು ವಿಡಂಬನೆ, ತುಸು ವ್ಯಂಗ್ಯ, ಹಾಸ್ಯದ ಒಗ್ಗರಣೆ ಸೇರಿಸಲಾಗಿದೆ.
ಇದು ಪ್ರವಾಹದ ವಿರುದ್ಧದ ಈಜಲ್ಲ! ನಡು ನಡುವೆ ಕಾಣಿಸುವ ಚಟಾಕಿಯಂಥ ಸಾಲುಗಳು, ಪದ-ವಿನೋದಗಳು, ಪದ ಪ್ರಾಸ ಇತ್ಯಾದಿಗಳು ಪಾಯಸದ ಜೊತೆಗೆ ಕಾಣಿಸುವ ದ್ರಾಕ್ಷಿ, ಗೋಡಂಬಿ, ಲವಂಗದಂತೆ. ಅವುಗಳ ಪ್ರಮಾಣ ಪೂರ್ವ ನಿರ್ಧರಿತ ಯಾಂತ್ರಿಕ ಅಳತೆಯಾಗಿರದೇ ಆಯಾ ಸಿದ್ಧತೆ, ವಸ್ತು, ವಿಷಯ ಹಾಗೂ ಸಾಧ್ಯತೆಯ ನೆಲೆಯಲ್ಲಿ ನಮ್ಯವಾಗಿವೆ. ಹೀಗೆ ಲಘು ಧಾಟಿಯಲ್ಲೇ, ಇಡಿ ಇಡಿ ಅಲ್ಲದಿದ್ದರೂ ಹಿಡಿಯಷ್ಟಾದರೂ ಬಿಡಿ ಬಿಡಿ ವಿಚಾರಗಳನ್ನು ಇಲ್ಲಿನ ಬರಹಗಳು ದಾಟಿಸುತ್ತವೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಿತ್ರ ನಿರ್ದೇಶಕ, ಸಾಹಿತಿಗಳಾದ ಬಾ. ನಾಗತಿಹಳ್ಳಿ ಚಂದ್ರಶೇಖರ್ ವಹಿಸಲಿದ್ದಾರೆ. ವೇದಿಕೆಯಲ್ಲಿ ಕೈ.ಜಾ.ವಿ. ಹಾವೇರಿ ಯ ವಿಶ್ರಾಂತ ಕುಲಪತಿಗಳಾದ ಡಾ.ಕೆ. ಚಿನ್ನಪ್ಪ ಗೌಡ, ಶ್ರೀ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಬಾ. ಪ್ರದೀಪ್ ಕುಮಾರ್ ಹೆಬ್ರಿ, ವಹಿಸಲಿದ್ದಾರೆ. ಈ ಕಾರ್ಯಕ್ರಮವು ಸಪ್ತಗಿರಿ ಕ್ಯಾಂಪಸ್, ಕ್ರಿಯೇಟಿವ್ ಪ.ಪೂ. ಕಾಲೇಜು ಕಾರ್ಕಳದಲ್ಲಿ ನಡೆಯಲಿದೆ.
ಇದನ್ನು ಓದಿ: