ಭೀಕರ ಮೇಘ ಸ್ಪೋಟಕ್ಕೆ ನಲುಗಿದ ಉತ್ತರಾಖಂಡ: ಹಲವಾರು ಜನ ನಾಪತ್ತೆ ಶಂಕೆ: uttarakanda Cloudburst
60ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಅನುಮಾನ ಉಂಟಾಗಿದೆ. ಪ್ರವಾಹದ ಭಯಾನಕ ವೀಡಿಯೋ ವೈರಲ್ ಆಗಿದ್ದು ಅವಶೇಷಗಳ ಅಡಿಯಿಂದ ಇಬ್ಬರು ವ್ಯಕ್ತಿಗಳು ಅಸಹಾಯಕರಾಗಿ ಹೊರಬರುವ ವೀಡಿಯೋ ವೈರಲ್ ಆಗಿದೆ. Uttarkashi Cloudburst : 190 People Rescued From Uttarkashi’s Dharali Village
ಉತ್ತರಾಖಂಡ್: ಈ ವರ್ಷದ ಮಳೆ ನಾನಾ ವಿಧದಲ್ಲಿ ಜನರಿಗೆ ಸಂಕಷ್ಟ ತಂದೊಡ್ಡಿದ್ದು ಪುರಾಣ ಪ್ರಸಿದ್ದಿಗೆ ಹೆಸರಾದ ಉತ್ತರ ಕಾಶಿಯಲ್ಲಿuttarakashi ಭೀಕರ ಮೇಘಸ್ಪೋಟ ಸಂಭವಿಸಿದೆ. ಉತ್ತರ ಕಾಶಿ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ಸಂಭವಿಸಿದೆ. 60ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಅನುಮಾನ ಉಂಟಾಗಿದೆ. ಪ್ರವಾಹದ ಭಯಾನಕ ವೀಡಿಯೋ ವೈರಲ್ ಆಗಿದ್ದು ಅವಶೇಷಗಳ ಅಡಿಯಿಂದ ಇಬ್ಬರು ವ್ಯಕ್ತಿಗಳು ಅಸಹಾಯಕರಾಗಿ ಹೊರಬರುವ ವೀಡಿಯೋ ವೈರಲ್ ಆಗಿದೆ.
ಉತ್ತರಾಖಂಡದ ಉತ್ತರಕಾಶಿಯ ಹರ್ಸಿಲ್ ಬಳಿಯ ಧರಾಲಿ ಪ್ರದೇಶದಲ್ಲಿ ಮಂಗಳವಾರ ಸಂಭವಿಸಿದ ಭಾರಿ ಮೇಘಸ್ಫೋಟದಲ್ಲಿ ಒಂದು ಹಳ್ಳಿ ಕೊಚ್ಚಿಹೋಗಿದ್ದು, ಹಲವಾರು ಜನರು ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಮೇಘಸ್ಪೋಟದಿಂದಾಗಿ ಗುಡ್ಡ ಕುಸಿತವಾಗಿದ್ದು ಹಲವು ಮನೆಗಳು ಕೂಡ ಕೊಚ್ಚಿ ಹೋಗಿರುವ ಸಂಶಯ ವ್ಯಕ್ತಪಡಿಸಿದ್ದಾರೆ.
ಗಂಗೋತ್ರಿ ವ್ಯಾಪ್ಯಿ ಜನವಸತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಾವು ನೋವಿನ ಬಗ್ಗೆ ಸದ್ಯಕ್ಕೆ ವರದಿಯಾಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತನಿಖಾ ದಳವೂ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದು.
ಸಾವು ನೋವಿನ ಲೆಕ್ಕಾಚಾರ ಇನ್ನು ನೋಡಬೇಕಿದೆ.
ಇದನ್ನು ಓದಿ: