ಲಾಲ್ ಬಾಗ್ ಉದ್ಯಾನವನದಲ್ಲಿ 218ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ: The Lalbagh Independence Day flower show
ಬೆಳಗ್ಗೆ 10ಕ್ಕೆ ಲಾಲ್ ಬಾಗ್ ಗಾಜಿನಮನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು 218ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು. ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ರಾಮಲಿಂಗರೆಡ್ಡಿ ಉಪಸ್ಥಿತರಿದ್ದರು.
ಬೆಂಗಳೂರು: ಪ್ರತಿ ವರ್ಷ ಆಯೋಜಿಸುವಂತೆ ಈ ವರ್ಷವೂ ಮಹಾನಗರಿಯ ಪ್ರಸಿದ್ಧ ಉದ್ಯಾನವನ ಲಾಲ್ ಬಾಗ್ ಹೂ ತೋಟದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್ 7 ರಿಂದ 15ರವರೆಗೆ ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಬಾರಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ವಿಷಯಾಧಾರಿತ ಹೂವಿನ ಪ್ರತಿಕೃತಿಗಳು ಕಣ್ಮನ ಸೆಳೆಯಲಿವೆ.
ಬೆಳಗ್ಗೆ 10ಕ್ಕೆ ಲಾಲ್ ಬಾಗ್ ಗಾಜಿನಮನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು 218ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ರಾಮಲಿಂಗರೆಡ್ಡಿ ಉಪಸ್ಥಿತರಿರುವರು.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ನಡೆಸಿದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಜೀವನ ಫಲಪುಷ್ಪಗಳಲ್ಲಿ ಅನಾವರಣಗೊಳ್ಳಲಿದೆ. ಪ್ರವೇಶಕ್ಕೆ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಲಭ್ಯವಿದ್ದು, ವೆಬ್ ಸೈಟ್ : https://hasiru.karnataka.gov.in/floweshow/login.aspx ಮಾಡಬಹುದು. ಮೊಬೈಲ್ನಲ್ಲಿ ಕ್ಯೂಆರ್ ಕೋಡ್ ಪ್ರತಿಯನ್ನು ತೋರಿಸಿ ಪುಷ್ಪ ಪ್ರದರ್ಶನಕ್ಕೆ ನೇರ ಪ್ರವೇಶ ಪಡೆಯಬಹುದು.
ಇನ್ನು ಟೀಕೇಟ್ ದರ ವಾರಂತ್ಯಗಳಲ್ಲಿ ವಯಸ್ಕರಿಗೆ 100 ರೂಪಾಯಿ , ಮಕ್ಕಳಿಗೆ 50 ರೂಪಾಯಿ ಇರಲಿದೆ.
ವಾರದ ನಡುವೆ ವಯಸ್ಕರಿಗೆ 80 ರೂಪಾಯಿ ಮತ್ತು ಮಕ್ಕಳಿಗೆ 30 ರೂಪಾಯಿ ಇರಲಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: