ಪಿಜಿ ಮಾಲೀಕನಿಂದ ಯುವತಿ ಮೇಲೆ ಅತ್ಯಾಚಾರ
ಪಿಜಿ ಮಾಲೀಕನೊಬ್ಬ (PG Owner) ತನ್ನದೇ ಪಿಜಿಯಲ್ಲಿದ್ದ ಹುಡುಗಿಯನ್ನು ತನ್ನ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿರುವಂತಹ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಸಾಕಷ್ಟು ಪಿಜಿಗಳಿವೆ. ವಿವಿಧ ರಾಜ್ಯಗಳಿಂದ ವಿವಿಧ ದೇಶಗಳಿಂದ ಬರೋ ಜನರು ಸೇಫ್ ಇರುತ್ತೆ ಎಂದು ಪಿಜಿಗಳಲ್ಲೇ ಆಶ್ರಯ ಪಡೆಯುತ್ತಾರೆ. (Bengaluru) ಆದರೆ ಪಿಜಿಯಲ್ಲೇ ಹೇಸಿಗೆ ತರೋ ಘಟನೆ ನಡೆದಿದೆ.
ಪಿಜಿ ಮಾಲೀಕನೊಬ್ಬ (PG Owner) ತನ್ನದೇ ಪಿಜಿಯಲ್ಲಿದ್ದ ಹುಡುಗಿಯನ್ನು ತನ್ನ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿರುವಂತಹ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿ ಪಿಜಿ ಮಾಲೀಕ ಅಶ್ರಫ್ 10 ದಿನಗಳ ಹಿಂದೆ ಪಿಜಿಗೆ ಸೇರಿಕೊಂಡಿದ್ದ ವಿದ್ಯಾರ್ಥಿನಿಯನ್ನು ಅಪಹರಿಸಿ, ಕಾರಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ.
ಘಟನೆ ಕುರಿತು ವಿದ್ಯಾರ್ಥಿನಿ ಸೋಲದೇವನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಇತ್ತೀಚೆಗೆ ಅತ್ಯಾಚಾರ ಪ್ರಕರಣ ಮಿತಿಮೀರುತ್ತಿದ್ದು ಹೆಣ್ಣುಮಕ್ಕಳಿಗೆ ಯಾವ ಸ್ಥಳವೂ ಸೇಫ್ ಅಲ್ಲ ಎನ್ನುವ ಭಾವನೆ ಬಂದಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ.
ಇದನ್ನು ಓದಿ: