ಪ್ರೀತಿ ವಿಚಾರಕ್ಕೆ ಮಸೀದಿ ಮುಂದೆ ಹಿಂದೂ ಯುವಕನ ಕೊಲೆ: ಆರೋಪಿ ಶರಣು
ಕೊಪ್ಪಳದ ಸಾದಿಕ್ ಕೋಲ್ಕಾರ್ ಎಂಬುವನಿಂದ ಗವಿಸಿದ್ದಪ್ಪ ನಾಯಕ್ ನ ಕೊಲೆ ಮಾಡಲಾಗಿದೆ. ಸದ್ಯ ಗವಿಸಿದ್ದಪ್ಪ ನಾಯಕ್ ತಂದೆ ನಿಂಗಜ್ಜ ಟಣಕನಲ್ ಆರೋಪಿ ಸಾದಿಕ್ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.
ಕೊಪ್ಪಳ : ಮತೀಯ ಭ್ರಮೆ ಕೆಲವರಲ್ಲಿ ಎಷ್ಟರ ಮಟ್ಟಿಗೆ ಬಲವಾಗಿದೆ ಎಂದರೆ ಜೀವ ಹೋದರೂ ನಮ್ಮ ಮತ, ಜಾತಿ, ಧರ್ಮ ಇವುಗಳೇ ನಮಗೆ ಮೇಲು ಅನ್ನುವಷ್ಟು ಜನ ಮೌಢ್ಯಕ್ಕೆ ಬಲಿಯಾಗಿದ್ದಾರೆ. ಇಂತದ್ದೇ ಹೀನಾಯ ಕೃತ್ಯ (Koppal) ಮಸೀದಿ (Masjid) ಮುಂದೆಯೇ ಹಿಂದೂ (hindu )ಯುವಕನನ್ನು ಮುಸ್ಲಿಂ (muslim ) ಕೊಲೆ ಮಾಡಿದ್ದಾನೆ. ಭಾನುವಾರ ರಾತ್ರಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಪ್ರೀತಿ(Love) ವಿಚಾರಕ್ಕೆ ಮರ್ಡರ್ ಆಗಿದೆ ಎಂಬ ಶಾಕಿಂಗ್ (Shocking) ನ್ಯೂಸ್ ಹೊರಬಂದಿದೆ.

ಕೊಪ್ಪಳದ ಸಾದಿಕ್ ಕೋಲ್ಕಾರ್ ಎಂಬುವನಿಂದ ಗವಿಸಿದ್ದಪ್ಪ ನಾಯಕ್ ನ ಕೊಲೆ ಮಾಡಲಾಗಿದೆ. ಸದ್ಯ ಗವಿಸಿದ್ದಪ್ಪ ನಾಯಕ್ ತಂದೆ ನಿಂಗಜ್ಜ ಟಣಕನಲ್ ಆರೋಪಿ ಸಾದಿಕ್ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.
ಕೊಲೆ ಬಳಿಕ ಸಾದಿಕ್ ನೇರವಾಗಿ ಬಂದು ನಗರ ಠಾಣೆಗೆ ಶರಣಾಗಿದ್ದಾನೆ. ವಿವಿಧ ಸೆಕ್ಷನ್ ಅಡಿ ಆತನ ಮೇಲೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಗವಿಸಿದ್ದಪ್ಪ, ಗೌರಿ ಅಂಗಳ ಏರಿಯಾದ ಅಪ್ರಾಪ್ತ ಯುವತಿಯನ್ನು ಪ್ರೀತಿಸುತ್ತಿದ್ದನು. ಇಬ್ಬರು ಮನೆಬಿಟ್ಟು ಓಡಿ ಹೋಗಿದ್ದರು. ಇದೇ ವಿಚಾರಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ. ಸಾದಿಕ್ ನೊಂದಿಗೆ ಲವ್ ಬ್ರೇಕಪ್ ಮಾಡಿಕೊಂಡ ಯುವತಿ ಗವಿಸಿದ್ದಪ್ಪನನ್ನು ಪ್ರೀತಿಸಲು ಶುರು ಮಾಡಿದ್ದಳು. ಇದ್ರಿಂದ ಕೋಪಗೊಂಡಿದ್ದ ಸಾದಿಕ್ ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡೋಕು ಮುನ್ನ ಸಾದಿಕ್ ಮಚ್ಚು ಹಿಡಿದು ರೀಲ್ಸ್ ಮಾಡಿ ಬಿಲ್ಡಪ್ ಕೊಟ್ಟಿದ್ದ ಎನ್ನಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದನು ಬಳಿಕ ರಾತ್ರಿ 7.30 ಕ್ಕೆ ಗವಿಸಿದ್ದಪ್ಪನನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಇವನ ಜತೆ ಇನ್ನೂ ಮೂವರು ಭಾಗಿಯಾಗಿರೋ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಒಟ್ಟಾರೆಯಾಗಿ ಪ್ರೀತಿ ವಿಚಾರಕ್ಕೆ ಹಿಂದೂ ಯುವಕ ಕೊಲೆಯಾಗಿ ಹೋಗಿದ್ದಾನೆ.
ಇದನ್ನು ಓದಿ: