Back To Top

 ನಿಧಿ ಗಳಿಸುವ ಉದ್ದೇಶ, ಆರು ವರ್ಷದ ಬಾಲಕಿ ಅಪಹರಿಸಿ ಬಲಿ ಕೊಟ್ಟ ಸ್ವಂತ ಅತ್ತಿಗೆ: Hidden Treasure
August 1, 2025

ನಿಧಿ ಗಳಿಸುವ ಉದ್ದೇಶ, ಆರು ವರ್ಷದ ಬಾಲಕಿ ಅಪಹರಿಸಿ ಬಲಿ ಕೊಟ್ಟ ಸ್ವಂತ ಅತ್ತಿಗೆ: Hidden Treasure

ನಿಧಿ (Hidden Treasure) ಪಡೆಯುವ ಉದ್ದೇಶದಿಂದ (Chhattisgarh) ಮುಂಗೇಲಿ ಜಿಲ್ಲೆಯ ಕೋಶಾಬಾಡಿ ಗ್ರಾಮದಲ್ಲಿ 6, ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ (Kidnap), ಬಲಿ ಕೊಟ್ಟಿರುವ ಆಘಾತಕಾರಿ ಘಟನೆ ನಡೆದಿದೆ.

ಛತ್ತೀಸ್‌ಗಢ: ಜನರು ಬೇಗ ಹಣಗಳಿಸುವ ಮಾರ್ಗಗಳಿಗಾಗಿ ಎಷ್ಟು ಹೀನಾಯ ಸ್ಥಿತಿಗೆ ಇಳಿಯುತ್ತಾರೆ ಎನ್ನುವುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ನಿಧಿ (Hidden Treasure) ಪಡೆಯುವ ಉದ್ದೇಶದಿಂದ (Chhattisgarh) ಮುಂಗೇಲಿ ಜಿಲ್ಲೆಯ ಕೋಶಾಬಾಡಿ ಗ್ರಾಮದಲ್ಲಿ 6, ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ (Kidnap), ಬಲಿ ಕೊಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಬಾಲಕಿ ತಾಯಿಯ ಪಕ್ಕದಲ್ಲಿ ಮಲಗಿದ್ದ ವೇಳೆ ಕಾಣೆಯಾಗಿದ್ದಾಳೆ. ಮಗು ನಾಪತ್ತೆಯಿಂದ ಕುಟುಂಬ ಆತಂಕ್ಕೀಡಾಯಿತು.

ಆಸುಪಾಸಿನಲ್ಲಿ ಹುಡುಕಿದರೂ ಬಾಲಕಿ ಪತ್ತೆಯಾಗಲಿಲ್ಲ. ಕೆಲವು ದಿನಗಳ ನಂತರ, ಗ್ರಾಮದ ಸಮೀಪದ ಸ್ಮಶಾನದಲ್ಲಿ ಒಂದು ಅಸ್ಥಿಪಂಜರ ಕಂಡುಬಂದಿತು. ತನಿಖೆಯಲ್ಲಿ ಇದು ಕಾಣೆಯಾದ ಬಾಲಕಿಯದ್ದೇ ಎಂದು ದೃಢಪಟ್ಟಿತು.
ತನಿಖೆಯಲ್ಲಿ ಬಾಲಕಿಯ ಅತ್ತಿಗೆಯೇ ಈ ಕೃತ್ಯಕ್ಕೆ ಪ್ಲ್ಯಾನ್ ಮಾಡಿದ್ದಳು ಎಂದು ಬಯಲಾಯಿತು. ಗುಪ್ತ ಧನವನ್ನು ಪಡೆಯಲು ಬಾಲಕಿಯನ್ನು ಬಲಿಕೊಡಬೇಕೆಂದು ಸ್ಥಳೀಯ ಮಾಂತ್ರಿಕ ಸಲಹೆ ನೀಡಿದ್ದನು. ಅತ್ತಿಗೆಯು ₹500ಗೆ ಸ್ಥಳೀಯ ವ್ಯಕ್ತಿಯೊಬ್ಬನನ್ನು ಕೂಲಿಗೆ ನೇಮಿಸಿ, ಬಾಲಕಿಯನ್ನು ಅಪಹರಿಸಿದ್ದಳು. ಆರೋಪಿಯು ಬಾಲಕಿಯನ್ನು ಸ್ಮಶಾನದ ಸಮೀಪದ ಒಂಟಿಯಾದ ಸ್ಥಳಕ್ಕೆ ಕರೆದೊಯ್ದು, ವಾಮಾಚಾರಕ್ಕಾಗಿ ಕೊಲೆ ನಡೆಸಿದ್ದಾನೆ. ಬಾಲಕಿಯ ಕುಟುಂಬವು ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದೆ.
ಮುಂಗೇಲಿ ಪೊಲೀಸರು ಈಗಾಗಲೇ ಐವರನ್ನು ಬಂಧಿಸಿದ್ದಾರೆ, ಇದರಲ್ಲಿ ಬಾಲಕಿ ಅತ್ತಿಗೆ, ಅಪಹರಣಕಾರ, ಮತ್ತು ಮಾಂತ್ರಿಕ ಕೂಡ ಸೇರಿದ್ದಾರೆ. ಈ ಘಟನೆ ಸ್ಥಳೀಯ ಸಮುದಾಯದಲ್ಲಿ ಆತಂಕ ಮತ್ತು ಆಕ್ರೋಶ ಉಂಟುಮಾಡಿದೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.

ಇದನ್ನು ಓದಿ:

Prev Post

1 ವರ್ಷದ ಗಂಡು ಮಗುವನ್ನು ಬಸ್ ಸ್ಟಾಂಡಿನಲ್ಲಿ ಬಿಟ್ಟು ಪ್ರಿಯಕರನೊಂದಿಗೆ ಓಡಿದ ಮಹಾತಾಯಿ

Next Post

ಇಂದು ಧರ್ಮಸ್ಥಳದ ನೇತ್ರಾವತಿ ತಟದಲ್ಲಿ ಬುರುಡೆ ರಹಸ್ಯದ ತನಿಖೆ: Dharmasthala case

post-bars

Leave a Comment

Related post