ಸೈಲೆಂಟ್ ಆಗಿ ಬಂದು, ಘರ್ಜಿಸ್ತಿದ್ದಾಳೆ, ಸುಲೋಚನಾ ಫ್ರಮ್ ಸೋಮೇಶ್ವರ (su from so)
ಇಂದುಧರ ಹಳೆಯಂಗಡಿ
- 2024ರ ಅಂತ್ಯದಲ್ಲಿ ಶೂಟಿಂಗ್ ಆರಂಭ; 7 ತಿಂಗಳೊಳಗೆ ಬಿಡುಗಡೆಗೆ ಸಿದ್ಧ
- 2025ರ ಜೂನ್‌ನಲ್ಲಿ ಟೈಟಲ್ ಘೋಷಣೆ, ಜುಲೈನಲ್ಲಿ ಸಿನಿಮಾ ಬಿಡುಗಡೆ
- ಯಾವ ಅಬ್ಬರವೂ ಇಲ್ಲ; ಹೊಸಬರ ಸಿನಿಮಾವಾದರೂ ಯಾವ PR ಸ್ಟಂಟೂ ಇಲ್ಲ!
- ಕಂಟೆಂಟೇ ಇದರ ಜೀವ; ಪ್ರೇಕ್ಷಕರೇ ಇವರ ಪ್ರಾಮಾಣಿಕ ಪ್ರೊಮೋಟರ್ಸ್!
‘Su From So’ ಸಿನಿಮಾ ಭಯಂಕರ ಸೌಂಡ್ ಮಾಡ್ತಿದೆ. ಎಲ್ಲ ಕಡೆ houseful shows ನಡೀತಿದೆ. Raj B Shetty ಯವರು Lighter Buddha Films ಕಡೆಯಿಂದ ಕರೆ ಕೊಟ್ಟ ಹಾಗೆ, ಜನರೇ ಈ ಸಿನಿಮಾದ ಪ್ರಾಮಾಣಿಕ ಪ್ರೊಮೋಟರ್ಸ್ ಆಗ್ತಿದ್ದಾರೆ. On the other hand, ಬೇರೆ ಭಾಷೆಗಳ dubbing rights ಸಹ sale ಆಗಿ, ಬೇರೆ ಭಾಷೆಗಳಲ್ಲೂ ಥಿಯೇಟರ್‌ಗೆ ಈ ಸಿನಿಮಾ ಬರಲಿದೆ.
ಇಲ್ಲಿ, ನನ್ನ ಗಮನ ಸೆಳೆದದ್ದು ಇದರ marketing. ಯಾವ ಸದ್ದೂ ಇಲ್ಲದೇ ಬಂದು, ಬಿಡುಗಡೆಯ ಎರಡ್ಮೂರು ದಿನಗಳ ಹಿಂದಿನವರೆಗೂ ಸಿನಿಮಾದ ಹೆಸರೇ ಕೇಳದವರು, ಈಗ ಟಿಕೆಟ್ ಸಿಗ್ತಿಲ್ಲ, shows ಹೆಚ್ಚಿಸಿ ಎಂದು ಕೇಳುವ ಹಾಗಾಗಿದೆ. ಇದು ಕನ್ನಡ ಸಿನಿಮಾದ, ಸಿನಿ ಪ್ರೇಕ್ಷಕನ ಗೆಲುವು.
ನಿರ್ದೇಶಕ ಜೆ ಪಿ ತುಮಿನಾಡ್ ಅವರು ಒಂದು ಸಂದರ್ಶನದಲ್ಲಿ ಹೇಳಿದ ಹಾಗೆ, ಈ ಸಿನಿಮಾದ ಕಥೆ ಹುಟ್ಟಿಕೊಂಡದ್ದು 2019ರಲ್ಲಿ. ಅದನ್ನು ಹಂತಹಂತವಾಗಿ develop ಮಾಡಿಕೊಂಡು ಬಂದು, ಜೊತೆಗೆ script ಗೆ final ರೂಪವನ್ನು ಕೊಟ್ಟರು.
2024 ಅಕ್ಟೋಬರ್ 12ನೇ ತಾರೀಖಿನಂದು ಈ ಸಿನಿಮಾದ script ಪೂಜೆ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ನಡೆಯಿತು (Title announce ಆಗಿರಲಿಲ್ಲ. Production No. 3 script ಅದು). ಆಮೇಲೆ ಯಾವ ಅಪ್ಡೇಟೂ ಇರ್ಲಿಲ್ಲ. 2024ರ ಡಿಸೆಂಬರ್ ನಿಂದ 2025ರ ಫೆಬ್ರವರಿವರೆಗೆ 3 schedule ನಲ್ಲಿ ಯಾವ ಅಬ್ಬರ/ ಪ್ರಚಾರವೂ ಇಲ್ಲದೇ ಶೂಟಿಂಗ್ ಮುಗಿಸಿದರು.
- 2025 ಜೂನ್ 21 ರಂದು ‘ಸು ಫ್ರಮ್ ಸೋ’ ಸಿನಿಮಾದ ಟೈಟಲ್ ಘೋಷಿಸಲಾಯಿತು.
- 2025 ಜೂನ್ 27 ರಂದು ಈ ಸಿನಿಮಾದ ಒಂದು ವೀಡಿಯೋ ಸಾಂಗ್, Danks Anthem’ ಬಿಡುಗಡೆ ಮಾಡಲಾಯಿತು. ಅದರ ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಘೋಷಿಸಲಾಯಿತು – 25/07/2025
- 2025 ಜುಲೈ 15 ರಂದು ಟ್ರೇಲರ್ ಬಿಡುಗಡೆ – ಯಾವ ಇವೆಂಟನ್ನೂ ಮಾಡದೇ, ಮಾಮೂಲಿಯಾಗಿ ಸೋಶಿಯಲ್ ಮಿಡಿಯಾಗಳಲ್ಲಿ ಟ್ರೇಲರ್ ಹರಿಬಿಡಲಾಯಿತು.
- 2025 ಜುಲೈ 19 ರಂದು ರಾಜ್ ಬಿ ಶೆಟ್ಟಿಯವರು premier show ಬಗ್ಗೆ ಹಾಗೂ ಪ್ರಾಮಾಣಿಕ ಪ್ರೊಮೋಟರ್ಸ್ ಬಗ್ಗೆ ಮಾಹಿತಿ ನೀಡಿದರು. ರಾಜ್ಯಾದ್ಯಂತ 4 ದಿನ ಜುಲೈ 21, 22, 23 ಹಾಗೂ 24 ರಂದು ಕ್ರಮವಾಗಿ ಮಂಗಳೂರು, ಶಿವಮೊಗ್ಗ, ಮೈಸೂರು ಹಾಗೂ ಬೆಂಗಳೂರಿನಲ್ಲಿ paid premier show ಆಯೋಜಿಸಲಾಯಿತು.
- 2025 ಜುಲೈ 21 ಹಾಗೂ 22 ರಂದು premier ಗೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಗಳಿಂದ ಮುಂದಿನ 2 ದಿನ ಪ್ರೀಮಿಯರ್ ಶೋ ಸಂಖ್ಯೆಗಳನ್ನೇ ಹೆಚ್ಚಿಸಲಾಯಿತು. ಹುಬ್ಬಳ್ಳಿ, ಧಾರವಾಡ, ಮುಂಬೈ, ಹೈದರಾಬಾದ್‌ನಲ್ಲೂ screen ಮಾಡಲಾಯಿತು. ಮೊದಲು plan ಮಾಡಿದ 4 ಶೋಗಳಲ್ಲಿ ಖುದ್ದು ಚಿತ್ರತಂಡದ ಉಪಸ್ಥಿತಿಯಿತ್ತು.
- 2025 ಜುಲೈ 25 ರಂದು ಸು ಫ್ರಮ್ ಸೋ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಯಿತು. ಅದಕ್ಕೂ ಮೊದಲೇ 30 Paid premier show ಗಳು houseful ಪ್ರದರ್ಶನ ಕಂಡಿದ್ದವು. ಆ ಶೋಗಳ ಪ್ರೇಕ್ಷಕರ review, reaction ಗಳೇ ಸಿನಿಮಾವನ್ನು ಮತ್ತಷ್ಟು ಪ್ರೊಮೋಟ್ ಮಾಡಿತು. They were the honest promoters.
ಬರೇ ಒಂದು ತಿಂಗಳಲ್ಲಿ ಶೀರ್ಷಿಕೆ ಘೋಷಿಸಿ, ಸಿನಿಮಾ ಬಿಡುಗಡೆ ಮಾಡಿ ಯಶಸ್ಸು ಗಳಿಸೋದು ಅಷ್ಟು ಸುಲಭವಲ್ಲ. ತಿಂಗಳಾನುಗಟ್ಟಲೆ ಏನೇನೋ ತಂತ್ರ ಬಳಸಿ ಪ್ರಚಾರ ಮಾಡಿದರೂ ಜನ್ರನ್ನ ಥಿಯೇಟರ್ ಕಡೆಗೆ ಕರೆದುಕೊಂಡು ಬರುವಲ್ಲಿ ಅದೆಷ್ಟೋ ನಿರ್ದೇಶಕರು, ಸಿನಿಮಾ ನಿರ್ಮಾಪಕರು ವಿಫಲರಾಗ್ತಾರೆ. ಹೀಗಿರುವಾಗ ಲೈಟರ್ ಬುದ್ಧ ನಿರ್ಮಾಣ ಸಂಸ್ಥೆಯಿಂದ ಹೊರಬಂದ ಜೆಪಿ ತುಮಿನಾಡ್ ನಿರ್ದೇಶನದ ಮೊದಲ ಸಿನಿಮಾಗೆ ಈ ಪರಿ ಜನಾಭಿಪ್ರಾಯ ವ್ಯಕ್ತ ಆಗಿರೋದು ನಿಜಕ್ಕೂ ಸಿನಿಮಾದ ಶಕ್ತಿಯನ್ನು ತೋರಿಸುತ್ತಿದೆ. ಈ ಸಿನಿಮಾದ ಶಕ್ತಿ – ಯಾವ ವ್ಯಕ್ತಿಯೂ ಅಲ್ಲ; ಬದಲಾಗಿ ಸಿನಿಮಾದ ಕಥೆ; ಗಟ್ಟಿಯಾಗಿರೋ ಚಿತ್ರಕಥೆ.
ಅದೇ ಧೈರ್ಯದಲ್ಲಿ ಇವರು paid premier show ಗಳನ್ನು ಏರ್ಪಡಿಸಿದ್ದು. ಅಲ್ಲೂ ಯಾವ content creator ಗಳನ್ನಾಗಲಿ, face value ಇರೋ ಯಾವೊಬ್ಬ ಸ್ಟಾರ್ ಗಳನ್ನಾಗಲಿ ಕರೆಯದೇ, ಜನರೇ ನಮ್ಮ promoters ಅಂಥ ಎಲ್ಲ ಸೀಟುಗಳನ್ನು ಜನರಿಗಾಗಿಯೇ ಮೀಸಲಿಟ್ಟರು. ಇದು ಒಬ್ಬ ಸಿನಿಮಾ ನಿರ್ದೇಶಕನಿಗೆ, ಬರಹಗಾರನಿಗೆ ತನ್ನ ಕಥೆಯ ಮೇಲಿರೋ ನಂಬಿಕೆಯನ್ನು ತೋರಿಸುತ್ತದೆ.
ಸಿನಿಮಾ ಮಂದಿಗೆ ಈ ಧೈರ್ಯ ಬೇಕು. ತಮ್ಮ ಸಿನಿಮಾದ ಮೇಲೆ ತಮಗೆ ನಂಬಿಕೆ ಇದ್ದರೆ, ಜನ ಖಂಡಿತ ಸ್ವೀಕರಿಸಿ ಗೆಲ್ಲಿಸ್ತಾರೆ. ರಾಜ್ ಬಿ ಶೆಟ್ಟಿಯವರು ಹೇಳಿದ ಹಾಗೆ, “ಜನ ಥಿಯೇಟರ್ ಕಡೆಗೆ ಬರಲ್ಲ, ಕನ್ನಡ ಸಿನಿಮಾಗಳಿಗೆ screen ಸಿಗ್ತಿಲ್ಲ ಅಂತ ಸುಮ್ಮನೆ ಬಾಯ್ಬಡ್ಕೊಳ್ಳೋಗಿಂತ ಕಂಟೆಂಟ್ ಮೂಲಕ ಹೊರಡೋಣ. ಕಂಟೆಂಟ್ ಹಿಡಿದುಕೊಂಡು ಸ್ಕ್ರೀನ್ ಕೇಳೋಣ. ಜನ ಡಿಮ್ಯಾಂಡ್ ಮಾಡಿದಾಗ ಅದು ಹೇಗೆ screen ಕೊಡಲ್ಲ?”. This is his level of maturity.
Star ಸಿನಿಮಾಗಳಿಗೆ ಕಾಯದೇ, ಸ್ಟಾರ್ ಗಳು ಮಾತ್ರ hit ಸಿನಿಮಾಗಳನ್ನು ಕೊಡ್ತಾರೆ ಅನ್ನೋ ನಂಬಿಕೆಯನ್ನು ಹೋಗಲಾಡಿಸುವ ಸಮಯ ಬಂದಿದೆ. ಹೊಸಬರು ಇಂತಹ quality content ಗಳನ್ನು ಮಾಡಬೇಕು. ಕಡಿಮೆ budget ನಲ್ಲೂ best output ತರಬಹುದು ಅನ್ನೋದನ್ನು Su from So ನವರು ಮಾಡಿತೋರಿಸಿದ್ದಾರೆ.
ಇಂಕಿಡಿ #SuFromSo #kannadacinema
ಇದನ್ನು ಓದಿ: