ಏರ್‌ಪೋರ್ಟ್‌ನ ರಾಮೇಶ್ವರಂ ಕೆಫೆಯಲ್ಲಿ ಪೊಂಗಲ್ ತಿನ್ನುವಾಗ ಹುಳ ಪತ್ತೆ: ಆಕ್ರೋಶ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ (kempegowda international airport) ಜನಪ್ರಿಯ ರಾಮೇಶ್ವರಂ ಕೆಫೆಯಲ್ಲಿ (rameshwaram cafe) ಖರೀದಿಸಿದ ಪೊಂಗಲ್‌ನಲ್ಲಿ (Pongal) ಹುಳ (Cockroach) ಪತ್ತೆಯಾಗಿದ್ದು, ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ ಶುಚಿ, ರುಚಿ, ಹರಟೆ ಹೊಡೆಯುತ್ತಾ ತಿನ್ನೋ ಕೆಲವರ ಫೇವರೆಟ್ ಸ್ಥಳ, ಆದರೆ ಅದೇ ನಂಬಿಕೆಯಲ್ಲಿ ತಿಂಡಿ ತಿನ್ನಲು ಹೋದ ವ್ಯಕ್ತಿಗೆ ಪೊಂಗಲ್ ನಲ್ಲಿ ಹುಳ ಸಿಕ್ಕಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ (kempegowda international airport) ಜನಪ್ರಿಯ ರಾಮೇಶ್ವರಂ ಕೆಫೆಯಲ್ಲಿ (rameshwaram cafe) ಖರೀದಿಸಿದ ಪೊಂಗಲ್‌ನಲ್ಲಿ (Pongal) ಹುಳ (Cockroach) ಪತ್ತೆಯಾಗಿದ್ದು, ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗ್ಗೆ ವ್ಯಕ್ತಿ ಒಬ್ಬರು ವಿಮಾನ ನಿಲ್ದಾಣದ ರಾಮೇಶ್ವರಂ ಕೆಫೆಯಿಂದ 300 ರೂಪಾಯಿ ಹಣ ನೀಡಿ ಪೊಂಗಲ್ ಮತ್ತು 180 ರೂ.ಗೆ ಫಿಲ್ಟರ್ ಕಾಫಿ ಖರೀದಿಸಿದ್ದರು. ಒಟ್ಟು ಬಿಲ್ 504 ರೂ. ಆಗಿತ್ತು. ಅವರು ಅದನ್ನು ತಿನ್ನುತ್ತಿದ್ದಾಗ ಅದರಲ್ಲಿ ಹುಳ ಕಾಣಿಸಿಕೊಂಡಿದೆ. ತಕ್ಷಣವೇ ಅವರು ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ತಪ್ಪಾಗಿದೆ ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ.
ಈ ಘಟನೆ ತೀವ್ರ ಅಸಮಾಧಾನ ಮೂಡಿಸಿದ್ದು, ಆಹಾರ ಗುಣಮಟ್ಟ ಮತ್ತು ನೈರ್ಮಲ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಆಹಾರ ಸೇವಿಸುವಾಗಲೇ ಹುಳ ಪತ್ತೆಯಾಗಿದೆ. ಇದರ ಬೆನ್ನಲ್ಲಿಯೇ ಗ್ರಾಹಕ ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ದಾರೆ. ಇನ್ನು ಸಿಬ್ಬಂದಿ ಹಾರಿಕೆ ಉತ್ತರ ನೀಡೋದಲ್ಲದೆ, ಪ್ಲೇಟ್‌ನ ಒಳಗಿದ್ದ ಜಿರಳೆಯನ್ನು ತೆಗೆದುಹಾಕಲು ಪ್ರಯತ್ನಿಸಿರುವುದು ಕಂಡಿದೆ. ಆಗ ಗ್ರಾಹಕ ಅದನ್ನು ತೆಗೆದಿದ್ದು ಏಕೆ ಎಂದು ಪ್ರಶ್ನೆ ಮಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಸದ್ಯ ರಾಮೇಶ್ವರಂ ಕೆಫೆಯಲ್ಲಿ ನಿತ್ಯ ಆಹಾರ ಸೇವಿಸುವ ಗ್ರಾಹಕರಿಗೆ ತಿನ್ನಲೋ ಬೇಡವೋ ಎನ್ನುವಂತಾಗಿದೆ.
ಇದನ್ನು ಓದಿ: