ಹೊಸಕೋಟೆ ಬಿರಿಯಾನಿ ತಿನ್ನೋಕೆ ಬೆಳ್ಳಂಬೆಳಗ್ಗೆ ಓಡೋರಿಗೆ ಬ್ರೇಕ್: 6 ಗಂಟೆ ಮೇಲೆ ಇನ್ನು ಬಿರಿಯಾನಿ ಸಿಗತ್ತೆ: hosakote biriyani
ಸೂರ್ಯ ಹುಟ್ಟುವ ಮುನ್ನ ಮಟನ್, ಚಿಕನ್ ಬಿರಿಯಾನಿ ಬಾರಿಸಿ ಗುಡ್ ಮಾರ್ನಿಂಗ್ ಹೇಳುತ್ತಿದ್ದವರಿಗೆ ಶಾಕಿಂಗ್ ವಿಚಾರವೊಂದು ಹೊರಬಿದ್ದಿದೆ. ಅದೇನು ಅಂದ್ರೆ ಇನ್ಮುಂದೆ ನಿಮ್ಮ ನೆಚ್ಚಿನ 4 am ಬಿರಿಯಾನಿ ಸಿಗಲ್ಲ. hosakote biriyani
ಹೊಸಕೋಟೆ: ಗೆಳೆಯರ ಜೊತೆ ನೈಟ್ ಲಾಂಗ್ ರೈಡ್ ಹೋಗಿ ಬೆಳಗ್ಗೆ ಹೊಸಕೋಟೆ ಬಿರಿಯಾನಿ ತಿಂದು ಬರೋಣ ಅಂತ ಬರೋರಿಗೆ ಬ್ರೇಕ್ ಬಿದ್ದಿದೆ. ಹೊಸಕೋಟೆ ಬಿರಿಯಾನಿ ತಿನ್ನೋಕೆ ಬೆಳ್ಳಂಬೆಳಗ್ಗೆ ಓಡೋರಿಗೆ ಬ್ರೇಕ್ ಬಿದ್ದಿದೆ. ಹೊಸಕೋಟೆಯಲ್ಲಿ ಸಿಗೋ ಬಿರಿಯಾನಿ. 4 am ಬಿರಿಯಾನಿ ಎಂದೇ ಸಿಕ್ಕಾಪಟ್ಟೆ ಫೇಮಸ್. ಎಷ್ಟೋ ದೂರ ದೂರದಿಂದ ಬಂದು ಹೊಸಕೋಟೆ ಬಿರಿಯಾನಿಗಾಗಿ ಜನ ಕಿಲೋಮೀಟರ್ ಗಟ್ಟಲೆ ನಿಲ್ಲೋರು.
ಸೂರ್ಯ ಹುಟ್ಟುವ ಮುನ್ನ ಮಟನ್, ಚಿಕನ್ ಬಿರಿಯಾನಿ ಬಾರಿಸಿ ಗುಡ್ ಮಾರ್ನಿಂಗ್ ಹೇಳುತ್ತಿದ್ದವರಿಗೆ ಶಾಕಿಂಗ್ ವಿಚಾರವೊಂದು ಹೊರಬಿದ್ದಿದೆ. ಅದೇನು ಅಂದ್ರೆ ಇನ್ಮುಂದೆ ನಿಮ್ಮ ನೆಚ್ಚಿನ 4 am ಬಿರಿಯಾನಿ ಸಿಗಲ್ಲ.
ಹೊಸಕೋಟೆಯಲ್ಲಿ ಆನಂದ್ ಬಿರಿಯಾನಿ, ಅಕ್ಷಯ್ ಧಮ್ ಬಿರಿಯಾನಿ, ಮಣಿ ಬಿರಿಯಾನಿ ಅಂದ್ರೆ ಬೆಂಗಳೂರಿಗರಿಗೆ ಗೊತ್ತಿಲ್ಲದ ಜಾಗಗಳೇನಲ್ಲ. ಅಲ್ಲಿ ಎಷ್ಟು ಸಲ ಬಿರಿಯಾನಿ ತಿಂದಿಲ್ಲ? ಅಂತಿದ್ರು. ಕಿಲೋಮೀಟರ್‌ಗಟ್ಟಲೆ ಬಿರಿಯಾನಿಗಾಗಿ ಕ್ಯೂನಲ್ಲಿ ನಿಂತು ತಿನ್ನುತ್ತಿದ್ದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿತ್ತು. ಆದರೆ ಬಿರಿಯಾನಿ ತಿನ್ನುವ ಆಸೆಯಿಂದ ಜನ ಮಧ್ಯರಾತ್ರಿಯಿಂದಲೇ ಪ್ರಯಾಣ ಮಾಡುತ್ತಿದ್ದಾರೆ.
ಕೆಲವರು ಲಾಂಗ್ ಡ್ರೈವ್, long drive ಜಾಲಿ ರೈಡ್ ಹೆಸರಲ್ಲಿ ಅತಿವೇಗವಾಗಿ ವಾಹನ ಚಾಲನೆ ಮಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಇದರಿಂದ ಅಪಘಾತಗಳು ಕೂಡ ಹೆಚ್ಚಾಗಿ ಸಂಭವಿಸುತ್ತಿದ್ದು, ಮುಂಜಾನೆಯೇ ಜನದಟ್ಟಣೆ ಕೂಡ ಕಂಡುಬರುತ್ತಿದೆ. ಈ ಎಲ್ಲದಕ್ಕೂ ಕಡಿವಾಣ ಹಾಕುವ ಉದ್ದೇಶದಿಂದ 4 ಗಂಟೆಗೆ ಬಿರಿಯಾನಿ ಮಾರಾಟ ಮಾಡದಂತೆ ಹೋಟೆಲ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ.
4 ಗಂಟೆ ಬದಲು ಬೆಳಿಗ್ಗೆ 6 ಗಂಟೆ ಬಿರಿಯಾನಿ ಮಾರಾಟ ಶುರು ಮಾಡುವಂತೆ ಸೂಚನೆ ಕೊಟ್ಟಿದ್ದಾರೆ. ಹಾಗಾಗಿ ಇನ್ನು ಮುಂದೆ ಆರು ಗಂಟೆಯ ನಂತರವಷ್ಟೇ ಬಿರಿಯಾನಿ ಸಿಗಲಿದೆ. ಈ ಬಗ್ಗೆ ಬಿರಿಯಾನಿ ಹೋಟೆಲ್‌ಗಳ ಮುಂಭಾಗ ಸೂಚನಾ ಫಲಕ ಹಾಕಿದ್ದು ಬೆಳಗೆದ್ದು ಬಿರಿಯಾನಿಗೆ ಓಡೋರಿಗೇ ಈಗ ನಿರಾಸೆಯಾಗಿದೆ.
ಇದನ್ನು ಓದಿ: