Back To Top

 ಪತ್ನಿಯ ಬಾತ್ ರೂಮ್ ವಿಡಿಯೋ ಚಿತ್ರೀಕರಿಸಿ ಹಣಕ್ಕೆ ಬೇಡಿಕೆ ಇಟ್ಟ ಪತಿ: bathroom video

ಪತ್ನಿಯ ಬಾತ್ ರೂಮ್ ವಿಡಿಯೋ ಚಿತ್ರೀಕರಿಸಿ ಹಣಕ್ಕೆ ಬೇಡಿಕೆ ಇಟ್ಟ ಪತಿ: bathroom video

ಹೆಂಡತಿ ಮೇಲೆ ಕೋಪಗೊಂಡ ಪತಿ, ಕೊನೆಗೆ ನೀಚ ಕೃತ್ಯಕ್ಕೆ ಇಳಿದನು. ಮನೆಯ ಸ್ನಾನಗೃಹದಲ್ಲಿ ಗಂಡ, ಗುಪ್ತ ಕ್ಯಾಮೆರಾ ಅಳವಡಿಸಿದ. husbend and wife

ಪುಣೆ: ಕೌಟುಂಬಿಕ ಕಲಹಗಳು ನಾನಾ ವಿಧದಲ್ಲಿ ನಡೆಯುತ್ತದೆ. ಅದು ಅಕ್ರಮ ಸಂಬಂಧ, ವಂಚನೆ ಇತ್ಯಾದಿ ಹಾಗೆಯೇ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಪತಿ ಮತ್ತು ಪತ್ನಿ ನಡುವೆ ಉಂಟಾದ ಜಗಳದಲ್ಲಿ ಹಣ ಕೇಳಿದರೂ ಪತ್ನಿ ಕೊಡದಿದ್ದಾಗ ಕೋಪಗೊಂಡ ಪತಿ ಆಕೆ ಸ್ನಾನ ಮಾಡುವಾಗ ಬಾತ್ ರೂಂನಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿ, ಪತ್ನಿಯ ನಗ್ನ ಚಿತ್ರ ಮತ್ತು ವಿಡಿಯೋಗಳನ್ನು ಸೆರೆಹಿಡಿದು, ಅವುಗಳನ್ನು ತೋರಿಸಿ ಬ್ಲಾಕ್ಮೇಲ್ ಮಾಡಿದ್ದಾನೆ.
ಘಟನೆ ಪುಣೆಯ ಅಂಬೆಗಾಂವ್‌ನಲ್ಲಿ ನಡೆದಿದೆ. couple ದಂಪತಿ 2020ರಲ್ಲಿ ವಿವಾಹವಾದರು. ಇಬ್ಬರೂ ಉನ್ನತ ಸರ್ಕಾರಿ ಅಧಿಕಾರಿಗಳು. ಕಾರು ಮತ್ತು ಮನೆಯ ಇಎಂಐ ಪಾವತಿಸಲು ಹಣ ನೀಡುವಂತೆ ತನ್ನ ಹೆಂಡತಿಯ ಬಳಿ ಗಂಡ ಒತ್ತಾಯಿಸಿದನು. ಹೆತ್ತವರ ಮನೆಯಿಂದಲೂ 1.5 ಲಕ್ಷ ರೂ. ತೆಗೆದುಕೊಂಡು ಬರುವಂತೆ ಒತ್ತಡ ಹೇರಿದನು. ಆದರೆ, ಇದ್ಯಾವುದಕ್ಕೂ ಆಕೆ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಪತಿ, ಕೊನೆಗೆ ನೀಚ ಕೃತ್ಯಕ್ಕೆ ಇಳಿದನು.
ಮನೆಯ ಸ್ನಾನಗೃಹದಲ್ಲಿ ಗಂಡ, ಗುಪ್ತ ಕ್ಯಾಮೆರಾ camara ಅಳವಡಿಸಿದ.
ಪತ್ನಿ ಸ್ನಾನ ಮಾಡುತ್ತಿದ್ದಾಗ ಕದ್ದು ಆಕೆಯ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿದ್ದಾನೆ. ಬಳಿಕ ಆ ವಿಡಿಯೋಗಳನ್ನು ಪತ್ನಿಗೆ ತೋರಿಸಿ ಕಾರು ಮತ್ತು ಮನೆಯ ಇಎಂಐಗಳಿಗೆ ಹಣ ನೀಡುವಂತೆ ಬ್ಲಾಕ್ಮೇಲ್ ಮಾಡಲು ಆರಂಭಿಸಿದ. ಆರೋಪಿ ಪತಿ, ತನ್ನ ಪತ್ನಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆಯನ್ನು ಸಹ ನೀಡಿದ್ದಾನೆ.
ಗಂಡನ ಈ ಕೃತ್ಯದಿಂದ ಆಘಾತಕ್ಕೊಳಗಾದ ಪತ್ನಿ, ಪೊಲೀಸ್ ಠಾಣೆಗೆ ಹೋಗಿ ಪತಿ ಮತ್ತು ಆತನ ಕುಟುಂಬದವರ ವಿರುದ್ಧ ದೂರು ದಾಖಲಿಸಿದ್ದಾಳೆ. ಪತಿ ಮತ್ತು ಆತನ ಕುಟುಂಬ ಸದಸ್ಯರು ಕೆಲವು ಸಮಯದಿಂದ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಇದನ್ನು ಓದಿ:

Prev Post

ಹೊಸಕೋಟೆ ಬಿರಿಯಾನಿ ತಿನ್ನೋಕೆ ಬೆಳ್ಳಂಬೆಳಗ್ಗೆ ಓಡೋರಿಗೆ ಬ್ರೇಕ್: 6 ಗಂಟೆ ಮೇಲೆ ಇನ್ನು…

Next Post

ಜಪಾನ್ ಗೆ ಪ್ರಯಾಣ ಬೆಳೆಸಲಿವೆ ಮೂರು ಆನೆಗಳು: ಬನ್ನೇರುಘಟ್ಟದಲ್ಲಿ ಇಂದು ಬೀಳ್ಕೊಡುಗೆ:

post-bars

Leave a Comment

Related post