ಜಪಾನ್ ಗೆ ಪ್ರಯಾಣ ಬೆಳೆಸಲಿವೆ ಮೂರು ಆನೆಗಳು: ಬನ್ನೇರುಘಟ್ಟದಲ್ಲಿ ಇಂದು ಬೀಳ್ಕೊಡುಗೆ:
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿರುವ (Bannerghatta Biological park) ನಲ್ಲಿರುವ ನಾಲ್ಕು ಆನೆಗಳು (Elephants) ಇಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ(KIAL) ಜಪಾನ್‌ಗೆ(JAPAN) ಪ್ರಯಾಣ ಮಾಡಲಿವೆ.
ಬೆಂಗಳೂರು: ರಾಜ್ಯಕ್ಕೆ ಹೆಮ್ಮೆ ಎನಿಸುವಂತೆ ಅಂತಾರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆಯಲ್ಲಿ ಒಂದು ಗಂಡು ಹಾಗೂ ಮೂರು ಹೆಣ್ಣಾನೆ ಜಪಾನ್ ಗೆ ತೆರಳಲಿವೆ. ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿರುವ (Bannerghatta Biological park) ನಲ್ಲಿರುವ ನಾಲ್ಕು ಆನೆಗಳು (Elephants) ಇಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ(KIAL) ಜಪಾನ್‌ಗೆ(JAPAN) ಪ್ರಯಾಣ ಮಾಡಲಿವೆ.
ಇದಕ್ಕೆ ಪ್ರತಿಯಾಗಿ ಜಪಾನ್‌ನಿಂದ ನಾಲ್ಕು ಚೀತಾ, ನಾಲ್ಕು ಪೂಮಾ , ಮೂರು ಚಿಂಪಾಂಜಿ, ಎಂಟು ಕ್ಯಾಪುಚಿನ್ ಕೋತಿಗಳು ಬನ್ನೇರುಘಟ್ಟಕ್ಕೆ ಬರಲಿವೆ. ಬೆಂಗಳೂರಿನಿಂದ ಜಪಾನ್‌ನ ಹಿಮೇಜಿ ಸೆಂಟ್ರಲ್ ಪಾರ್ಕ್‌ನ ಹಿಮೇಜಿ-ಸಫಾರಿ ಪಾರ್ಕ್‌ಗೆ ಆನೆಗಳು ಪ್ರಯಾಣ ಬೆಳೆಸಲಿವೆ.
ಈ ಪ್ರಕ್ರಿಯೆಗೆ ಕೇಂದ್ರ ಮೃಗಾಲಯ ಪ್ರಾಧಿಕಾರ, ನವದೆಹಲಿ ಮತ್ತು ಸಂಬಂಧಿತ ಇಲಾಖೆಗಳಿಂದ ಅಗತ್ಯ ಅನುಮೋದನೆ, ಅಧಿಕೃತ ಅರ್ಹತೆ ಪಡೆದ ನಂತರ ಪ್ರಕ್ರಿಯೆ ನಡೆಯಲಿದೆ.
ಬನ್ನೇರುಘಟ್ಟದಿಂದ ಆನೆಗಳಾದ ಸುರೇಶ್ (8 ವರ್ಷ), ಗೌರಿ (9), ಶ್ರುತಿ (7) ಹಾಗೂ ತುಳಸಿ (5) ಕತಾರ್ ಏರ್‌ವೇಸ್ ಸರಕು ಸಾಗಣೆ ವಿಮಾನದಲ್ಲಿ ಜಪಾನ್ ಗೆ ಪ್ರಯಾಣ ಬೆಳೆಸಲಿದೆ.
ಜಪಾನ್ ಗೆ ತಲುಪಲು ಬರೋಬ್ಬರಿ 8 ಗಂಟೆಗಳ ಪ್ರಯಾಣವಿದ್ದು, ಜಪಾನ್ ಒಸಾಕಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಆನೆಗಳು ತಲುಪಲಿವೆ. ಆನೆಗಳ ಆರೋಗ್ಯದ ಹಿತ ದೃಷ್ಟಿಯಿಂದ ವಿಮಾನ ಪ್ರಯಾಣ, ಆಹಾರ, ಹೊಸ ಪರಿಸರಕ್ಕೆ ಹೊಂದಾಣಿಕೆ ಕುರಿತು ಒಟ್ಟು 6 ತಿಂಗಳಿನಿಂದ ಬನ್ನೇರುಘಟ್ಟದಲ್ಲಿ ಆನೆಗಳಿಗೆ ತರಬೇತಿ ನೀಡಲಾಗಿತ್ತು ಎಂದು ತಿಳಿದುಬಂದಿದೆ.
ನಾಲ್ಕೂ ಆನೆಗಳು ಆರೋಗ್ಯದಿಂದ ಇವೆ. ಬೀಳ್ಕೊಡುಗೆಗೆ ಜಪಾನ್ ನ B777-200F ಮೂಲಕ ಅಲ್ಲಿನ ಒಸಾಕಾದ ಕಾನ್ಸೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ನಾಲ್ಕು ಆನೆಗಳು ಪ್ರಯಾಣ ಮಾಡದ್ದು, ಹಿಮೇಜಿ ಸೆಂಟ್ರಲ್ ಪಾರ್ಕ್ ತಲುಪಲು 20 ಗಂಟೆಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ಸುದೀರ್ಘ ಪ್ರಯಾಣದಲ್ಲಿ ಆನೆಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿದೆ. ಆನೆಗಳ ಆರೋಗ್ಯದ ದೃಷ್ಟಿಯಿಂದ ವೈದ್ಯರ ತಂಡವೂ ಪ್ರಯಾಣ ಬೆಳೆಸಲಿದ್ದು 2 ವಾರ ಆರೋಗ್ಯ ಅವುಗಳ ಗಮನಿಸಲಿವೆ.
ಇದನ್ನು ಓದಿ: