
“ಯಕ್ಷ ಕಿಂಕರ” yaksha kinkara
ತಮ್ಮ ಅಮ್ಮನ ಸ್ಪೂರ್ತಿಯಿಂದ ಹಾಗೂ ಅಣ್ಣನ ಬೆಂಬಲದಿಂದ 2012-2013ರಲ್ಲಿ ಧರ್ಮಸ್ಥಳ ಮೇಳಕ್ಕೆ ಗೌತಮ್ ಶೆಟ್ಟಿ ಬೆಳ್ಳಾರೆ ಪಾದಾರ್ಪಣೆ ಮಾಡಿದರು.
ಸುಭಾಷ್ ರೈ ಹಾಗೂ ಸುಗುಣ ಸುಭಾಷ್ ರೈ ಅವರ ದ್ವಿತೀಯ ಪುತ್ರನಾಗಿ , ಅಣ್ಣ ಅವಿನಾಶ್ ಶೆಟ್ಟಿ ಅವರ ಮುದ್ದಿನ ತಮ್ಮನಾಗಿ 08-08-1998 ರಲ್ಲಿ ಸುಳ್ಯ ತಾಲೂಕಿನ ಕೋಟೆ ಮುಂಡುಗಾರು ಗ್ರಾಮದಲ್ಲಿ ಗೌತಮ್ ಶೆಟ್ಟಿ ಬೆಳ್ಳಾರೆ ಅವರ ಜನನ. ಕಲಾವಿದನಿಗೆ ತನ್ನ ಕಲೆಯೇ ಬದುಕು ಮತ್ತು ಜೀವನಾಡಿ ಎಂಬ ಮಾತು ನಿಜವೆನಿಸಿ, ಬಡತನದ ಸವಾಲನ್ನು ಮೆಟ್ಟಿನಿಂತು ಪ್ರೌಢಶಿಕ್ಷಣವನ್ನು ಪೂರೈಸಿ ತಮ್ಮ 14ನೇ ವಯಸ್ಸಿನಲ್ಲಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಲ್ಲಿ ಗುರುಗಳಾದ ಸಬ್ಬಣ ಕೋಡಿ ರಾಮ ಭಟ್ಟರಲ್ಲಿ ನಾಟ್ಯ ತರಬೇತಿ ಪಡೆದರು. ಯಾವುದೇ ಕಲೆಗೆ ಮುಖ್ಯ ಬೇಕಾದದ್ದು ಸ್ಪೂರ್ತಿ ಮತ್ತು ಬೆಂಬಲ. ತಮ್ಮ ಅಮ್ಮನ ಸ್ಪೂರ್ತಿಯಿಂದ ಹಾಗೂ ಅಣ್ಣನ ಬೆಂಬಲದಿಂದ 2012-2013ರಲ್ಲಿ ಧರ್ಮಸ್ಥಳ ಮೇಳಕ್ಕೆ ಪದಾರ್ಪಣೆ ಮಾಡಿದರು.

ಯಕ್ಷಗಾನದಲ್ಲಿ ತನ್ನದೇ ಶಿಸ್ತು, ಸಂಪ್ರದಾಯವನ್ನು ರೂಢಿಸಿಕೊಂಡು, ತನ್ನದೇ ಆದ ವಿಶಿಷ್ಟ ಶೈಲಿ, ಬಾಲಗೋಪಾಲ ಹಾಗೂ ಸ್ತ್ರೀವೇಷದಿಂದ ಶುರುವಾದ ಇವರ ಪಯಣ ಹಂತ ಹಂತವಾಗಿ ಬಣ್ಣದ ಬದುಕು ಪುಂಡುವೇಷದಲ್ಲಿ ರಾರಾಜಿಸುವುದಕ್ಕೆ ಆರಂಭವಾಯ್ತು. ಇವರು ಭಾರ್ಗವ, ಇಂದ್ರಜಿತು, ಲಕ್ಷ್ಮಣ, ಲೀಲೆಯ ಕೃಷ್ಣ, ಚಂಡ ಮುಂಡ, ಧೀರಮತಿ ಭೌಮಾಸುರ, ಯಕ್ಷ, ಮನ್ಮಥ ಹೀಗೆ ಹಲವಾರು ವೇಷದಲ್ಲಿ ತಮ್ಮದೇ ಆದ ಛಾಪನ್ನು ಸೃಷ್ಟಿಸಿ ಪ್ರಸ್ತುತ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯಲ್ಲಿ ಕನ್ಯಾಕುಮಾರಿಯಾಗಿ ಹಾಗೂ ಕಳರ್ಕಾಯಿಯಾಗಿ ತಮ್ಮದೆ ಆದ ಬಣ್ಣಗಾರಿಕೆಯ ಮೂಲಕ, ಅರ್ಥಗರ್ಭಿತ ಮತ್ತು ತೂಕಬದ್ಧ ಮಾತಿನೊಂದಿಗೆ ಸಚೇತಗೊಳಿಸುವ ಚಾಕಚಕ್ಯತೆ ಇರುವ ಪ್ರಬುದ್ಧ ಕಲಾವಿದ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ಪ್ರಸಂಗದ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು, ಮೇಳದ ಕಲಾವಿದರು ವಸಂತ ಗೌಡ ಕಾಯರ್ತಡ್ಕ, ಚಂದ್ರಶೇಖರ್ ಧರ್ಮಸ್ಥಳ, ಮಹೇಶ್ ಮಣಿಯಾಣಿ, ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ ಬಳಿ ಕೇಳಿ ತಯಾರಿ ಮಾಡಿಕೊಳ್ಳುತ್ತೇನೆ.
ಮಳೆಗಾಲದಲ್ಲಿ ನಿಡ್ಲೆ ಮಹಾಗಣಪತಿ ಯಕ್ಷಗಾನ ಮಂಡಳಿ ಅವರ ತಂಡದಲ್ಲಿ ತಿರುಗಾಟ ಮಾಡಿದ್ದೇನೆ. ಒಳ್ಳೆಯ ಯಕ್ಷಗಾನ ಪ್ರೇಕ್ಷಕರು ಇದ್ದಾರೆ. ಅವರ ಆಶೀರ್ವಾದದಿಂದ ನಾವಿಲ್ಲಿದ್ದೇವೆ. ಅವರ ಆಶೀರ್ವಾದ ಸದಾ ನಮ್ಮ ಮೇಲಿದ್ದರೆ ಸಾಕು.
ನಾನು ಯಕ್ಷಗಾನದಲ್ಲಿ ಇರುವ ತನಕ ನಮ್ಮ ತಾಯಿನಾಡಿಗೆ ಬೇಕಾಗಿ ಹೋರಾಡುವ ಯೋಧರನ್ನು ನಾನು ಯಕ್ಷ ಮಾತೆಯ ಮಡಿಲಲ್ಲಿ ಗೌರವಿಸಬೇಕು ಎಂಬ ಅಸೆ ಇದೆ ಎಂದು ಹೇಳುತ್ತಾರೆ ಗೌತಮ್ ಶೆಟ್ಟಿ ಬೆಳ್ಳಾರೆ.

ಹುಟ್ಟೂರಿನಲ್ಲಿ ಯುವ ಪ್ರತಿಭೆ ನೀಡಿ ಸನ್ಮಾನ, ಆತ್ಮೀಯ ಗೆಳೆಯರು ಸೇರಿ ಯಕ್ಷ ರತ್ನ ಎಂಬ ಬಿರುದು ನೀಡಿದ್ದಾರೆ.
ನನ್ನ ಜೀವನದ ಆದರ್ಶ ಯೋಧರು ಯಕ್ಷ ಯೋಧ ಬೆಳ್ಳಾರೆ ಎಂಬ ಹೆಸರನ್ನು ಕೊಟ್ಟವರು ಮೊದಲು ಶ್ರದಾ ರಾವ್ ಅವರಿಗೆ ಯಾವತ್ತಿಗೂ ನಾನು ತುಂಬಾ ಅಭಾರಿ ಆಗಿರುತ್ತೇನೆ ಎಂದು ಹೇಳುತ್ತಾರೆ ಗೌತಮ್ ಶೆಟ್ಟಿ ಬೆಳ್ಳಾರೆ.
ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಗೌತಮ್ ಶೆಟ್ಟಿ ಬೆಳ್ಳಾರೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು :– +918317463705
ಇದನ್ನು ಓದಿ: