Back To Top

 ಸಹಾಯ ಕೋರಿ ಕರೆ ಮಾಡಿದ ಮಹಿಳೆ ಮೇಲೆ ಅತ್ಯಾಚಾರ, ಹಣ ಕಸಿದು ದರ್ಪ ತೋರಿದ ಪೊಲೀಸ್

ಸಹಾಯ ಕೋರಿ ಕರೆ ಮಾಡಿದ ಮಹಿಳೆ ಮೇಲೆ ಅತ್ಯಾಚಾರ, ಹಣ ಕಸಿದು ದರ್ಪ ತೋರಿದ ಪೊಲೀಸ್

112 ತುರ್ತು ಸೇವೆಗೆ ರಕ್ಷಣೆ ಕೋರಿ ಕರೆ ಮಾಡಿದ್ದ ಮಹಿಳೆಯ ಮೇಲೆ ಡಿಎಆರ್ ಪೊಲೀಸ್ ಪೇದೆ ಪುಟ್ಟಸ್ವಾಮಿ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಆರೋಪಿ ಪೇದೆಯನ್ನು ಅಮಾನತುಗೊಳಿದೆ.

ರಾಮನಗರ: ಕಾನೂನು ರಕ್ಷಣೆ ಮಾಡುವವರು, ಅಪರಾಧ ತಡೆಗೆ ಶ್ರಮಿಸುವವರೇ ಜನರ ನಂಬಿಕೆಗೆ ಕಳಂಕ ತಂದರೆ?. ಅಥವಾ ಅಪರಾಧ ಕೃತ್ಯ ಎಸಗಿದರೆ?.. ಅಂಥ ಹೇಸಿಗೆ ಕೃತ್ಯ ಮಾಡಿದ ಪೊಲೀಸ್ ಅಂದ್ರೆ ನಂಬ್ತೀರಾ?.
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಎಂ.ಕೆ. ದೊಡ್ಡಿ ಠಾಣಾ ವ್ಯಾಪ್ತಿಯ ಒಬ್ಬ ಪೋಲಿಸ್ ಈ ಘಟನೆಯ ಆರೋಪಿ ಆಗಿದ್ದಾರೆ.

112 ತುರ್ತು ಸೇವೆಗೆ ರಕ್ಷಣೆ ಕೋರಿ ಕರೆ ಮಾಡಿದ್ದ ಮಹಿಳೆಯ ಮೇಲೆ ಡಿಎಆರ್ ಪೊಲೀಸ್ ಪೇದೆ ಪುಟ್ಟಸ್ವಾಮಿ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಆರೋಪಿ ಪೇದೆಯನ್ನು ಅಮಾನತುಗೊಳಿದೆ.
ಎಂ.ಕೆ. ದೊಡ್ಡಿ ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬರು ತಮ್ಮ ಊರಿನಲ್ಲಿ ಗಲಾಟೆಯಾಗುತ್ತಿದೆ ಎಂದು 112 ತುರ್ತು ಸೇವೆಗೆ ಕರೆ ಮಾಡಿದ್ದರು.
ಕರೆಗೆ ಸ್ಪಂದಿಸಿದ 112 ವಾಹನದ ಚಾಲಕ, ಡಿಎಆರ್ ಪೊಲೀಸ್ ಪೇದೆ ಪುಟ್ಟಸ್ವಾಮಿ, ಮಹಿಳೆಯ ಫೋನ್ ಸಂಖ್ಯೆಯನ್ನು ಪಡೆದು ಆಕೆಯೊಂದಿಗೆ ಸಂಪರ್ಕ ಬೆಳೆಸಿದ್ದಾನೆ. ಆಕೆಯ ಮನೆಯಲ್ಲಿ ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಇದಷ್ಟೇ ಅಲ್ಲ, ಆಕೆಯಿಂದ 12 ಲಕ್ಷ ರೂಪಾಯಿ ಹಣವನ್ನು ಕೂಡ ಪಡೆದುಕೊಂಡಿದ್ದಾನೆ.
ನಂತರ ಪುಟ್ಟಸ್ವಾಮಿ ಮಹಿಳೆಯನ್ನು ಕಡೆಗಣಿಸಿದ್ದು,. ಆಕೆ ತನ್ನ ಬಂಗಾರವನ್ನು ಅಡವಿಟ್ಟು ಕೊಟ್ಟ ಹಣವನ್ನು ವಾಪಸ್ ಕೇಳಿದಾಗ, ಆತ ದರ್ಪ ತೋರಿದ್ದಾನೆ. ಇದರಿಂದ ಮನನೊಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೊನೆಗೆ, ವಿಧಿಯಿಲ್ಲದೆ ಆಕೆ ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ದೂರು ದಾಖಲಾದ ಬೆನ್ನಲ್ಲೆ ಪುಟ್ಟಸ್ವಾಮಿ ತನ್ನ ಮೊಬೈಲ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ.
ಸದ್ಯ ಬೆಂಗಳೂರು ದಕ್ಷಿಣ (ರಾಮನಗರ) ಎಸ್‌ಪಿ ಶ್ರೀನಿವಾಸ್ ಗೌಡ ಅವರು ಆರೋಪಿ ಪೇದೆಯನ್ನು ಅಮಾನತುಗೊಳಿಸಿದ್ದು ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನು ಓದಿ:

Prev Post

ಧರ್ಮಸ್ಥಳ ಪ್ರಕರಣ, ಅತ್ಯಾಚಾರ, ಕೊಲೆ, ಶವ ಹೂತ ವ್ಯಕ್ತಿ ಎಲ್ಲಾ ವಿವಾದಗಳ ತನಿಖೆಗೆ…

Next Post

ಮಾದಕವಾಗಿ ಕಾಣಲು ತುಟಿ ಉಬ್ಬಿಸಿದ ಉರ್ಫಿ !!!! ಆದ್ರೆ ನಡೆದಿದ್ದೇ ಬೇರೆ: Urfi…

post-bars

Leave a Comment

Related post