ಕಿಪ್ಪಿ ಕೀರ್ತಿ ಲವರ್ ಗೆ ಪೋಲಿಸ್ ವಾರ್ನ್, ಚಾಕು , ಚೂರಿ ತೋರ್ಸೋ ಹಾಂಗಿಲ್ಲ: kippi kirthi lover boy muttu
ಲವರ್ ಬಾಯ್ ಮುತ್ತುಗೆ ತುಮಕೂರಿನ ಕ್ಯಾತ್ಸಂದ್ರ ಪೊಲೀಸರು ವಾರ್ನ್ ಕೊಟ್ಟಿದ್ದಾರೆ. ಇನ್ಸ್ಟಾದ ರೀಲ್ಸ್ ನಲ್ಲಿ ಚಾಕು ತೋರಿಸಿ ಬೆದರಿಕೆ ಹಾಕಿದ್ದ ಮುತ್ತು ಅಲಿಯಾಸ್ ಬ್ಲಾಕ್ ಕೋಬ್ರಾಗೆ black cobra ಡ್ರಿಲ್ ನಡೆದಿದೆ.
ತುಮಕೂರು: ಇನ್ಸ್ಟಾಗ್ರಾಂ , ಫೇಸ್ಬುಕ್ ನಲ್ಲಿ ರೀಲ್ ಗಳದ್ದೇ ಹವಾ. ಯುವಜನರು ಅತಿಹೆಚ್ಚು ಬಳಸುವ ಇನ್ಸ್ಟಾಗ್ರಾಂ ಸ್ಕ್ರೋಲ್ ಮಾಡಿದ್ರೆ ಕಿಪ್ಪಿ ಕೀರ್ತಿ ಹಾಯ್ ಫ್ರೇಂಡ್ಸ್ ಅಂತ ಮುಂದೆ ಬರ್ತಾಳೆ. ಈ ಹುಡುಗಿ ಖಾಲಿ ರೀಲ್ಸ್ ಮಾಡ್ತಾ ವೈರಲ್ ಆಗಿದ್ದಳು. ಲವರ್ ಮುತ್ತು ಕೈ ಕೊಟ್ಟ, ದಚ್ಚು ಇದು ನ್ಯಾಯಾನಾ ಅಂತ. ಆಗ ಕಿಪ್ಪಿಗೆ ಹೊಗಳಿಕೆ, ತೆಗಳಿಕೆ ಜೊತೆಗೆ ಇಂಟರ್ವ್ಯೂ interview ಕೂಡ ನಡೆಸಿದ್ರು.
ಸದ್ಯ ಈಗ ಸುದ್ದಿಯಲ್ಲಿರೋದು ಕಿಪ್ಪಿ ಕೀರ್ತಿಗಾಗಿ kippi kirthi ಚಾಕು ಹಿಡಿದ ಲವರ್ ಬಾಯ್ ಕಥೆ.
ಲವರ್ ಬಾಯ್ ಮುತ್ತುಗೆ kippi kirthi lover boy muttu ತುಮಕೂರಿನ ಕ್ಯಾತ್ಸಂದ್ರ ಪೊಲೀಸರು ವಾರ್ನ್ ಕೊಟ್ಟಿದ್ದಾರೆ. ಇನ್ಸ್ಟಾದ ರೀಲ್ಸ್ reelsನಲ್ಲಿ ಚಾಕು ತೋರಿಸಿ ಬೆದರಿಕೆ ಹಾಕಿದ್ದ ಮುತ್ತು ಅಲಿಯಾಸ್ ಬ್ಲಾಕ್ ಕೋಬ್ರಾಗೆ ಡ್ರಿಲ್ ನಡೆದಿದೆ. ಹೊಳೆನರಸೀಪುರದ ಸುನೀಲ್ ಅಲಿಯಾಸ್ ಕಪ್ಪೆಗೆ ವಾರ್ನ್ ಮಾಡಿ ಮುತ್ತು ರೀಲ್ಸ್ ಮಾಡಿದ್ದ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಚಾಕು ತೋರಿಸಿ ಬೆದರಿಕೆ ಹಾಕಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕಿಪ್ಪಿ ಕೀರ್ತಿ ಲವರ್ ಗೆ ಬಿಸಿ ಮುಟ್ಟಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಯುವಕರ ಹುಚ್ಚಾಟಕ್ಕೆ ಪೊಲೀಸರು ಬ್ರೇಕ್ ಹಾಕುತ್ತಿದ್ದು, ತಪ್ಪಿನ ಅರಿವಾಗಿ ಬದಲಾಗ್ತಿನಿ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಹುಚ್ಚಾಟ ಆಡ್ತಿದ್ದೇ. ಚಾಕು ಹಿಡಿದು ಬೆದರಿಕೆ ಹಾಕೋದು ಅಪರಾಧ. ಪೊಲೀಸರು ಎಲ್ಲೆ ಇದ್ರೂ ಎತ್ತಾಕ್ಕೊಂಡು ಬರ್ತಾರೆ. ನಾನು ಇನ್ಮುಂದೆ ಈ ರೀತಿ ಮಾಡಲ್ಲ. ಯುವಜನತೆ ಯಾರೂ ಹೀಗೆ ಮಾಡಬೇಡಿ ಎಂದು ವಿಡಿಯೋದಲ್ಲಿ ಮುತ್ತು ಮನವಿ ಮಾಡಿದ್ದಾರೆ
ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಎನ್ ಸಿ ಆರ್ ದಾಖಲಾಗಿದ್ದು, ಮುಚ್ಚಳಿಕೆ ಬಳಿಕ ಮುತ್ತು ಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ: