ಸುಲಭದಲ್ಲಿ ಹಣ ಮಾಡುವ ಲಿಂಕ್ ಒತ್ತಿ ಲಕ್ಷಾಂತರ ರೂಪಾಯಿ, ಚಿನ್ನಾಭರಣ ಕಳೆದುಕೊಂಡು ತವರು ಸೇರಿದ ಮಹಿಳೆ: cyber crime
ಮಾರ್ಚ್ 19 ರಂದು, 30 ವರ್ಷದ ಗೃಹಿಣಿಯ ಮೊಬೈಲ್‌ಗೆ ‘ಏರ್ ಫಝ್’ ಎಂಬ ನಕಲಿ ಕಂಪೆನಿಯ ಲಿಂಕ್ ಬಂದಿದ್ದು ಹಣ ಠೇವಣಿ ಮಾಡಿದರೆ ಭಾರೀ ಕಮಿಷನ್ ನೀಡುವುದಾಗಿ ವಂಚಕರು ನಂಬಿಸಿದ್ದರು.
ಇದನ್ನು ನಂಬಿದ ಮಹಿಳೆ, 11,500 ರೂ. ಠೇವಣಿ ಮಾಡಿದರು. ಕೆಲವೇ ಗಂಟೆಗಳಲ್ಲಿ ಅವರ ಖಾತೆಗೆ 21,109 ರೂ. ಜಮೆಯಾಯಿತು.
ಗುತ್ತಿಗಾರು: cyber crime ಆನ್ಲೈನ್ ಆಟಗಳು, ರಮ್ಮಿ, ಚೈನ್ ಲಿಂಕ್ ಗಳು ಮುಂತಾದ ಸೈಬರ್ ವಂಚನೆ ಆಟಗಳು ಸಾಕಷ್ಟು ಜನರನ್ನು ದೋಚಿರುವುದು. ಆಟದಲ್ಲಿ ಸೋತು ಸುಸೈಡ್ ಮಾಡಿಕೊಂಡಿರುವ ಪ್ರಕರಣಗಳ ಬೆನ್ನಲ್ಲೇ ದುಪ್ಪಟ್ಟು ಹಣ ಗಳಿಸುವ ಆಸೆಗೆ ಸೈಬರ್ ವಂಚಕರ ಮಾತಿಗೆ ಮರುಳಾಗಿ ತನ್ನ ಮನೆಯವರ ಚಿನ್ನಾಭರಣಗಳನ್ನೇ ಕದ್ದು, ಅಡವಿಟ್ಟು ಲಕ್ಷಾಂತರ ರೂಪಾಯಿ ಕಳೆದುಕೊಂಡು ಸಂಸಾರದಿಂದ ಹೊರಬಿದ್ದು ತವರಿಗೆ ಹೋದ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ನಡೆದಿದೆ.
ಮಾರ್ಚ್ 19 ರಂದು, 30 ವರ್ಷದ ಗೃಹಿಣಿಯ ಮೊಬೈಲ್‌ಗೆ ‘ಏರ್ ಫಝ್’ air fuzzಎಂಬ ನಕಲಿ ಕಂಪೆನಿಯ ಲಿಂಕ್ ಬಂದಿದ್ದು ಹಣ ಠೇವಣಿ ಮಾಡಿದರೆ ಭಾರೀ ಕಮಿಷನ್ ನೀಡುವುದಾಗಿ ವಂಚಕರು ನಂಬಿಸಿದ್ದರು.
ಇದನ್ನು ನಂಬಿದ ಮಹಿಳೆ, 11,500 ರೂ. ಠೇವಣಿ ಮಾಡಿದರು. ಕೆಲವೇ ಗಂಟೆಗಳಲ್ಲಿ ಅವರ ಖಾತೆಗೆ 21,109 ರೂ. ಜಮೆಯಾಯಿತು.
ಇದನ್ನೇ ನಂಬಿದ ಮಹಿಳೆ ಇನ್ನಷ್ಟು ಬರಬಹುದು ಎನ್ನುವ ಆಸೆಗೆ ಬಿದ್ದು ಹಂತಹಂತವಾಗಿ ಲಕ್ಷಾಂತರ ರೂಪಾಯಿಗಳನ್ನು ವಂಚಕರ ಖಾತೆಗೆ ವರ್ಗಾಯಿಸತೊಡಗಿದ್ದು, ಕೈಯಲ್ಲಿದ್ದ ಹಣ ಖಾಲಿಯಾದಾಗ, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಮನೆ ಮಂದಿಗೆ ತಿಳಿಯದಂತೆ ಗಂಡನ ಚಿನ್ನ, ಗಂಡನ ತಂಗಿ (ಅತ್ತಿಗೆ) ಮತ್ತು ಭಾವನ ಆಭರಣಗಳು, ಕೊನೆಗೆ ತನ್ನ ಸ್ವಂತ ಒಡವೆಗಳನ್ನೂ ತೆಗೆದು ಅಡವಿಟ್ಟು ಹಣ ಪಡೆದರು. ಅಷ್ಟಕ್ಕೇ ನಿಲ್ಲಿಸದೆ, ಅತ್ತೆಯ ಬ್ಯಾಂಕ್ ಖಾತೆಯಿಂದ 69,000 ರೂ. ಹಣವನ್ನು ಕೂಡ ತೆಗೆದು ಹಣ ಕಟ್ಟ ತೊಡಗಿದರು.
ಮನೆಯಲ್ಲಿ ಚಿನ್ನಾಭರಣಗಳು ಕಾಣೆಯಾಗುತ್ತಿರುವುದು ಕುಟುಂಬದವರಲ್ಲಿ ಆತಂಕ ಸೃಷ್ಟಿಸಿತು. ಕಳವು ಆಗಿರಬಹುದೆಂದು ಭಾವಿಸಿದ ಕುಟುಂಬ, ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿತು.
ದೂರು ನೀಡಲು ತೆರಳಿದ ಕುಟುಂಬದೊಂದಿಗೆ ಮಹಿಳೆಯೂ ಜೊತೆಗೂಡಿ, ಏನೂ ಅರಿಯದವರಂತೆ ನಟಿಸಿದ್ದರು.
ಪೊಲೀಸರು ತನಿಖೆ ಆರಂಭಿಸಿದಾಗ, ಮನೆಯವರ ಮೇಲೆಯೇ ಶಂಕೆ ವ್ಯಕ್ತಪಡಿಸಿದ್ದರು.
ಇದೇ ವೇಳೆ, ಮಹಿಳೆಯ ತವರು ಮನೆಯಲ್ಲಿ ಅವರ ತಂಗಿಯ 8 ಪವನ್ ಚಿನ್ನಾಭರಣಗಳೂ ಕಣ್ಮರೆಯಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿತು. ಅನುಮಾನಗೊಂಡು ಮಹಿಳೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಇಡೀ ಸತ್ಯ ಬಯಲಾಗಿದೆ.
ಹಣ ದುಪ್ಪಟ್ಟು ಮಾಡುವ ಆಸೆಗೆ ಬಿದ್ದು,ಎಲ್ಲಾ ಚಿನ್ನಾಭರಣಗಳನ್ನು ಕದ್ದು ಅಡವಿಟ್ಟು, ಒಟ್ಟು 11,21,863 ರೂಪಾಯಿಗಳನ್ನು ವಂಚಕರಿಗೆ ಕಟ್ಟಿರುವುದಾಗಿ ಮಹಿಳೆ ಒಪ್ಪಿಕೊಂಡರು. ವಂಚಕರು ಸುಮಾರು 2 ಲಕ್ಷ ರೂ. ಕಮಿಷನ್ ಕೊಟ್ಟಿದ್ದರೂ, ಅದನ್ನು ಕೂಡ ಮರುಠೇವಣಿ ಮಾಡಿ ಕಳೆದುಕೊಂಡಿರುವುದಾಗಿ ತಿಳಿಸಿದರು.
ನಂಬಿಕೆ ದ್ರೋಹದಿಂದ ಕುಪಿತಗೊಂಡ ಪತಿ, “ಅಡವಿಟ್ಟ ಚಿನ್ನ ಮತ್ತು ಹಣವನ್ನು ತರದ ಹೊರತು ಮನೆಗೆ ಕಾಲಿಡಬೇಡ” ಎಂದು ತಾಕೀತು ಮಾಡಿದ್ದಾರೆ. ಪರಿಣಾಮ, ಮಹಿಳೆ ತನ್ನ ತವರು ಮನೆ ಸೇರುವಂತಾಗಿದೆ.
ಇದನ್ನು ಓದಿ: