ಗೆಳತಿಯನ್ನು ವೈಶ್ಯವಾಟಿಕೆಗೆ ತಳ್ಳಲು ಯತ್ನಿಸಿ ಒಪ್ಪದಿದ್ದಾಗ ಕೊಲೆ ಮಾಡಿ ಪಾಪಿ: Live-in Partner murder
ಲಿವ್-ಇನ್ ಸಂಗಾತಿಯ ಎದೆಗೆ ಚಾಕುವಿನಿಂದ ಚುಚ್ಚಿ ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ನಡೆದಿದ್ದು ಆಂಧ್ರ ಪ್ರದೇಶದ ರಾಜೋಳು ಮಂಡಲ ವ್ಯಾಪ್ತಿಯ ಬಿ ಸವರಂ ಗ್ರಾಮದ ಸಿದ್ಧಾರ್ಥ ನಗರದಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ. ಪುಷ್ಪಾ ಎಂಬಾಕೆ ಕೊಲೆಯಾದವಳು. Live-in Partner murder
ಆಂಧ್ರಪ್ರದೇಶ: ಈ ಕಾಲದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಹುಡುಗ ಹುಡುಗಿಯರ ಸಂಬಂಧ ಧೀರ್ಘ ಕಾಲ ಉಳಿಯುವುದು ನೋಡಿದ್ದೀರಾ?. ಲವ್ ಬ್ರೇಕಪ್ ಸಾಮಾನ್ಯ. ಆದ್ರೆ ಬ್ರೇಕಪ್ ನಂತರದ ಟ್ವಿಸ್ಟ್ ಬಲು ಭೀಕರ. ನಂಬಿಸಿ ಕರೆತಂದು ದೌರ್ಜನ್ಯ ಎಸಗುವುದು , ಅತ್ಯಾಚಾರ, ಕೊಲೆ ಇಂತಹ ಅಕ್ರಮಗಳಿಂದ ಸಮಾಜ ಕೆಟ್ಟ ದಾರಿ ಹಿಡಿದಿದೆ ಎಂದರೆ ತಪ್ಪಾಗಲಾರದು. ಅಂತೆಯೇ ಇಲ್ಲೋಬ್ಬಾತ ತನ್ನನ್ನು ನಂಬಿ ಬಂದ ಗೆಳತಿಯನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿ, ಒಪ್ಪದಿದ್ದಾಗ ಕೊಲೆ ಮಾಡಿ ವಿಕೃತಿ ಮೆರೆದಿದ್ದಾನೆ.
ಲಿವ್-ಇನ್ ಸಂಗಾತಿಯ ಎದೆಗೆ ಚಾಕುವಿನಿಂದ ಚುಚ್ಚಿ ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ನಡೆದಿದ್ದು ಆಂಧ್ರ ಪ್ರದೇಶದ ರಾಜೋಳು ಮಂಡಲ ವ್ಯಾಪ್ತಿಯ ಬಿ ಸವರಂ ಗ್ರಾಮದ ಸಿದ್ಧಾರ್ಥ ನಗರದಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ. ಪುಷ್ಪಾ ಎಂಬಾಕೆ ಕೊಲೆಯಾದವಳು. ಆಕೆಗೆ ಈ ಹಿಂದೆಯೇ ಬೇರೊಬ್ಬರ ಜತೆ ವಿವಾಹವಾಗಿದ್ದು ಪತಿಯಿಂದ ಬೇರ್ಪಟ್ಟು ಕಳೆದ ಆರು ತಿಂಗಳಿನಿಂದ ಶೇಖ್ ಶಮ್ಮಾ (Live-in Partner) ಜತೆ ವಾಸಿಸುತ್ತಿದ್ದಳು. ಅವರು ಗ್ರಾಮದಲ್ಲೇ ಮನೆ ಬಾಡಿಗೆಗೆ ಪಡೆದಿದ್ದರು.
ಬದುಕು ಕೊಡುತ್ತಾನೆ ಎಂದು ಆತನನ್ನು ನಂಬಿ ಬಂದಿದ್ದ ಗೆಳತಿಯನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಲು ಆತ ತುಂಬಾ ಪ್ರಯತ್ನಿಸಿದ್ದ. ಆದರೆ ಮಹಿಳೆ ಒಪ್ಪದ ಕಾರಣ ಆಕೆಯನ್ನು ಕೊಲೆ ಮಾಡಿದ್ದಾನೆ.
ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಶಮ್ಮಾ ಆಕೆಗೆ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದಾನೆ. ತನ್ನೊಂದಿಗೆ ತಾನು ಹೇಳಿದ್ದ ಜಾಗಕ್ಕೆ ಬರಬೇಕೆಂದು ಕೇಳಿದ್ದಾನೆ ತೀವ್ರ ವಾಗ್ವಾದ ನಡೆದಿದೆ, ಆಕೆ ನಿರಾಕರಿಸಿದ್ದಾಳೆ. ಬಳಿಕ ಆತ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಆಕೆಯ ಎದೆಯ ಎಡಭಾಗ ಮತ್ತು ಕಾಲಿಗೆ ಇರಿದಿದ್ದಾನೆ.
ಆತನನ್ನು ತಡೆಯಲು ಯತ್ನಿಸಿದ್ದ ಪುಷ್ಪಾ ತಾಯಿ ಹಾಗೂ ಆಕೆಯ ಸಹೋದರನ ಮೇಲೂ ಶಮ್ಮಾ ಹಲ್ಲೆ ನಡೆಸಿದ್ದಾನೆ. ಅತಿಯಾದ ರಕ್ತಸ್ರಾವದಿಂದ ಪುಷ್ಪಾ ಕೊನೆಯುಸಿರೆಳೆದಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯ ಹುಡುಕಾಟಕ್ಕೆ ತಂಡ ರಚಿಸಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನು ಓದಿ: