ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕ ಚೆಂದುಳ್ಳಿ : ಮದುವೆಯಾಗಲು ಚಿಕ್ಕಮಗಳೂರಿಗೆ ಹೋದ ಯುವಕನಿಗೆ ಶಾಕ್: instagram love
ಕೋಲಾರದ kolara ಯುವಕನಾದ ಈತ ಯುವತಿ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಲವ್ ಮಾಡಿದ್ದು, ಖುದ್ದು ಭೇಟಿಗೆಂದು ಚಿಕ್ಕಮಗಳೂರಿಗೆ ಹೋದಾಗ ಪ್ರೇಯಿಸಿ ಯುವತಿ ಅಲ್ಲ ಮದುವೆಯಾಗಿ ಮೂವರು ಮಕ್ಕಳಿರುವ ಗೃಹಿಣಿ ಎಂದು ಗೊತ್ತಾಗಿದೆ. instagram love
ಚಿಕ್ಕಮಗಳೂರು: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಬ್ಯೂಟಿಫುಲ್ ಲೇಡಿಯ ಜೊತೆ ಚಾಟ್ ಮಾಡಿ ಸ್ನೇಹ, ಪ್ರೀತಿ ಹೆಚ್ಚಾದಂತೆ ಅದು ಮದುವೆಯ ಮಟ್ಟಕ್ಕೆ ತಲುಪಿತ್ತು. ನಂತರ ಆಕೆಯನ್ನು ಹುಡುಕಿಕೊಂಡು ಬಂದ ಪ್ರಿಯಕರನಿಗೆ ದೊಡ್ಡ ಶಾಕ್ ಉಂಟಾಗಿದೆ.
ಯಾಕಂದ್ರೆ ಇನ್ಸ್ಟಾಗ್ರಾಮ್‌ನಲ್ಲಿ ಸಿಕ್ಕ ಪ್ರೇಯಸಿ ಇನ್ನೂ ಯುವತಿ ಎಂದು ತಿಳಿದಿದ್ದ. ಆದ್ರೆ ಚಿಕ್ಕಮಂಗಳೂರಿನ ಪ್ರಿಯತಮೆ ಮೂರು ಮಕ್ಕಳ ತಾಯಿ ಎಂದು ತಿಳಿದು ಯುವಕನಿಗೆ ನ್ಯಾಯ ಕೊಡಿಸುವಂತೆ ಎಸ್ಪಿ ಕಚೇರಿ ಮೊರೆ ಹೋಗಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಬಣ್ಣ ಬಣ್ಣದ ರಂಗೀಲಾ ಹಾಡಿಗೆ ತಳುಕು ಬಳುಕು ಹೆಜ್ಜೆ ಹಾಕುವ ಲಲನೆಯರ ಸೌಂದರ್ಯಕ್ಕೆ ಮರುಳಾಗಿ ಮೋಸ ಹೋಗುವ ಹುಡುಗರ ನಡುವೆ ಇಲ್ಲೋಬ್ಬಾತ ಮೂರು ಮಕ್ಕಳ ಅಮ್ಮನಿಗೆ ಮರುಳಾಗಿದ್ದಾನೆ.
ಕೋಲಾರದ ಯುವಕನಾದ ಈತ ಯುವತಿ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಲವ್ ಮಾಡಿದ್ದು, ಖುದ್ದು ಭೇಟಿಗೆಂದು ಚಿಕ್ಕಮಗಳೂರಿಗೆ ಹೋದಾಗ ಪ್ರೇಯಿಸಿ ಯುವತಿ ಅಲ್ಲ ಮದುವೆಯಾಗಿ ಮೂವರು ಮಕ್ಕಳಿರುವ ಗೃಹಿಣಿ ಎಂದು ಗೊತ್ತಾಗಿದೆ. ಇದರಿಂದ ಯುವಕ ನವನೀತ್ ಶಾಕ್ ಆಗಿದ್ದು, ನ್ಯಾಯ ಕೊಡಿಸುವಂತೆ ಪೊಲೀಸ್ ಮೆಟ್ಟಿಲೇರಿದ್ದಾನೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ದ್ವಾರಸಂದ್ರ ಗ್ರಾಮದ 25 ವರ್ಷದ ನವನೀತ್‌ಗೆ ಇನ್ಸ್ಟಾಗ್ರಾಮ್ ನಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದ ಅಪೂರ್ವ ಪರಿಚಯವಾಗಿದೆ. ಪರಿಚಯವಾಗಿ ಇಬ್ಬರ ನಡುವೆ ಪ್ರೇಮ ಹೆಚ್ಚಾಗಿ ಮದುವೆಯಾಗುವುದಾಗಿ ನಂಬಿಸಿದ್ದಾಳೆ. ಅಷ್ಟೇ ಅಲ್ಲದೇ ನವನೀತ್ ನಿಂದ ಹಣವನ್ನು ಹಾಕಿಸಿಕೊಂಡಿದ್ದಾಳೆ. ಬಳಿಕ ಅಪೂರ್ವ, ಕೆಲ ದಿನಗಳಿಂದ ನವನೀತ ನಂಬರ್ ಬ್ಲಾಕ್ ಲಿಸ್ಟ್ ಗೆ ಹಾಕಿದ್ದಾಳೆ. ಬಳಿಕ ನವನೀತ್ ಪ್ರಿಯತಮೆ ಅಪೂರ್ಣ ಇರುವ ಊರಿಗೆ ಬಂದಿದ್ದು, ಪ್ರಿಯತಮೆಯ ಬಗ್ಗೆ ತಿಳಿದು ಕಂಗಾಲಾಗಿದ್ದಾನೆ.
ಅಪೂರ್ವಗೆ ಈಗಾಗಲೇ 3 ಮಕ್ಕಳಿದ್ದು, ಇದನ್ನ ನವನೀತ್ ಗೆ ಹೇಳದೇ ಮುಚ್ಚಿಟ್ಟಿದ್ದಳು. ಪ್ರಿಯತಮೆ ಹುಡುಗಿ ಅಲ್ಲ ಮೂರು ಮಕ್ಕಳ ತಾಯಿ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಕಂಗಾಲಾದ ನವನೀತ್ ನ್ಯಾಯಕ್ಕಾಗಿ ಚಿಕ್ಕಮಗಳೂರು ಎಸ್ಪಿ ಕಚೇರಿಯಲ್ಲಿ ದೂರು ಕೊಟ್ಟಿದ್ದಾನೆ.
ಸದ್ಯ ಮದುವೆಯಾಗಿದ್ರೆ ಏನಂತೆ, 3 ಮಕ್ಕಳ ತಾಯಿ ಆದ್ರೂ ಓಕೆ ಅವಳನ್ನೇ ಮದುವೆಯಾಗ್ತೀನಿ ಮಕ್ಕಳನ್ನೂ ಸಾಕುತ್ತೇನೆ ಎನ್ನುತ್ತಿದ್ದಾನೆ ಅಂತೆ ಭೂಪ. ಇವನಿಗೆ ಗತಿ ಇಲ್ಲ ಅವಳಿಗೆ ಮತಿ ಇಲ್ಲ ಎನ್ನುವಂತೆ. ಮೂರು ಮಕ್ಕಳ ತಾಯಿಯ ಪ್ರೀತಿಯಲ್ಲಿ ಬಿದ್ದ ನವ ಯುವಕ ಒದ್ದಾಡುವಂತಾಗಿದ್ದಾನೆ.
ಇದನ್ನು ಓದಿ: