Back To Top

 “ಯಕ್ಷ ಕನ್ಯಾಮಣಿ” ಪಂಚಮಿ ಮಾರೂರು: panchami maaruru

“ಯಕ್ಷ ಕನ್ಯಾಮಣಿ” ಪಂಚಮಿ ಮಾರೂರು: panchami maaruru

ದಕ್ಷಿಣಕನ್ನಡ ಜಿಲ್ಲೆಯ ಮೂಡುಬಿದ್ರೆಯ ಮಾರೂರಿನ ಪಾರ್ಶ್ವನಾಥ ಹಾಗೂ ದೀಪಶ್ರೀ ದಂಪತಿಗಳ ಮಗಳಾಗಿ 20.12.2001ರಂದು ಪಂಚಮಿ ಮಾರೂರು ಅವರ ಜನನ. ಬಿಕಾಂ ವಿದ್ಯಾಭ್ಯಾಸ ಮುಗಿಸಿ ಪ್ರಸ್ತುತ MBA ವ್ಯಾಸಂಗ ಮಾಡುತ್ತಿದ್ದಾರೆ. Yakshagana

ಜಕ್‌

ಅಜ್ಜ ಯಕ್ಷಗಾನದ ಬಹುದೊಡ್ಡ ಪ್ರೇಕ್ಷಕರಾಗಿದ್ದರು. ನನ್ನನ್ನು ಅವರೊಂದಿಗೆ ಯಕ್ಷಗಾನ ನೋಡಲು ಕರೆದುಕೊಂಡು ಹೋಗುತ್ತಿದ್ದರು. ಆಗ ಚೌಕಿಗೆ ಹೋಗಿ ಬಣ್ಣಗಾರಿಕೆ, ವೇಷಭೂಷಣ, ಭಾಗವತಿಕೆ, ಚೆಂಡೆಯ ಶಬ್ದ, ನೃತ್ಯ, ಮಾತುಗಾರಿಕೆ ಇವೆಲ್ಲ ನೋಡುತ್ತಾ ಮುಂದೆ ನಾನು ಯಕ್ಷಗಾನ ರಂಗದಲ್ಲಿ ವೇಷ ಮಾಡಬೇಕು ಎಂದು ಆಸೆಗೊಂಡು ಯಕ್ಷಗಾನ ರಂಗಕ್ಕೆ ಬಂದೆ ಎಂದು ಪಂಚಮಿ ಮಾರೂರು ಹೇಳುತ್ತಾರೆ. ದಕ್ಷಿಣಕನ್ನಡ ಜಿಲ್ಲೆಯ ಮೂಡುಬಿದ್ರೆಯ ಮಾರೂರಿನ ಪಾರ್ಶ್ವನಾಥ ಹಾಗೂ ದೀಪಶ್ರೀ ದಂಪತಿಗಳ ಮಗಳಾಗಿ 20.12.2001ರಂದು ಪಂಚಮಿ ಮಾರೂರು ಅವರ ಜನನ. ಬಿಕಾಂ ವಿದ್ಯಾಭ್ಯಾಸ ಮುಗಿಸಿ ಪ್ರಸ್ತುತ MBA ವ್ಯಾಸಂಗ ಮಾಡುತ್ತಿದ್ದಾರೆ.
ಯಕ್ಷಗಾನ ಗುರುಗಳು:-
ಶ್ರೀ ಶಿವಕುಮಾರ್ ಮೂಡಬಿದ್ರಿ
ಶ್ರೀ ದೇವಾನಂದ ಭಟ್
ಶ್ರೀಮತಿ ವಿದ್ಯಾ ಕೋಳ್ಯೂರು

ನೆಚ್ಚಿನ ಪ್ರಸಂಗಗಳು:-
ಸುದರ್ಶನ ವಿಜಯ, ಶ್ರೀ ಕೃಷ್ಣ ಪಾರಿಜಾತ, ಕೃಷ್ಣ ಲೀಲೆ, ಕಂಸ ವಧೆ, ಅಭಿಮನ್ಯು ಕಾಳಗ, ಶಶಿಪ್ರಭಾ ಪರಿಣಯ, ದೇವಿ ಮಹಾತ್ಮೆ, ವೀರಮಣಿ ಕಾಳಗ, ಶ್ವೇತ ಕುಮಾರ ಚರಿತ್ರೆ.
ನೆಚ್ಚಿನ ವೇಷಗಳು:-
ಕೃಷ್ಣ, ಸುದರ್ಶನ, ಅಭಿಮನ್ಯು, ಶ್ರೀ ದೇವಿ, ಭ್ರಮರಕುಂತಳೆ, ರಕ್ತಬೀಜ, ಶ್ವೇತಕುಮಾರ, ಮಾಲಿನಿ, ರುಕ್ಮಾಂಗ – ಶುಭಾಂಗ, ರಾಮ.

ಜ

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪೂರ್ಣ ಕಥೆ ತಿಳಿದುಕೊಂಡು, ಪಾತ್ರದ ಎಲ್ಲಾ ಆಯಾಮಗಳನ್ನು ತಿಳಿದುಕೊಂಡು, ಪಾತ್ರದ – ನಡೆ, ಮಾತುಗಾರಿಕೆ, ಬಣ್ಣ, ವೇಷ ಭೂಷಣ, ಸನ್ನಿವೇಶ, ಅದಕ್ಕೆ ತಕ್ಕ ಮಾತು – ಅದರ ಏರಿಳಿತ, ಕುಣಿತ – ಚಾಲು ಕುಣಿತ, ಜೊತೆ ಪಾತ್ರಗಳ ವಿವರ (ಮಾತಿಗೆ ಬೇಕಾಗಿ ), ಅಭಿನಯ ತಿಳಿದುಕೊಂಡು, ಅಭ್ಯಾಸ ಮಾಡಿ, ಶ್ರುತಿಗೆ ಮಾತನ್ನು ಸೇರಿಸಿ – ಗುರುಗಳ ಮಾರ್ಗದರ್ಶನ ಪಡೆದು, ಅವರ ಮುಂದೆ ಅಭ್ಯಾಸ ಮಾಡಿ, ಬೇರೆ ಕಲಾವಿದರು ಅಥವಾ ಹಿರಿಯರು ಆ ಪಾತ್ರವನ್ನು ಹೇಗೆ ನಿಭಾಯಿಸಿಕೊಂಡು ಬಂದಿದ್ದಾರೆ ಎಂದು ಪ್ರೇಕ್ಷಕರಾಗಿ ನೋಡಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ದೊರೆಯುವ ಹಲವಾರು ವಿಡಿಯೋಗಳನ್ನು ನೋಡಿ ತಯಾರಿ ಮಾಡಿಕೊಳ್ಳುತ್ತೇನೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಒಂದು ಆಯಾಮದಲ್ಲಿ ನೋಡಿದರೆ, ಯಕ್ಷಗಾನಕ್ಕೆ ಒಳ್ಳೆಯ ಪ್ರೋತ್ಸಾಹ, ಅವಕಾಶ, ವೇದಿಕೆಗಳು ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸುವಿಕೆ ಸಿಕ್ಕಿದೆ. ಯುವ ಜನಾಂಗದ ಭಾಗವಹಿಸುವಿಕೆಯು ಹೆಚ್ಚಾಗಿದೆ. ಹಲವಾರು ಗುರುಗಳ ಮಾರ್ಗದರ್ಶನದಲ್ಲಿ ಯಕ್ಷಗಾನ ತರಬೇತಿಗಳು ಕೂಡ ಪ್ರಾರಂಭವಾಗಿದೆ. ಹಲವಾರು ಸಂಘ ಸಂಸ್ಥೆಗಳಿಂದ ಯಕ್ಷಗಾನದ ಸ್ಪರ್ಧೆಗಳು ಹಾಗೂ ಯಕ್ಷಗಾನದ ಹಿರಿಯ ಕಲಾವಿದರಿಗೆ ಪ್ರೋತ್ಸಾಹ ಹಾಗೂ ಗೌರವ ಸಮರ್ಪಣೆಯು ನಡೆಯುತ್ತಿದೆ.

ಆದರೆ ಇನ್ನೊಂದು ಆಯಾಮದಲ್ಲಿ ನೋಡಿದರೆ ಅತ್ಯಂತ ಬೇಸರವಾಗುತ್ತದೆ. ಏಕೆಂದರೆ, ಯಕ್ಷಗಾನವನ್ನು ಕೇವಲ ಆಡಂಬರವಾಗಿ ನೋಡಿ ಹಲವಾರು ಕಾರ್ಯಕ್ರಮಗಳಲ್ಲಿ ಕೇವಲ ಆಡಂಬರಕ್ಕಾಗಿ ವೇಷವನ್ನು ಧರಿಸಿ, ಸರಿಯಾದ ಸ್ಥಾನ ಮಾನ ನೀಡದೆ, ಪಾಶ್ಚಾತ್ಯ ಸಂಗೀತಗಳಿಗೂ – ಯಕ್ಷಗಾನವನ್ನು ಮಾಡುತ್ತಿದ್ದಾರೆ. ಅದು ದುಡ್ಡಿನ ಮೋಹವೋ ಅಥವಾ ಅರಿವಿಲ್ಲದೆ ನಡೆಯುತ್ತಿದೆಯೋ ತಿಳಿದಿಲ್ಲ.

ಕ್ಲ

ಆದರೆ ಇಂಥ ಸನ್ನಿವೇಶಗಳು, ನಿಜವಾದ ಯಕ್ಷಗಾನ ಕಲಾವಿದರಿಗೆ ಮನಸ್ಸಿಗೆ ಘಾಸಿ ಉಂಟು ಮಾಡುತ್ತಿದೆ. ಬೇರೆ ಕಲೆಗಳಿಗೆ ಹೋಲಿಸಿದರೆ ಯಕ್ಷಗಾನವು,ಇನ್ನೂ ಹೆಚ್ಚಿನ ಒಡ್ದುವಿಕೆ ಪಡೆಯಬೇಕು. ಯಕ್ಷಗಾನಕ್ಕೂ-  ಭರತನಾಟ್ಯ ಕಥಕ್ ನಂತೆಯೇ ಸರಕಾರದಿಂದ ನಡೆಸುವಂತಹ ಪರೀಕ್ಷೆಗಳು ಬರಬೇಕು, ಸರಕಾರದಿಂದ ಸವಲತ್ತುಗಳು ದೊರೆಯಬೇಕು, ಶಾಲಾ ಕಾಲೇಜುಗಳಲ್ಲಿ ಇತರ ಪಠ್ಯೇತರ  ಚಟುವಟಿಕೆಗಳೊಂದಿಗೆ ಯಕ್ಷಗಾನವನ್ನು ಕೂಡ ಸೇರಿಸಬೇಕು ( activity ಕ್ಲಾಸ್) ಎಂಬುದು ನನ್ನ ಇಚ್ಛೆ.

ಇತ್ತೀಚಿನ ದಿನಗಳಲ್ಲಿ ಯಕ್ಷಗಾನವನ್ನು ಚಿತ್ರರಂಗಕ್ಕೆ ತರುವುದೇನು ಸರಿ, ಆದರೆ ಅದರಲ್ಲಿ ಯಕ್ಷಗಾನದ ಮೂಲ ಕಲಾವಿದರನ್ನು ಬಳಸಿಕೊಂಡರೆ ಯಕ್ಷಗಾನದ ಸ್ಥಾನಮಾನವೂ ಉಳಿಯುತ್ತದೆ, ಹಾಗೂ ಯಕ್ಷಗಾನ ಕಲಾವಿದರು ಬದುಕುತ್ತಾರೆ ಎಂಬುವುದು ನನ್ನ ಅಭಿಪ್ರಾಯ. ಇತ್ತೀಚಿನ ರಿಯಾಲಿಟಿ ಶೋಗಳಲ್ಲಿ ಯಕ್ಷನಾಟ್ಯವನ್ನು ಸರಿಯಾದ ಗುರುಗಳ ಮಾರ್ಗದರ್ಶನದಿಂದ, ಯಕ್ಷಗಾನದ ಹಾಡುಗಳಿಗೆ ಮಾಡಿದರೆ ಇನ್ನೂ ಉತ್ತಮ ಅನ್ನಿಸುತ್ತದೆ.

ಜಲಕ

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ನನ್ನ ಅಭಿಪ್ರಾಯದಲ್ಲಿ – ಉಡುಪಿ ದಕ್ಷಿಣ ಕನ್ನಡ ಭಾಗದಲ್ಲಿ ಯಕ್ಷಗಾನದ ನಿಜವಾದ ಪ್ರೇಕ್ಷಕರು ಇನ್ನೂ ಇದ್ದಾರೆ. ಆದರೆ ಬೆಂಗಳೂರಿನಂತಹ ಮಹಾನಗರದಲ್ಲಿ ಯಕ್ಷಗಾನವನ್ನು ಆಡಂಬರದ ರೀತಿ ನೋಡುವವರೂ ಇದ್ದಾರೆ, ಕುತೂಹಲಕ್ಕಾಗಿ ನೋಡುವವರು ಇದ್ದಾರೆ, ಆಸಕ್ತ ಪ್ರೇಕ್ಷಕರೂ ಇದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಹೆಚ್ಚಿನ ಪ್ರೇಕ್ಷಕರಲ್ಲಿ ಸಂಪೂರ್ಣ ಯಕ್ಷಗಾನ ಪ್ರಸಂಗವನ್ನು ನೋಡುವವರ ಸಂಖ್ಯೆ ಕಡಿಮೆಯಾಗಿ ಕೇವಲ ಯಕ್ಷನಾಟ್ಯ ಅಥವಾ ರೀಲ್ಸ್ ಮಾದರಿಯಾಗಿ ಯಕ್ಷಗಾನದ ತುಣುಕನ್ನು ಮಾತ್ರ ಅಪೇಕ್ಷಿಸುವವರೂ ಇದ್ದಾರೆ. ಯಕ್ಷಗಾನವನ್ನು ಆಯೋಜಿಸುವವರು ಸರಿಯಾದ ರೀತಿಯಲ್ಲಿ , ಯಾವುದೋ ಪಾಶ್ಚಾತ್ಯ ನೃತ್ಯ ತರಬೇತಿಯ ಅಥವಾ ಯಕ್ಷಗಾನದ ಅರಿವಿಲ್ಲದವರಿಗೆ ವೇಷ ಹಾಕಿ ಪ್ರದರ್ಶಿಸುವುದಕ್ಕಿಂತ, ಸರಿಯಾದ ಯಕ್ಷ ತಂಡವನ್ನು, ಮೇಳವನ್ನು – ಬರಮಾಡಿಕೊಂಡರೆ, ಯಕ್ಷಗಾನದ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಬಹುದು ಎಂಬುದು ನನ್ನ ಅಭಿಪ್ರಾಯ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಈಗಾಗಲೇ ಹೆಜ್ಜೆಗೆಜ್ಜೆ ಎಂಬ ನೃತ್ಯ ಸಂಸ್ಥೆಯನ್ನು ನಾನು ಪ್ರಾರಂಭಿಸಿದ್ದು, ನನ್ನ ಉದ್ದೇಶ – ಮಕ್ಕಳಿಗೆ ಕಲೆಯ ಮೂಲ ಹಾಗೂ ಕಲೆಯ ಪರಿಪೂರ್ಣ ಜ್ಞಾನ ನೀಡಿ, ಸಮಾಜಕ್ಕೆ ಒಳ್ಳೆಯ ಕಲಾವಿದರನ್ನು ನೀಡಿ, ಒಳ್ಳೆಯ ತಂಡವನ್ನು ನೀಡುವುದು. ಹಾಗೂ ಈ ತಂಡದ ಮುಖಾಂತರ ಯಕ್ಷಗಾನವನ್ನು ರಾಷ್ಟ್ರ ಮಟ್ಟದಲ್ಲಿ ಹಾಗೂ ಅಂತರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡುವುದು.

ಇನ್ನೂ ಹಲವಾರು ಗುರುಗಳ ಬಳಿಯಲ್ಲಿ ಅಭ್ಯಾಸ ಮಾಡಿ, ಇನ್ನೂ ಹೆಚ್ಚಿನ ಜ್ಞಾನ ಪಡೆಯಬೇಕು ಎಂಬುದು ಆಸೆ. ಮಕ್ಕಳಿಗೆ ಪಠ್ಯಪುಸ್ತಕದಲ್ಲಿ ಯಕ್ಷಗಾನವು ಒಂದು ಭಾಗವಾಗಿ ಪರಿಚಯವಾಗಬೇಕು ಎಂದು ಬಯಸುತ್ತೇನೆ. ನಾನು ಪರ್ಫಾರ್ಮೆಯಿಂಗ್ ಆರ್ಟ್ಸ್ ನಲ್ಲಿ ಮಾಸ್ಟರ್ಸ್ ಮಾಡಬೇಕು ಹಾಗೂ ಎಂದಿಗೂ ಯಕ್ಷಗಾನ ಕಲೆಯನ್ನು ಅಳಿವಿನ ಅಂಚಿಗೆ ಹೋಗಲು ಬಿಡಬಾರದು. ಹೇಗೆ ವಿದೇಶಿಗರು ನಮ್ಮ ದೇಶದ ಸನಾತನ ಧರ್ಮ ಹಾಗೂ ಸಂಸ್ಕೃತಿಯ ಬಗ್ಗೆ ತಿಳಿದು, ಅದರ ಬಗ್ಗೆ ಒಲವು ತೋರಿಸಿ, ಅದನ್ನು ಆಚರಿಸುತ್ತಿದ್ದಾರೋ, ಹಾಗೆಯೇ ಯಕ್ಷಗಾನ ಕಲೆಗೂ ಕೂಡ ದೇಶ – ವಿದೇಶದಲ್ಲಿ ಜನಪ್ರಿಯತೆ ಪಡೆದು ಅಲ್ಲಿಯೂ ಯಕ್ಷಗಾನ ಪಸರಿಸುವಂತೆ ಆಗಬೇಕು ಎಂಬುದು ನನ್ನ ಇಚ್ಛೆ.

ಹ

ಪ್ರಶಸ್ತಿ ಹಾಗೂ ಸನ್ಮಾನಗಳು:-
♦️ 2015ರಲ್ಲಿ ಭಾರತ ಸರ್ಕಾರ ನೀಡುವ ಮಕ್ಕಳ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ “ರಾಷ್ಟ್ರೀಯ ಅಸಾಧಾರಣ ಪ್ರತಿಭಾ ಪುರಸ್ಕಾರ”ವನ್ನು ದೆಹಲಿಯಲ್ಲಿ ಮಾನ್ಯ ರಾಷ್ಟ್ರಪತಿಗಳಾದ ಶ್ರೀ ಪ್ರಣವ್ ಮುಖರ್ಜಿಯವರಿಂದ ಮತ್ತು ಕರ್ನಾಟಕ ಸರ್ಕಾರದ “ರಾಜ್ಯ ಅಸಾಧಾರಣ ಪ್ರತಿಭಾ ಪುರಸ್ಕಾರ”ವನ್ನು ರಾಜ್ಯಪಾಲರಾದ ಶ್ರೀ ವಜೂಭಾಯಿವಾಲಾರಿಂದ ಏಕಕಾಲಕ್ಕೆ ಪಡೆದ ಹೆಮ್ಮೆ.
♦️ 2017ರ ದೆಹಲಿಯ ರಾಷ್ಟ್ರೀಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಯಕ್ಷನಾಟ್ಯ ಪ್ರದರ್ಶಿಸಿದ್ದಾರೆ.
♦️ ದ.ಕ ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕಾರ.
♦️ ರಾಜ್ಯಮಟ್ಟದ ಜೈನ ಯುವ ಸಾಧನಾಶ್ರೀ.
♦️ ರಾಜ್ಯಮಟ್ಟದ ಆಳ್ವಾಸ್ ವಿದ್ಯಾರ್ಥಿಸಿರಿ ಪುರಸ್ಕಾರ.
♦️ ಕಲ್ಕೂರ ಬಾಲಸಿರಿ.
♦️ ಕರ್ನಾಟಕ ಪ್ರತಿಭಾರತ್ನ.
♦️ ಚೈತನ್ಯಶ್ರೀ ಪುರಸ್ಕಾರ.
♦️ ಡಾ. ಕೋಟ ಶಿವರಾಮ ಕಾರಂತ ವಿದ್ಯಾರ್ಥಿ ಗೌರವ.
♦️ ಕರುನಾಡ ಪದ್ಮಶ್ರೀ ಪುರಸ್ಕಾರ.
♦️ ಕೀರ್ತಿ ಸನ್ಮಾನ.
♦️ ರಾಷ್ಟ್ರೀಯ ಆದರ್ಶ ಜೈನ ಯುವ ಪ್ರಶಸ್ತಿ.
♦️ ಆಲ್ ಇಂಡಿಯಾ ಯಂಗ್ ಜೈನ್ ಅವಾರ್ಡ್-2019.
♦️ ವಿವೇಕ್ ಪುರಸ್ಕಾರ – ಯುವ ಪ್ರಶಸ್ತಿ 2020 ಇನ್ನೂ ಹಲವಾರು ಸನ್ಮಾನ ಪ್ರಶಸ್ತಿಗಳನ್ನು ಗಳಿಸಿರುತ್ತಾರೆ.

ಕ್‌ಕಲಲ

ಶ್ರೀ ಯಕ್ಷನಿಧಿ ಮಕ್ಕಳ ಮೇಳ, ಮೂಡುಬಿದ್ರೆ
ಶ್ರೀ ಯಕ್ಷ ದೇವ ಮಿತ್ರಕಲಾ ಮಂಡಳಿ, ಬೆಳುವಾಯಿ ತಂಡದ ಜೊತೆಗೆ ತಿರುಗಾಟ ಮಾಡಿದ ಅನುಭವ ಪಂಚಮಿ ಅವರದ್ದು.
ನೃತ್ಯ – ಭರತನಾಟ್ಯ, ಯಕ್ಷಗಾನ, ಪಾಶ್ಚಾತ್ಯ ನೃತ್ಯ, ಜನಪದ ನೃತ್ಯ, ಸಂಗೀತ, ನಾಟಕ, ಚಿತ್ರಕಲೆ, ಪುಸ್ತಕ ಓದುವುದು
ಕ್ರೀಡೆ – ಶಟಲ್ ಬ್ಯಾಡ್ಮಿಂಟನ್, ಫುಟ್ಬಾಲ್ ಇವರ ಹವ್ಯಾಸಗಳು.

ಪಂಚಮಿ ಮಾರೂರು ಅವರು 27.11.2022 ರಂದು ಯತೀಶ್ ಎಂ ಅವರನ್ನು ಮದುವೆಯಾಗಿ ಸುಖಿ ಸಂಸಾರ ನಡೆಸುತ್ತಿದ್ದಾರೆ. ಇವರ ಪತಿ ಯತೀಶ್ ಅವರು ಡಿಜಿಟಲ್ PRO, ಥೀಯೇಟರ್ ಆರ್ಟಿಸ್ಟ್ ಆಗಿದ್ದರು. ಹಲವಾರು ಟಿವಿ ವಾಹಿನಿಗಳಲ್ಲಿ ಸುಮಾರು 27 ರಿಯಾಲಿಟಿ ಶೋಗಳಲ್ಲಿ ಕಂಟೆಂಟ್ ಹಾಗೂ ಕ್ರಿಯೇಟಿವ್ ವಿಭಾಗದಲ್ಲಿ ಕಾರ್ಯನಿರ್ವಹಿಸಿ, ಹಲವಾರು ಸುದ್ದಿ ವಾಹಿನಿಗಳಲ್ಲಿಯೂ ಕೆಲಸ ಮಾಡಿ. ಪ್ರಸ್ತುತ ಯತೀ ಇವೆಂಟ್ಸ್ ಹಾಗೂ ಡಿಜಿಟಲ್ ಪ್ರಮೋಷನ್ ಟೀಮ್ ಅನ್ನು ನಡೆಸುತ್ತಿದ್ದಾರೆ.

ತಂದೆ, ತಾಯಿ, ಪತಿ, ಹಾಗೂ ಮನೆಯವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಪಂಚಮಿ ಮಾರೂರು.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

ಇದನ್ನು ಓದಿ:

Prev Post

ಬ್ಯಾಂಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಗೂ ಪತಿ ಪರುಪಳ್ಳಿ ಕಶ್ಯಪ್ ಅವರ 7…

Next Post

“ಯಕ್ಷ ಕಲಾನ್ವಿತ” yaksha kalanvitha

post-bars

Leave a Comment

Related post