“ಯಕ್ಷ ಕಲಾನ್ವಿತ” yaksha kalanvitha
ಶಾಲಾ ದಿನಗಳಲ್ಲಿ ಮಟಪಾಡಿಯ ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿಯಲ್ಲಿ ನಡೆಯತ್ತಿದ್ದ ಯಕ್ಷಗಾನ ನೋಡಿ ನಾನು ಯಕ್ಷಗಾನ ವೇಷ ಮಾಡಬೇಕು ಎಂಬ ಪ್ರೇರಣೆಯಿಂದ ಯಕ್ಷಗಾನ ರಂಗಕ್ಕೆ ಬಂದವರು ಅರುಣ್ ಪೂಜಾರಿ. arun poojari

ವೃತ್ತಿಯಲ್ಲಿ ಉಡುಪಿಯ ಆಭರಣ ಮೋಟಾರ್ಸ್ ನಲ್ಲಿ ಮ್ಯಾನೇಜರ್ ಪ್ರವೃತ್ತಿಯಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದ. ಹುಟ್ಟಿದ್ದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಮಟಪಾಡಿಯಲ್ಲಿ ಪ್ರಸ್ತುತ ಕೂರಾಡಿಯಲ್ಲಿ ವಾಸ. 4.12.1990 ರಂದು ಅಚ್ಯುತ ಪೂಜಾರಿ ಹಾಗೂ ಶಾಂತ ಇವರ ಮಗನಾಗಿ ಅರುಣ್ ಪೂಜಾರಿ ಅವರ ಜನನ. Diploma in Automobile ಇವರ ವಿದ್ಯಾಭ್ಯಾಸ. ಶಾಲಾ ದಿನಗಳಲ್ಲಿ ಮಟಪಾಡಿಯ ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿಯಲ್ಲಿ ನಡೆಯತ್ತಿದ್ದ ಯಕ್ಷಗಾನ ನೋಡಿ ನಾನು ಯಕ್ಷಗಾನ ವೇಷ ಮಾಡಬೇಕು ಎಂಬ ಪ್ರೇರಣೆಯಿಂದ ಯಕ್ಷಗಾನ ರಂಗಕ್ಕೆ ಬಂದವರು ಅರುಣ್ ಪೂಜಾರಿ.
ಯಕ್ಷಗಾನ ಗುರುಗಳು:-
ಪ್ರಾಥಮಿಕ ಹೆಜ್ಜೆ ಬಸವ ಮುಂಡಾಡಿ, ನಂತರ ಮಹೇಶ್ ಕುಮಾರ್ ಮಂದಾರ್ತಿ, ಪ್ರಸ್ತುತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರ ಬಳಿ ಹೆಚ್ಚಿನ ಯಕ್ಷಗಾನ ವಿದ್ಯಾಬ್ಯಾಸ.
ನೆಚ್ಚಿನ ಪ್ರಸಂಗ:-
ಅಭಿಮನ್ಯು ಕಾಳಗ, ಸುಧನ್ವಾರ್ಜುನ, ದೇವಿ ಮಹಾತ್ಮೆ, ಕರ್ಣಾರ್ಜುನ, ಚಕ್ರ ಚಂಡಿಕೆ, ವೀರಮಣಿ ಇತ್ಯಾದಿ.
ನೆಚ್ಚಿನ ವೇಷ:- ಅಭಿಮನ್ಯು, ಕಂಸ ವಧೆಯ ಕಂಸ, ಸುದರ್ಶನ, ಬರ್ಬರಿಕ, ರಕ್ತಬೀಜ, ವಿಷ್ಣು , ಮಾರ್ಥಂಡತೇಜ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ಪೌರಾಣಿಕ ಪ್ರಸಂಗ ಆದರೆ ಅದಕ್ಕೆ ಸಂಬಂಧಿಸಿದ ಕಥೆಯನ್ನ ಓದುತ್ತೇನೆ, ಹಿರಿಯ ಕಲಾವಿದರ ವಿಡಿಯೋ ನೋಡುತ್ತೇನೆ, ಪ್ರಸಂಗಕ್ಕೆ ಬೇಕಾದ ಅರ್ಥವನ್ನ ಸಂಜೆ ಕೆಲಸ ಮುಗಿಸಿ ಮನೆಗೆ ಬಂದು ಬರೆಯುತ್ತೇನೆ. ಸಂದೇಹ ಬಂದಾಗ ವಿಶ್ವನಾಥ್ ಪೂಜಾರಿ ಹೆನ್ನಾಬೈಲ್ ಇವರಲ್ಲಿ ಚರ್ಚಿಸುತ್ತೇನೆ (ನನ್ನ ಅರ್ಥಗಾರಿಕೆಗೆ ಬಹಳಷ್ಟು ಸಹಾಯ ಮಾಡಿದ್ದಾರೆ).
ಹೆಜ್ಜೆಗಾರಿಕೆ ವಿಭಾಗದಲ್ಲಿ ಪ್ರಸಾದ್ ಗುರುಗಳಲ್ಲಿ ಯಾವ ಪಾತ್ರಕ್ಕೆ ಯಾವ ರೀತಿಯ ಚಾಲು ಕುಣಿತ ಬಳಸಿಕೊಳ್ಳಬಹುದು ಅಂತ ಕೇಳಿ ಅದನ್ನ ಅಭ್ಯಾಸ ಮಾಡುತ್ತೇನೆ ಎಂದು ಹೇಳುತ್ತಾರೆ ಅರುಣ್.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನ ಕರಾವಳಿಯಲ್ಲಿ ಮಾತ್ರ ಅಲ್ಲದೆ ರಾಜ್ಯದ ಬೇರೆ ಬೇರೆ ಕಡೆಯಲ್ಲಿ ಈಗ ಪ್ರದರ್ಶನ ಆಗುವುದು ಸಂತೋಷದ ಬೆಳವಣಿಗೆ. ಇಂದಿನ ಪ್ರೇಕ್ಷಕರು ಆಟ ಯೂಟ್ಯೂಬ್ ಲೀ ನೋಡಿ ವಿಮರ್ಶೆ ಮಾಡುವಾಗ ಬೇಸರ ಆಗುತ್ತೆ.

ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ:-
ಹವ್ಯಾಸಿ ಕಲಾವಿದನಾಗಿ ಎಲ್ಲಾ ರೀತಿಯ ಪಾತ್ರವನ್ನ ಮಾಡಬೇಕು ಎನ್ನುವ ಆಸೆ. ನಾನು ಹೇಗೆ ಹಿರಿಯರನ್ನು ನೋಡಿ ಯಕ್ಷಗಾನ ಕ್ಷೇತ್ರಕ್ಕೆ ಬಂದೆನೋ ಹಾಗೆ ನನ್ನಂತ ಹವ್ಯಾಸಿ ಕಲಾವಿದನನ್ನು ನೋಡಿ ಮುಂದಿನ ಪೀಳಿಗೆ ಯಕ್ಷಗಾನ ಕ್ಷೇತ್ರಕ್ಕೆ ಬರಬೇಕು. ಮಾನಸ ಮಂದಿರ ಹೇರಿಕುದ್ರು ಇಲ್ಲಿ ಸುವರ್ಣ ಯಕ್ಷ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಯಕ್ಷಗಾನ ನೋಡುವುದು, ಮಹಾಭಾರತ, ರಾಮಾಯಣ ಕಥೆ ಓದುವುದು, ಗೆಳೆಯರ ಜೊತೆ ಕ್ರಿಕೆಟ್ ಆಟ ಇವರ ಹವ್ಯಾಸಗಳು. ಅರುಣ್ ಪೂಜಾರಿ ಅವರು 20.01.2022ರಂದು ಅಕ್ಷತಾ ಅವರನ್ನು ಮದುವೆಯಾಗಿ ಮಗಳು ಐಷಾನ್ಯ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.

ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಅರುಣ್ ಪೂಜಾರಿ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
:- +918317463705
ಇದನ್ನು ಓದಿ: