ರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ಮಗಳನ್ನೇ ಹತ್ಯೆ ಮಾಡಿದ ಪಾಪಿ ತಂದೆ: tennis player Radhika yadhav
ಜುಲೈ 10 ರಂದು ಸಂಜೆ 5 ಗಂಟೆ ಸುಮಾರು ಒಂದನೇ ಮಹಡಿಯ ಕೋಣೆಯಲ್ಲಿ 25 ವರ್ಷದ ರಾಧಿಕಾ ಏನೋ ತಡಕಾಡುತ್ತಿದ್ದಾಗ ಹಿಂದಿನಿಂದ ಬಂದಿದ್ದ ದೀಪಕ್ ಯಾದವ್, ಆಕೆಯ ಬೆನ್ನಿಗೆ 32bore’ ರಿವಾಲ್ವರ್‌ನಿಂದ 5 ಸುತ್ತು ಗುಂಡು ಹಾರಿಸಿದ್ದಾನೆ.
ಬೆಂಗಳೂರು: ಆಕೆ ರಾಷ್ಟ್ರ ಮಟ್ಟದ ಟೆನ್ನಿಸ್ ಆಟಗಾರ್ತಿ, ನೂರಾರು ಆಟಗಳಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದವಳು. ಆದರೆ ಆಕೆ ತಂದೆಯಿಂದಲೇ ಕೊಲೆಯಾಗಿ ಹೋಗಿದ್ದಾಳೆ. ದೆಹಲಿ ಬಳಿಯ ಗುರುಗ್ರಾಮದ ಸೆಕ್ಟರ್ 57ರ ಸುಶಾಂತ್ ಲೋಕ್ ಪ್ರದೇಶದಲ್ಲಿ ರಾಷ್ಟ್ರೀಯ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ತಂದೆಯಿಂದಲೇ ಹತ್ಯೆಯಾಗಿದ್ದಳು. ಕೊಲೆ ಮಾಡಿದ ಆರೋಪದ ಮೇಲೆ ಆಕೆಯ ತಂದೆ ದೀಪಕ್ ಯಾದವ್ (49) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 10 ರಂದು ಸಂಜೆ 5 ಗಂಟೆ ಸುಮಾರು ಒಂದನೇ ಮಹಡಿಯ ಕೋಣೆಯಲ್ಲಿ 25 ವರ್ಷದ ರಾಧಿಕಾ ಏನೋ ತಡಕಾಡುತ್ತಿದ್ದಾಗ ಹಿಂದಿನಿಂದ ಬಂದಿದ್ದ ದೀಪಕ್ ಯಾದವ್, ಆಕೆಯ ಬೆನ್ನಿಗೆ 32bore’ ರಿವಾಲ್ವರ್‌ನಿಂದ 5 ಸುತ್ತು ಗುಂಡು ಹಾರಿಸಿದ್ದಾನೆ. ಇದರಿಂದ ರಕ್ತದ ಮಡುವಿನಲ್ಲಿ ಬಿದ್ದ ರಾಧಿಕಾ ನೆಲಮಹಡಿಯ ಅಡುಗೆ ಕೋಣೆಯಲ್ಲಿದ್ದ ತನ್ನ ತಾಯಿ ಮಂಜು ಯಾದವ್ ಬಂದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಪ್ರಾಣ ಬಿಟ್ಟಿದ್ದಾಳೆ.
ದೀಪಕ್ ಯಾದವ್ ಕೃತ್ಯ ನೋಡಿದ ತಮ್ಮ ಕುಲದೀಪ್ ಯಾದವ್, ಬೆಚ್ಚಿ ಬಿದ್ದಿದ್ದು ಪೊಲೀಸರಿಗೆ ವಿಷಯ ತಿಳಿಸಿ ದೂರು ದಾಖಲಿಸಿದ್ದಾರೆ.
ಕಳೆದ ವರ್ಷ ಯುವಕನೊಂದಿಗೆ ರಾಧಿಕಾ ಮ್ಯೂಸಿಕ್ ವಿಡೀಯೊ ಒಂದರಲ್ಲಿ ಕಾಣಿಸಿಕೊಂಡಿದ್ದು ಟೆನಿಸ್‌ಗೆ ಬಿಡುವು ನೀಡಿ ನಟನೆಗೆ ಹೋಗುತ್ತಾಳೆ ಎಂಬುದಕ್ಕೆ ತಂದೆ ದೀಪಕ್ ಸಿಟ್ಟಾಗಿದ್ದರು ಎನ್ನಲಾಗಿದೆ.
ರಾಧಿಕಾ ಟೆನಿಸ್ ಆಟದಿಂದ ಗುರುತಿಸಿಕೊಂಡಿದ್ದರಿಂದ ಗುರುಗ್ರಾಮದಲ್ಲಿ ಸ್ಥಳೀಯ ಟೆನಿಸ್ ಅಕಾಡೆಮಿ ತೆರೆದಿದ್ದರು. ಇದರಿಂದ ಅವರು ಸಾಕಷ್ಟು ಆದಾಯವನ್ನೂ ಸಂಪಾದಿಸುತ್ತಿದ್ದರು. ಮನೆಗೂ ಹಣಕಾಸಿನ ಸಹಾಯ ನೀಡುತ್ತಿದ್ದರು. ‘ಮಗಳ ಸಂಪಾದನೆಯಿಂದ ತಂದೆ ಬದುಕುತ್ತಿದ್ದಾನೆ’ ಎಂದು ದೀಪಕ್ ಬಗ್ಗೆ ನೆರೆಹೊರೆಯವರು ಕುಹಕವಾಡುತ್ತಿದ್ದರೂ ಎನ್ನಲಾಗಿದೆ. ಹಾಗಾಗಿ ಮಗಳ ಬಗ್ಗೆ ದೀಪಕ್ ಯಾದವ್ ಕೋಪಗೊಂಡಿದ್ದರು ಎನ್ನಲಾಗಿದೆ.
ಮಗಳಿಗೆ ಸಿಕ್ಕ ಯಶಸ್ಸು, ಸಾಧನೆಯಿಂದ ಜನರಾಡುವ ಮಾತಿಗೆ ದೀಪಕ್ ಯಾದವ್ ಮಾನಸಿಕವಾಗಿ ವಿಚಿಲಿತರಾಗಿದ್ದರು ಎಂಬುದಾಗಿ ಚರ್ಚೆಯಾಗುತ್ತಿದೆ. ಸದ್ಯ ನಿಜಾಂಶ ತನಿಖೆಯಿಂದ ಬಯಲಾಗಬೇಕಿದೆ.
ಇದನ್ನು ಓದಿ: