ಪೋಟೋ ತೆಗೆಯುತ್ತೇನೆಂದು ಸೇತುವೆ ತುದಿಗೆ ಪತಿಯನ್ನು ನಿಲ್ಲಿಸಿ ನದಿಗೆ ನೂಕಿದ ಪತ್ನಿ
ಸೇತುವೆ ಮೇಲೆ ಫೋಟೋ ತೆಗೆಸಿಕೊಳ್ಳುವ ರೀತಿ ನಾಟಕ ಮಾಡಿದ ಪತ್ನಿ ಮೊದಲು ತಾನು ಫೋಟೋ ತೆಗೆಸಿಕೊಂಡು ನಂತರ ಪತಿಯನ್ನು ಸೇತುವೆ ತುದಿಗೆ ನಿಲ್ಲಿಸಿ ತಳ್ಳಿದ್ದಾಳೆ.
ರಾಯಚೂರು: ಪೋಟೋ ತೆಗೆಯುತ್ತೇನೆ ಸೇತುವೆ ಮೇಲೆ ನಿಲ್ಲು ಎಂದ ಖತರ್ನಾಕ್ ಪತ್ನಿಯೇ ತನ್ನ ಪತಿಯನ್ನು ನದಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದಾಳೆ. ರಾಯಚೂರಿನ ಗುರ್ಜಾಪುರ ಸೇತುವೆ ಕಂ ಬ್ಯಾರೇಜ್ ಬಳಿ ಪತಿಯ ಜೊತೆ ಬೈಕ್ ನಲ್ಲಿ ಬಂದಿದ್ದ ಪತ್ನಿ ಪತಿಯನ್ನು ಕೊಲ್ಲಲು ಈ ಪ್ಲಾನ್ ಮಾಡಿದ್ದಾಳೆ.
ಸೇತುವೆ ಮೇಲೆ ಫೋಟೋ ತೆಗೆಸಿಕೊಳ್ಳುವ ರೀತಿ ನಾಟಕ ಮಾಡಿದ ಪತ್ನಿ ಮೊದಲು ತಾನು ಫೋಟೋ ತೆಗೆಸಿಕೊಂಡು ನಂತರ ಪತಿಯನ್ನು ಸೇತುವೆ ತುದಿಗೆ ನಿಲ್ಲಿಸಿ ತಳ್ಳಿದ್ದಾಳೆ.
ಪತ್ನಿ ನದಿಗೆ ತಳ್ಳಿದಾಗ ಈಜು ಬರುತ್ತಿದ್ದ ಪತಿ ಹೇಗೋ ನದಿಯ ಮಧ್ಯೆ ಈಜಿಕೊಂಡು ಬಂದು ಬಂಡೆಯೊಂದರ ಮೇಲೆ ಕುಳಿತುಕೊಂಡಿದ್ದಾನೆ. ಆತನ ಕಿರುಚಾಟ ಕೇಳಿದ ಅಕ್ಕಪಕ್ಕದಲ್ಲಿದ್ದವರು ಆಗಮಿಸಿ ರಕ್ಷಣೆ ಮಾಡಿದ್ದಾರೆ. ಸುಮಾರು 2 ಗಂಟೆಗಳ ಕಾಲ ನದಿಯಲ್ಲಿದ್ದ ಪತಿಯನ್ನು ಸ್ಥಳೀಯರು ಹಗ್ಗದ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.
ರಾಯಚೂರು ಶಕ್ತಿನಗರದಲ್ಲಿ ವಾಸವಾಗಿದ್ದ ಈ ದಂಪತಿ ಕುಟುಂಬ ಕಲಹದ ಕಾರಣ ಪತ್ನಿ ಪತಿಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾಳೆ ಎನ್ನಲಾಗಿದೆ.
ಇದನ್ನು ಓದಿ: