ನವಜಾತ ಶಿಶುಗಳನ್ನು ಕದಿಯಲು ಬಂದಾತನಿಗೆ ಸಾರ್ವಜನಿಕರಿಂದ ಥಳಿತ
ರಾಯಚೂರು: ಇತ್ತೀಚೆಗೆ ಅಪರಾಧಗಳು ಮಿತಿ ಮೀರಿ ಹೆಚ್ಚಾಗುತ್ತಿದೆ. ಸಾಕಷ್ಟು ಸಾವು ನೋವುಗಳ ನಡುವೆ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಈ ನಡುವೆ ಇಲ್ಲೋಬ್ಬಾತ ರಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯ ವೇಷ ಧರಿಸಿ ನವಜಾತ ಶಿಶು ಕದಿಯಲು ಬಂದು ಸಿಕ್ಕಿಬಿದ್ದಿದ್ದಾನೆ.
ರಾಯಚೂರಿನ ರಿಮ್ಸ್ ಆಸ್ಪತ್ರೆ ಬೆಳಗ್ಗಿನ ಜಾವ 2 ಗಂಟೆಯ ಸುಮಾರಿಗೆ ವ್ಯಕ್ತಿಯೋರ್ವ ಮಹಿಳೆಯ ವೇಷದಲ್ಲಿ ಶಿಶುವನ್ನು ಕದಿಯಲು ಬಂದು ಸಿಕ್ಕಿಬಿದ್ದಿದ್ದು ಈ ಖತರ್ನಾಕ್ ಕಳ್ಳ ಹಸಿರು ಬಣ್ಣದ ಸೀರೆ ಉಟ್ಟು ಲೇಡಿ ಗೆಟಪ್ಪಿನಲ್ಲಿ ಆಸ್ಪತ್ರೆಯ ಸೆಕ್ಯುರಿಟಿಗಳು ಮಲಗಿರುವುದನ್ನು ಗಮನಿಸಿ ಸಿಬ್ಬಂದಿಯ ಕಣ್ಣು ತಪ್ಪಿಸಿ ನಾಲ್ಕನೇ ಮಹಡಿಯಲ್ಲಿರುವ ಬಾಣಂತಿಯರ ಕೊಠಡಿಗೆ ಮೂವರು ಆರೋಪಿಗಳು ಬಂದಿದ್ದರು.
ಈ ವೇಳೆ ಎಚ್ಚರಗೊಂಡ ಬಾಣಂತಿಯರ ಕುಟುಂಬಸ್ಥರು ಜೋರಾಗಿ ಕಿರುಚಿದ್ದಾರೆ. ಬಾಣಂತಿಯರ ಕಿರುಚಾಟದ ಸದ್ದು ಕೇಳುತ್ತಿದ್ದಂತೆ ಎಚ್ಚರಗೊಂಡ ಜನರು ಕೂಡಲೇ ಆರೋಪಿಯನ್ನು ಹಿಡಿದಿದ್ದಾರೆ. ವ್ಯಕ್ತಿ ಸಿಕ್ಕಿ ಬೀಳುತ್ತಿದ್ದಂತೆ ಉಳಿದ ಇಬ್ಬರು ಪರಾರಿಯಾಗಿದ್ದಾರೆ. ಸದ್ಯ ಆರೋಪಿಗೆ ಥಳಿಸಿ ಸ್ಥಳೀಯ ಪೊಲೀಸರ ವಶಕ್ಕೆ ನೀಡಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈತ ಮಕ್ಕಳ ಕಳ್ಳನೇ ಅಥವಾ ಯಾವ ಉದ್ದೇಶಕ್ಕಾಗಿ ಬಂದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.