Ahmedabad Bridge Collapse ಕುಸಿದ ಸೇತುವೆ: 9 ಮಂದಿ ಸಾವು, ವಾಹನಗಳು ನೀರುಪಾಲು, ನಾಪತ್ತೆ ಆದವರಿಗೆ ಮುಂದುವರಿದ ಶೋಧ ಕಾರ್ಯ Infomindz
Ahmedabad Bridge Collapse News ಅಹಮದಾಬಾದ್: ಗುಜರಾತ್ ನಲ್ಲಿ ನಾಲ್ಕು ದಶಕ ಹಳೆಯದಾದ ಗಂಭೀರ್ ಸೇತುವೆಯ ಒಂದು ಭಾಗ ಕುಸಿದ ಪರಿಣಾಮ 9 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.(Infomindz)
ಗುಜರಾತ್ ವಡೋದರಾದ ಪದ್ರಾ ತಾಲೂಕಿನ ಮುಜ್ಪುರ ಬಳಿ ಸೇತುವೆಯ ಒಂದು ಭಾಗ ಕುಸಿತಗೊಂಡು ಐದು ವಾಹನಗಳು ಮಹಿಸಾಗರ್ ನದಿಗೆ ಬಿದ್ದ ಪರಿಣಾಮ ಮೂವರನ್ನು ರಕ್ಷಿಸಲಾಗಿದ್ದು, 9 ಮಂದಿ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ 7.45 ರ ಸುಮಾರಿಗೆ ಸೇತುವೆ ಕುಸಿದಿದೆ. ಈ ಸೇತುವೆ ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ನಡುವೆ ನಿರ್ಮಿಸಲಾಗಿತ್ತು. 45 ವರ್ಷದ ಹಳೆಯ ಸೇತುವೆ ಇದಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ವಡೋದರಾ ಜಿಲ್ಲೆಯ ಪದ್ರಾದಲ್ಲಿ ಬೆಳಿಗ್ಗೆ 7.30 ರ ಸುಮಾರಿಗೆ ಸೇತುವೆ ಕುಸಿದಿದೆ. ರಾಜ್ಯ ಹೆದ್ದಾರಿಯ ಉದ್ದಕ್ಕೂ ಮಹಿಸಾಗರ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಸೇತುವೆ ವಡೋದರಾ ಮತ್ತು ಆನಂದ್ ಅನ್ನು ಸಂಪರ್ಕಿಸುತ್ತದೆ.
ಮುಜ್ಪುರ್ ಗ್ರಾಮದ ಬಳಿ ಈ ಘಟನೆ ಸಂಭವಿಸಿದ್ದು, ಎರಡು ಟ್ರಕ್ ಗಳು, ಒಂದು ಬೊಲೆರೊ ಜೀಪ್ ಮತ್ತು ಇನ್ನೊಂದು ಜೀಪ್ ದಾಟುತ್ತಿದ್ದಾಗ ಸೇತುವೆ ಇದ್ದಕ್ಕಿದ್ದಂತೆ ಕುಸಿದು ಬಿತ್ತು. ನಾಲ್ಕು ವಾಹನಗಳು ಕುಸಿತದ ಎರಡೂ ಬದಿಗಳಲ್ಲಿ ಹರಿಯುವ ಮಹಿಸಾಗರ್ ನದಿಗೆ ಉರುಳಿದವು.
Ahmedabad Bridge Collapse ಕುಸಿದ ಸೇತುವೆ: 9 ಮಂದಿ ಸಾವು, ವಾಹನಗಳು ನೀರುಪಾಲು, ನಾಪತ್ತೆ ಆದವರಿಗೆ ಮುಂದುವರಿದ ಶೋಧ ಕಾರ್ಯ Infomindzಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ಪ್ರದೇಶಗಳನ್ನು ಸಂಪರ್ಕಿಸುವ ನದಿಯಲ್ಲಿರುವ ಗಂಭೀರಾ ಸೇತುವೆಯ ಸ್ಲ್ಯಾಬ್ ಕುಸಿದ ನಂತರ ಐದರಿಂದ ಆರು ವಾಹನಗಳು ಮಹಿಸಾಗರ್ ನದಿಗೆ ಬಿದ್ದಿವೆ ಎಂದು ಗುಜರಾತ್ ಆರೋಗ್ಯ ಸಚಿವ ರುಷಿಕೇಶ್ ಪಟೇಲ್ ತಿಳಿಸಿದ್ದಾರೆ. ಸದ್ಯ ಶೋಧ ಕಾರ್ಯ ಮುಂದುವರೆದಿದೆ.