ದೆವ್ವ ಬಿಡಿಸುವುದಾಗಿ ಚಿತ್ರಹಿಂಸೆ: ಅಸ್ವಸ್ಥರಾದ ಮಹಿಳೆ ಸಾವು: woman death
ವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನ ಜಂಬರಗಟ್ಟೆಯಲ್ಲಿ ಮಹಿಳೆಗೆ ದೆವ್ವ ಸೇರಿಕೊಂಡಿದ್ದು ಅದನ್ನು ಬಿಡಿಸುವುದಾಗಿ ಹೇಳಿ ಚಿತ್ರಹಿಂಸೆ ನೀಡಿದ್ದಾರೆ.
ಶಿವಮೊಗ್ಗ: shivamogga ಸಮಾಜದಲ್ಲಿ ಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಅಂಧತ್ವ, ಮೂಢನಂಬಿಕೆ , ಮಾಟ ಮಂತ್ರ ಇತ್ಯಾದಿ ಹೆಚ್ಚಾಗುತ್ತಿದೆ. ವಶೀಕರಣದಿಂದ ಇನ್ನೊಬ್ಬರ ಜೀವನ ಹಾಳು ಮಾಡುತ್ತದೆ ಎಂದು ನಂಬುವ ಜನ ಕೆಲವೊಮ್ಮೆ ತಾವೇ ತೋಡಿದ ಗುಂಡಿಗೆ ಬೀಳುವ ಪ್ರಕರಣಗಳು ನಡೆಯುತ್ತಿರುತ್ತದೆ.
ಹಾಗೆಯೇ ಇಲ್ಲೊಬ್ಬಾತ ತನ್ನ ತಾಯಿ ಮೈಯಲ್ಲಿ ದೆವ್ವ ಇದೆ ಎಂದು ಬಿಡಿಸಲು ಹೆಂಗಸೊಬ್ಬಳ ಬಳಿ ಕರೆದುಕೊಂಡು ಹೋಗಿದ್ದಾನೆ.
ಆಕೆ ದೆವ್ವ ಬಿಡಿಸುವುದಾಗಿ ಹೇಳಿ ಚಿತ್ರಹಿಂಸೆ ನೀಡಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನ ಜಂಬರಗಟ್ಟೆಯಲ್ಲಿ ಮಹಿಳೆಗೆ ದೆವ್ವ ಸೇರಿಕೊಂಡಿದ್ದು ಅದನ್ನು ಬಿಡಿಸುವುದಾಗಿ ಹೇಳಿ ಚಿತ್ರಹಿಂಸೆ ನೀಡಿದ್ದಾರೆ.
ಇದರಿಂದ ಆರೋಗ್ಯದಲ್ಲಿ ಏರುಪೇರಾಗಿ ಮಹಿಳೆ ಸಾವನ್ನಪ್ಪಿದ್ದಾರೆ. ಜಂಬರಗಟ್ಟೆ ನಿವಾಸಿ ಗೀತಮ್ಮ (50) ಸಾವನ್ನಪ್ಪಿದ ಮಹಿಳೆ. ತಾಯಿಗೆ ಹುಷಾರಿಲ್ಲದ ಹಿನ್ನೆಲೆ ಮಗನೇ ದೆವ್ವ ಬಿಡಿಸಲು ಹೊಸ ಜಂಬರಘಟ್ಟಕ್ಕೆ ಕರೆದುಕೊಂಡು ಹೋಗಿದ್ದ.
ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಗೀತಮ್ಮನನ್ನು ದೆವ್ವ ಹಿಡಿದಿದೆ ಎಂದು ಕರೆದುಕೊಂಡು ಹೋಗಿದ್ದ. ಈ ವೇಳೆ ದೆವ್ವಾ ಬಿಡಿಸುತ್ತೇನೆ ಎಂದು ಶಾಂತಮ್ಮ ಎಂಬ ಮಹಿಳೆ ಗೀತಮ್ಮನಿಗೆ ಚಿತ್ರಹಿಂಸೆ ನೀಡಿದ್ದಾಳೆ ಎನ್ನಲಾಗಿದ್ದು, ಚಿತ್ರಹಿಂಸೆ ತಾಳಲಾರದೇ ಗೀತಮ್ಮ ಸಾವನ್ನಪ್ಪಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನು ಓದಿ: