ಎಲ್ಲೆ ಮೀರಿದ ಅಪ್ರಾಪ್ತರ ಪ್ರೀತಿ: ಯುವತಿ ಮಗುವಿಗೆ ಜನ್ಮ ನೀಡಿದ ಕೂಡಲೇ ಆರೋಪಿ ಪರಾರಿ, ನ್ಯಾಯಕ್ಕೆ ಅಂಗಲಾಚಿದ ಪೋಷಕರು: Mangalore News
Mangalore News ಮಂಗಳೂರು: ಕರಾವಳಿ ಭಾಗದಲ್ಲಿ ಇತ್ತೀಚೆಗೆ ಅಪರಾಧಗಳು ಹೆಚ್ಚಾಗುತ್ತಿದ್ದು ನ್ಯಾಯದ ಕೂಗು ಎಲ್ಲೆಡೆ ಕೇಳಿಸುತ್ತಿದೆ.
ಅಪರಾಧಗಳಿಗೆ ಹೆದರದ ಜನ ನ್ಯಾಯಕ್ಕೆ ಜನರ ಮುಂದೆ ಅಂಗಲಾಚಿಕೊಳ್ಳುತ್ತಿದ್ದಾರೆ.
ಆದರೆ ಇಲ್ಲೊಂದು ಬೂದಿ ಮುಚ್ಚಿದ ಕೆಂಡದಂತಿದ್ದ ಪ್ರಕರಣವೊಂದು ಜಗಜ್ಜಾಹೀರಾಗಿದೆ.
ಇಲ್ಲೊಬ್ಬ ಅಪ್ರಾಪ್ತ ಯುವಕ ಯುವತಿಯನ್ನು ಪುಸಲಾಯಿಸಿ ಲವ್, ಸೆಕ್ಸ್, ಮಗು ಜನಿಸಿದ ಬಳಿಕ ಎಸ್ಕೇಪ್ ಆಗಿದ್ದಾನೆ.
ಇದಕ್ಕೆ ಆತನ ಪ್ರತಿಷ್ಠಿತ ತಂದೆ ಸಹಕಾರ ನೀಡಿದ್ದು ತಾಯಿ ಮಗುವಿಗೆ ನ್ಯಾಯ ಸಿಗದಾಗಿದೆ. ಯುವತಿಗೆ ಮೋಸ ಮಾಡಿದ ಯುವಕ ಎಸ್ಕೇಪ್ ಆಗಿದ್ದು ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣರಾವ್ ವಿರುದ್ಧ ಆರೋಪ ಕೇಳಿಬರುತ್ತಿದೆ.
ಬಿಜೆಪಿ ಮುಖಂಡನ ಪುತ್ರನ ಕೃಷ್ಣರಾವ್ ಸಹಪಾಠಿ ಯುವತಿಯನ್ನು ಗರ್ಭಿಣಿ ಮಾಡಿ ಕೈಕೊಟ್ಟಿದ್ದಾನೆ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ Bsc ವ್ಯಾಸಂಗ ಮಾಡುತ್ತಿರುವ ಯುವತಿ ಮತ್ತು ಆರೋಪಿ ಕೃಷ್ಣ ಪುತ್ತೂರಿನಲ್ಲಿ ಹೈಸ್ಕೂಲ್‌ನಲ್ಲಿ ಓದುವಾಗಲೇ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದೆ. ಆ ವೇಳೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿಯನ್ನು ಮನೆಗೆ ಕರೆಸಿ ಜೊತೆ ಸೆ*ಕ್ಸ್ ಮಾಡಿದ್ದಾನೆ. ಕೆಲ ತಿಂಗಳ ಬಳಿಕ ನಾನು ಗರ್ಭಿಣಿ ಎಂದು ಕೃಷ್ಣ ರಾವ್ ಗೆ ತಿಳಿಸಿದ ಯುವತಿಗೆ ಗರ್ಭಪಾತ ಮಾಡಿಸಲು ಸೂಚಿಸಿದ್ದಾನೆ.
ಆದಾಗಲೇ ಕಾಲ ಮಿಂಚಿತ್ತು. ಆರೋಪಿಯ ತಂದೆಗೂ ಯುವತಿಯ ಪೋಷಕರಿಗೂ ಮಾತಿನ ಚಕಮಕಿಯೂ ನಡೆದಿದ್ದೂ ಗರ್ಭಪಾತಕ್ಕೂ ಸೂಚಿಸಿದ್ದರು ಎನ್ನಲಾಗಿದೆ. ಲವ್ ಹೆಸರಲ್ಲಿ ಯುವತಿಯನ್ನು ಗರ್ಭವತಿಯನ್ನಾಗಿ ಮಾಡಿ ಈಗ ಉಲ್ಟಾ ಹೊಡೆದ ಆರೋಪಿ ಕೃಷ್ಣ ರಾವ್ ಯುವತಿಯನ್ನು ಮದುವೆಯಾಗಲು ನಿರಾಕರಿಸಿ ನಾಪತ್ತೆಯಾಗಿದ್ದಾನೆ.
ಈ ಹಿನ್ನೆಲೆಯಲ್ಲಿ ಆಕೆ ಪುತ್ತೂರಿನ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು ಆರೋಪಿ ಪರಾರಿಯಾದ ಹಿನ್ನೆಲೆಯಲ್ಲಿ ಮಹಿಳಾ ಠಾಣೆಗೆ ಯುವತಿ & ಪೋಷಕರು ದೂರು ನೀಡಿದ್ದಾರೆ.
ಪ್ರೀತಿ ಹೆಸರಲ್ಲಿ ಮೋಸ ಮಾಡಿದ ಶ್ರೀಕೃಷ್ಣನ ಪತ್ತೆಗೆ ಪೊಲೀಸರ ಬಲೆ ಬೀಸಿದ್ದಾರೆ. BNS 64(1), 69ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು. ತಲೆಮರೆಸಿಕೊಂಡಿರುವ ಆರೋಪಿ ಕೃಷ್ಣ ರಾವ್ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.