Back To Top

 ಮರಕ್ಕೆ ಡಿಕ್ಕಿ ಹೊಡೆದ ಕಾರು: ಪ್ರಯಾಣಿಸುತ್ತಿದ್ದ ಗರ್ಭಿಣಿ ರುಂಡ, ಎಡಗೈ ಕಟ್
July 3, 2025

ಮರಕ್ಕೆ ಡಿಕ್ಕಿ ಹೊಡೆದ ಕಾರು: ಪ್ರಯಾಣಿಸುತ್ತಿದ್ದ ಗರ್ಭಿಣಿ ರುಂಡ, ಎಡಗೈ ಕಟ್

ರಾಜ್ಯದಲ್ಲಿ ರಸ್ತೆ ಅಪಘಾತಗಳು ಹೆಚ್ಚು ಹೆಚ್ಚು ಸಂಭವಿಸುತ್ತಿದ್ದು, ಒಂದೆಡೆ ಮಳೆಯಿಂದ ಸಾವು ನೋವು ಹೆಚ್ಚಾದರೆ ಇನ್ನೊಂದೆಡೆ ಭೀಕರ ಅಪಘಾತಗಳು ಮನುಕುಲದಲ್ಲಿ ಆತಂಕ ಮೂಡಿಸುತ್ತದೆ.

ಕೋಲಾರ: ರಾಜ್ಯದಲ್ಲಿ ರಸ್ತೆ ಅಪಘಾತಗಳು ಹೆಚ್ಚು ಹೆಚ್ಚು ಸಂಭವಿಸುತ್ತಿದ್ದು, ಒಂದೆಡೆ ಮಳೆಯಿಂದ ಸಾವು ನೋವು ಹೆಚ್ಚಾದರೆ ಇನ್ನೊಂದೆಡೆ ಭೀಕರ ಅಪಘಾತಗಳು ಮನುಕುಲದಲ್ಲಿ ಆತಂಕ ಮೂಡಿಸುತ್ತದೆ. ಕಾರೊಂದು ಮರಕ್ಕೆ ಡಿಕ್ಕಿಯಾಗಿ ಗರ್ಭಿಣಿ ರುಂಡ ಕಟ್ ಆಗಿ ಬಿದ್ದ ಘಟನೆ ಕೋಲಾರದ ಮಾಲೂರಿನಭಾವನಹಳ್ಳಿ ರಸ್ತೆಯ ಪುರ ಗೇಟ್ ಬಳಿ ನಡೆದಿದೆ.
ಗರ್ಭಿಣಿ ಅರ್ಚನಾ ಅವರನ್ನು ಅವರ ಮಾವ ನಾರಾಯಣಸ್ವಾಮಿ ಅವರ ಗ್ರಾಮ ಕೊರಚನೂರಿಗೆ ಕರೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಎದುರಿಗೆ ಲಾರಿಯೊಂದು ಬಂದಿದ್ದು, ಅದನ್ನು ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಕಾರಿನಲ್ಲಿದ್ದ ಅರ್ಚನಾ ದೇಹದಿಂದ ರುಂಡ ಹಾಗೂ ಎಡಗೈ ಭಾಗ ಪ್ರತ್ಯೇಕವಾಗಿದೆ.
ಪರಿಣಾಮ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಚಾಲಕನೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ:

Prev Post

ಕೈ ಕೊಟ್ಟ ಪ್ರೀತಿಸಿದ ಹುಡುಗಿ: ನೇಣು ಬಿಗಿದುಕೊಂಡು ಆತ್ಮಹತ್ಯೆ(love failure lover suicide) ಮಾಡಿಕೊಂಡ…

Next Post

ಕೋತಿಗಳ ಮಾರಣಹೋಮ: ವಿಷಪ್ರಾಶನ ಶಂಕೆ

post-bars

Leave a Comment

Related post