ಕ್ಯಾಂಟರ್- ಕಾರು ಮುಖಾಮುಖಿ: ಕುಟುಂಬದ ನಾಲ್ವರು ಕೂಡ ಸಾವು: Accident News in Kannada
Accident News in Kannada: Hassan: ಹಾಸನ, ಕುಣಿಗಲ್, ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುತ್ತಿದೆ. ಸೂಚನ ಫಲಕಗಳ ಅವ್ಯವಸ್ಥೆಯೋ? ಚಾಲಕರ ಅಜಾಗರೂಕತೆಯಿಂದಲೋ ರಸ್ತೆಯಲ್ಲಿ ಹಲವರು ಉಸಿರು ಚೆಲ್ಲುತ್ತಿದ್ದಾರೆ.
ಕುಣಿಗಲ್: ಹಾಸನ, ಕುಣಿಗಲ್, ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುತ್ತಿದೆ. ಸೂಚನ ಫಲಕಗಳ ಅವ್ಯವಸ್ಥೆಯೋ? ಚಾಲಕರ ಅಜಾಗರೂಕತೆಯಿಂದಲೋ ರಸ್ತೆಯಲ್ಲಿ ಹಲವರು ಉಸಿರು ಚೆಲ್ಲುತ್ತಿದ್ದಾರೆ. ನಿನ್ನೆ ರಾತ್ರಿ ಅಂದರೆ ಜೂನ್ 30ರಂದು ಸಂಭವಿಸಿದ ಕ್ಯಾಂಟರ್ ಹಾಗೂ ಕಾರು ನಡುವೆ ಡಿಕ್ಕಿಯಲ್ಲಿ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75 ಬಿದನಗೆರೆ ಬೈಪಾಸ್ ಬಳಿ ಭಾನುವಾರ ಸಂಭವಿಸಿದೆ.
ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ನಟರಾಜ ಬಡಾವಣೆ ನಿವಾಸಿ ಭಾರತ್ ಕೋಪರೇಟಿವ್ ಬ್ಯಾಂಕ್ ನಿರ್ದೇಶಕ ಸೀಬೆಗೌಡ (45) ಪತ್ನಿ ಶೋಭಾ (36) ಮಕ್ಕಳಾದ ದುಂಬಿಶ್ರೀ, ಭಾನುಕಿರಣ್ ಗೌಡ ಮೃತ ದುರ್ದೈವಿಗಳು.
ಸೀಬೆಗೌಡ ತನ್ನ ಮಗನನ್ನು ಭಾನುಕಿರಣ್ ನನ್ನು ಕುಣಿಗಲ್ ನ ವಾಲಿ ಇಂಟರ್ ನ್ಯಾಷನಲ್ ಶಾಲೆಗೆ ಬಿಡಲು ತನ್ನ ಕುಟುಂಬದೊಂದಿಗೆ ಕಾರಿನಲ್ಲಿ ಬರುವಾಗ ಕಾರಿಗೆ ಹಾಸನ ನಡೆಯಿಂದ ಬಂದ ಕ್ಯಾಂಟರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಈ ಘಟನೆಗೆ ಕ್ಯಾಂಟರ್ ನ ಚಾಲಕನ ಅಜಾಗರೂಕತೆ ಮತ್ತು ಸಾರಿಗೆ ನಿಯಮ ಉಲ್ಲಂಘನೆ ಕಾರಣ ಎನ್ನಲಾಗಿದೆ.

Accident News in Kannada: ದಿನನಿತ್ಯ ಸಾವಿರಾರು ಜನ ಓಡಾಡುವ ರಸ್ತೆ ಅಸಮರ್ಪಕ ಕಾಮಗಾರಿಯಿಂದ ಮತ್ತು ಅಪಘಾತಗಳಾದರೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದು ಬೇಸರದ ಸಂಗತಿ. ಬಿದನಗೆರೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕಾರು ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಿಂದ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು ಭಾನುವಾರವಾದ್ದರಿಂದ ವಾಹನಗಳ ಸಂಚಾರ ಈ ಮಾರ್ಗದಲ್ಲಿ ದುಪ್ಪಟ್ಟು ಇತ್ತು. ಕ್ಯಾಂಟರ್ ಮತ್ತು ಕಾರು ನಡುವೆ ಸಂಭವಿಸಿದ ಡಿಕ್ಕಿಯಿಂದಾಗಿ ಈ ಮಾರ್ಗದಲ್ಲಿ ಸಂಚಾರ ದಟ್ಟಣೆಯಿಂದ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.
ವಿಷಯ ತಿಳಿದ ಕುಣಿಗಲ್ ಠಾಣೆಯ ವೃತ್ತ ನಿರೀಕ್ಷಕ ನವೀನ್ ಗೌಡ ಹಾಗೂ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳದಲ್ಲಿ ಸಂಚಾರಿ ವ್ಯವಸ್ಥೆ ಸುಗಮಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟರು. ಸದ್ಯ ಮೃತದೇಹವನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು ಇಂದು ಅವರ ಸ್ವಗೃಹದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಈ ಬಗ್ಗೆ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Accident News in Kannada
ಇದನ್ನು ಓದಿ: