Back To Top

 ಜಗನ್ನಾಥನ ಮೆರವಣಿಗೆಯಲ್ಲಿ ದಿಕ್ಕಾಪಾಲಾಗಿ ಓಡಿದ ಆನೆಗಳು: ಹಲವರಿಗೆ ಸಣ್ಣಪುಟ್ಟ ಗಾಯ: puri jagannatha ratha yathra
June 27, 2025

ಜಗನ್ನಾಥನ ಮೆರವಣಿಗೆಯಲ್ಲಿ ದಿಕ್ಕಾಪಾಲಾಗಿ ಓಡಿದ ಆನೆಗಳು: ಹಲವರಿಗೆ ಸಣ್ಣಪುಟ್ಟ ಗಾಯ: puri jagannatha ratha yathra

Puri jagannatha ratha yathra: ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ಗೆ ಕ್ಷಣಗಣನೆ ಆರಂಭವಾಗಿದೆ.  ಜಗನ್ನಾಥ, ಬಲಭದ್ರ ಹಾಗೂ ಸುಭದ್ರೆಯರ ವಿಗ್ರಹಗಳನ್ನು ಜಗನ್ನಾಥ ದೇಗುಲದಿಂದ ಗುಂಡಿಚಾ ದೇಗುಲದವರೆಗೆ ರಥದಲ್ಲಿ ಕರೆದೊಯ್ಯಲಾಗುತ್ತದೆ.

ಪುರಿ: ಒಡಿಶಾದ ಪುರಿ ಜಗನ್ನಾಥ puri jaganntha rathaರಥಯಾತ್ರೆ ಗೆ ಕ್ಷಣಗಣನೆ ಆರಂಭವಾಗಿದೆ.  ಜಗನ್ನಾಥ, ಬಲಭದ್ರ ಹಾಗೂ ಸುಭದ್ರೆಯರ ವಿಗ್ರಹಗಳನ್ನು ಜಗನ್ನಾಥ ದೇಗುಲದಿಂದ ಗುಂಡಿಚಾ ದೇಗುಲದವರೆಗೆ ರಥದಲ್ಲಿ ಕರೆದೊಯ್ಯಲಾಗುತ್ತದೆ. ಈ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಉತ್ಸವವನ್ನು ವೀಕ್ಷಿಸಲು ಈಗಾಗಲೇ ಲಕ್ಷಾಂತರ ಭಕ್ತರು ಪುರಿಯನ್ನು ತಲುಪಿದ್ದಾರೆ.

ರಥಯಾತ್ರೆ 9 ದಿನಗಳವರೆಗೆ ಇರಲಿದೆ.

ಶುಕ್ರವಾರ ಬೆಳಿಗ್ಗೆ ಅಹಮದಾಬಾದ್ನಲ್ಲಿ ನಡೆಯುತ್ತಿದ್ದ 148ನೇ ಭಗವಾನ್ ಜಗನ್ನಾಥಜಿಯವರ ಮಹಾ ರಥಯಾತ್ರೆಯಲ್ಲಿ ಅಹಿತಕರ ಘಟನೆ ನಡೆದಿದೆ. ಮೆರವಣಿಗೆಯ ಭಾಗವಾಗಿದ್ದ ಮೂರು ಆನೆಗಳು ಇದ್ದಕ್ಕಿದ್ದಂತೆ ದಿಕ್ಕಾಪಾಲಾಗಿ ಓಡಿಹೋದವು. ಈ ವೇಳೆ ಆನೆಯೊಂದು ಭಕ್ತರನ್ನಅಟ್ಟಾಡಿಸಿದೆ.ರಥಯಾತ್ರೆಯ ಮಾರ್ಗದಲ್ಲಿ ಆನೆಗಳು ದಿಕ್ಕು ತಪ್ಪಿದಾಗ ಜನರು ಕೂಡ ಭಯದಿಂದ ದಿಕ್ಕಾಪಾಲಾಗಿ ಓಡಿದರು. ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎನ್ನಲಾಗಿದೆ.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಪವಿತ್ರ ಪಹಿಂದ್ ಸಮಾರಂಭವನ್ನು ನೆರವೇರಿಸಿದ ನಂತರ ಯಾತ್ರೆಗೆ ಚಾಲನೆ ನೀಡಿದ್ದರು, ಮೊದಲ ಬಾರಿಗೆ ಭಗವಂತನಿಗೆ ಗೌರವ ಸಲ್ಲಿಸಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮ್ಮ ಕುಟುಂಬದೊಂದಿಗೆ ಜಮಾಲ್ಪುರ್ ಜಗನ್ನಾಥ ದೇವಸ್ಥಾನದಲ್ಲಿ ಮಂಗಳಾ ಆರತಿಯಲ್ಲಿ ಭಾಗವಹಿಸಿ, ಆ ದಿನಕ್ಕೆ ಭಕ್ತಿಯ ಮೆರುಗು ನೀಡಿದರು. ಇನ್ನಷ್ಟು ಜನ ಜಾತ್ರೆಗೆ ಸೇರುವ ಸಂಭವ ಇದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇದನ್ನು ಓದಿ:

Prev Post

ಬಾಹ್ಯಾಕಾಶ ಕ್ಷೇತ್ರದಲ್ಲಿಭಾರತದ ಹೊಸ ಇತಿಹಾಸ:  ಗಗನ ಕೇಂದ್ರ ತಲುಪಿದ ಭಾರತೀಯ ಶುಭಾಂಶು ಶುಕ್ಲಾ:…

Next Post

ಶಿರಸಿಯ ಅಡಿಕೆ ಬೆಳಗಾರರೇ ಗಮನಿಸಿ: Arecanut Price in Sirsi June 27

post-bars

Leave a Comment

Related post