ಬೆಂಗಳೂರಿನಲ್ಲಿ ಗಾಂಜಾ ಮಿಶ್ರಿತ ಜೆಲ್ಲಿ ಚಾಕ್ಲೆಟ್ ಮಾರಾಟ: ಆರೋಪಿಗಳು ಪೊಲೀಸ್ ಬಲೆಗೆ Ganja in Jelly Chocolate
Ganja in Jelly Chocolate: ಕಾಲೇಜು ವಿದ್ಯಾರ್ಥಿಗಳು, ಮೆಡಿಕಲ್, ಇಂಜಿನಿಯರ್ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಈ ಗಾಂಜಾ ಮಿಶ್ರಿತ ಜೆಲ್ಲಿ ಚಾಕ್ಲೆಟ್ ಅನ್ನು ಮಾರಾಟ ಮಾಡುತ್ತಿದ್ದ ಖದೀಮರನ್ನು ಬ್ಯಾಟರಾಯಪುರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ganja in jelly chocolate ಮಾದಕವಸ್ತು ಸೇವನೆ ವ್ಯಾಪಕವಾಗಿ ನಡೆಯುತ್ತಿರುವ ಬೆನ್ನಲ್ಲೇ ವಿದ್ಯಾರ್ಥಿಗಳೇ ಇಂತಹ ಅಕ್ರಮ ಚಟುವಟಿಕೆಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಇದರ ಜೊತೆಗೆ ರಾಜಧಾನಿ ಬೆಂಗಳೂರಿಗೆ ಗಾಂಜಾ ಮಿಶ್ರಿತ ಜೆಲ್ಲಿ ಚಾಕ್ಲೆಟ್ ಅಕ್ರಮ ಪ್ರವೇಶ ಪಡೆದಿದ್ದು ಆತಂಕ ಮೂಡಿಸಿದೆ. ಕಾಲೇಜು ವಿದ್ಯಾರ್ಥಿಗಳು, ಮೆಡಿಕಲ್, ಇಂಜಿನಿಯರ್ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಈ ಗಾಂಜಾ ಮಿಶ್ರಿತ ಜೆಲ್ಲಿ ಚಾಕ್ಲೆಟ್ ಅನ್ನು ಮಾರಾಟ ಮಾಡುತ್ತಿದ್ದ ಖದೀಮರನ್ನು ಬ್ಯಾಟರಾಯಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಮೊಹಮ್ಮದ್ ಜಾಹೀದ್ ಮತ್ತು ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಇವರ ಗ್ಯಾಂಗ್‌ನಲ್ಲಿದ್ದ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಬಂಧಿತರಿಂದ ಪೊಲೀಸರು 3 ಲಕ್ಷ ರೂ. ಮೌಲ್ಯದ 1.440 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಇವರು ಗಾಂಜಾದ ಬಟ್ಟಿ ಇಳಿಸಿದ ರಸವನ್ನೇ ಜೆಲ್ಲಿ ಚಾಕ್ಲೆಟ್ ಜೊತೆ ಬೆರೆಸುತ್ತಿದ್ದರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ. ತಲೆಮರೆಸಿಕೊಂಡ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಬ್ಯಾಟರಾಯನಪುರ ಇನ್ಸ್‌ಪೆಕ್ಟರ್ ಕೆ.ಜೀವನ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ಮಾಡಿದ್ದು, ಒಟ್ಟು ಮೂರು ಲಕ್ಷ ಮೌಲ್ಯದ 1440 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ತಬಿಖೆ ವೇಳೆ ಗಾಂಜಾದ ಬಟ್ಟಿ ಇಳಿಸಿರುವ ರಸವನ್ನೇ ಜೆಲ್ಲಿ ಚಾಕೊಲೇಟ್ ಜೊತೆ ಬೆರೆಸುತ್ತಿರುವುದು ಪತ್ತೆ ಆಗಿದೆ.

ಆರೋಪಿಗಳು ಹೆಬ್ಬಾಳದ ವಿಶ್ವನಾಥ ನಾಗೇನಹಳ್ಳಿಯಲ್ಲಿ ವಾಸವಿದ್ದರು. ಮಂಗಳೂರು ಮೂಲದ ಸ್ನೇಹಿತನ ಮೂಲಕ ದಂಧೆ ನಡೆಸುತ್ತಿದ್ದರು. ಒಂದು ಪ್ಯಾಕ್ ಜೆಲ್ಲಿ ಗಾಂಜಾಗೆ ಬರೋಬ್ಬರಿ 6 ಸಾವಿರ ರೂಪಾಯಿಗಳು. ಗಾಂಜಾದ ಬಟ್ಟಿ ಇಳಿಸಿರುವ ರಸವನ್ನೇ ಈ ಜೆಲ್ಲಿ ಚಾಕೊಲೇಟ್‌ಗಳ ಜೊತೆ ಬೆರೆಸುತ್ತಾರೆ. ಒಂದು ಪ್ಯಾಕ್ ಜೆಲ್ಲಿ ಗಾಂಜಾಗೆ ಬರೋಬ್ಬರಿ 6 ಸಾವಿರ ರೂ. ಜೆಲ್ಲಿ ಬಾಯಿಗೆ ಇಟ್ಟ ಬಳಿಕ ಕರಗುತ್ತೆ. ಗಾಂಜಾ ಸೊಪ್ಪು, ಹ್ಯಾಶ್ ಆಯಿಕ್ಗಿಂತ ಈ ಜೆಲ್ಲಿ ಗಾಂಜಾ ಅಮಲು ಹೆಚ್ಚು ಎನ್ನಲಾಗುತ್ತಿದೆ. ಪಾಕೆಟ್ನಲ್ಲಿಟ್ಟುಕೊಂಡರೂ ಯಾರಿಗೂ ಡೌಟ್ ಬರಲ್ಲ. ಒಂದು ವೇಳೆ ಪೊಲೀಸರೇ ತಡಕಾಡಿದರೂ ಪೆಡ್ಲರ್ ಯಾರು, ಗ್ರಾಹಕ ಯಾರು ಎಂದು ಕಂಡು ಹಿಡಿಯುವುದಕ್ಕೆ ಆಗುವುದಿಲ್ಲ. ಮಾದಕ ವಸ್ತು ವಿರೋಧಿ ದಿನ ಆಚರಿಸುತ್ತಿರುವ ಬೆನ್ನಲ್ಲೆ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದು ಆತಂಕಕಾರಿಯಾಗಿದೆ. Ganja in Jelly Chocolate
ಇದನ್ನು ಓದಿ: