Back To Top

 ರಾಜ್ಯದಲ್ಲಿ ನಿರಂತರವಾಗಿದ್ದ ವರುಣಾರ್ಭಟ ಕಡಿಮೆಯಾಗುವ ಸಾಧ್ಯತೆ: ಕರಾವಳಿಯಲ್ಲಿ ಎಲ್ಲೋ ಅಲರ್ಟ್ Rain in Karnataka
June 19, 2025

ರಾಜ್ಯದಲ್ಲಿ ನಿರಂತರವಾಗಿದ್ದ ವರುಣಾರ್ಭಟ ಕಡಿಮೆಯಾಗುವ ಸಾಧ್ಯತೆ: ಕರಾವಳಿಯಲ್ಲಿ ಎಲ್ಲೋ ಅಲರ್ಟ್ Rain in Karnataka

Rain in Karnataka ಬೆಂಗಳೂರು: ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಸಾಕಷ್ಟು ಕಡೆ ವಿವಿಧ ಅವಾಂತರಗಳು ಸಂಭವವಿಸಿದ್ದು, ಭೂ, ಗುಡ್ಡ ಕುಸಿತ, ನೀರಿನ ಪ್ರವಾಹ, ಮನೆ ಕುಸಿತಗಳಿಂದ ಸಾಕಷ್ಟು ಸಾವು ನೋವು ಸಂಭವಿಸಿದೆ.


ಬಿಡದೆ ಸುರಿದ ಮಳೆ ಸಾಧಾರಣ ಒಂದು ತಿಂಗಳ ಬಳಿಕ ಕರ್ನಾಟಕದಾದ್ಯಂತ ಮಳೆ(Rain) ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.


ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಜೂನ್ 25ರವರೆಗೆ ಸಾಧಾರಣ ಮಳೆಯಾಗಲಿದೆ.

Rain in Karnataka

ಸ್ಥಳಗರಿಷ್ಠ ಉಷ್ಣಾಂಶ (°C)ಕನಿಷ್ಠ ಉಷ್ಣಾಂಶ (°C)
HAL27.420.0
ನಗರ (City)27.620.4
KIAL28.120.4
JKVK27.419.6
ಹೊನ್ನಾವರ30.324.0
ಕಾರವಾರ32.424.7
ಮಂಗಳೂರು ಏರ್ಪೋರ್ಟ್27.423.6
ಶಕ್ತಿನಗರ27.622.8
ಬೆಳಗಾವಿ26.821.5
ಬೀದರ್33.221.8
ಬಾಗಲಕೋಟೆ32.623.1
ಧಾರವಾಡ28.221.2
ಗದಗ30.421.8
ಕಲಬುರಗಿ34.723.2
ಹಾವೇರಿ26.621.8
ಕೊಪ್ಪಳ32.524.9
ರಾಯಚೂರು35.022.0


ಉಪ್ಪಿನಂಗಡಿ, ಮೂಡುಬಿದಿರೆ, ಕ್ಯಾಸಲ್ರಾಕ್, ಕೊಟ್ಟಿಗೆಹಾರ, ಭಾಗಮಂಡಲ, ಕಾರ್ಕಳ, ಬೆಳ್ತಂಗಡಿ, ಲೋಂಡಾ, ಧರ್ಮಸ್ಥಳ, ಕಾರ್ಕಳ, ಕಳಸ, ಸುಳ್ಯ, ಕಮ್ಮರಡಿ, ಶೃಂಗೇರಿ, ನಾಪೋಕ್ಲು, ಬಂಟವಾಳ, ಸಿದ್ದಾಪುರ, ಪುತ್ತೂರು,ಮಾಣಿ, ಗೇರುಸೊಪ್ಪ, ಶಕ್ತಿನಗರ, ಮುಲ್ಕಿ, ಜಯಪುರ, ಸೋಮವಾರಪೇಟೆ, ಎನ್ಆರ್ಪುರ, ಭದ್ರಾವತಿ, ಅಂಕೋಲಾ, ಯಲ್ಲಾಪುರ, ಕುಮಟಾ, ಹಾರಂಗಿ, ಮಂಕಿ, ತರಿಕೆರೆ, ಅರಕಲಗೂಡು, ಹೊನ್ನಾಳಿ, ಶಿವಮೊಗ್ಗ, ಹಾವೇರಿ, ಬೆಳಗಾವಿಯಲ್ಲಿ ಮಳೆಯಾಗಿದೆ.
ಬೆಂಗಳೂರಿನಲ್ಲಿ ಬುಧವಾರ ಕೆಲವೆಡೆ ಮಳೆಯಾಗಿದ್ದು, ಗುರುವಾರ ಮೋಡಕವಿದ ವಾತಾವರಣವಿದ್ದರೂ ಸ್ವಲ್ಪ ಬಿಸಿಲು ಕೂಡ ಇದೆ. ಎಚ್ಎಎಲ್ ನಲ್ಲಿ 27.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 27.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 28.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 27.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.ಹೊನ್ನಾವರದಲ್ಲಿ 30.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.0ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 32.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಮಂಗಳೂರು ಏರ್ಪೋರ್ಟ್ನಲ್ಲಿ 27.4ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಶಕ್ತಿನಗರದಲ್ಲಿ 27.6ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಬೆಳಗಾವಿಯಲ್ಲಿ 26.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೀದರ್ನಲ್ಲಿ 33.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬಾಗಲಕೋಟೆಯಲ್ಲಿ 32.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಧಾರವಾಡದಲ್ಲಿ28.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಗದಗದಲ್ಲಿ 30.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಲಬುರಗಿಯಲ್ಲಿ 34.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹಾವೇರಿಯಲ್ಲಿ 26.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೊಪ್ಪಳದಲ್ಲಿ 32.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ರಾಯಚೂರಿನಲ್ಲಿ 35.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
rain in karnataka

Prev Post

ತಲೆ ಮೇಲೆ ಬಿದ್ದ ಕೊಂಬೆ: ಕೋಮಾದಲ್ಲಿದ್ದ ಅಕ್ಷಯ್ ಗೆ ಹೃದಯ ಸ್ತಂಭನ, ಫಲಿಸಲಿಲ್ಲ…

Next Post

ಇಸ್ರೇಲ್ -ಇರಾನ್ ಯುದ್ದ: ಇಸ್ರೇಲ್ ಸಹಾಯಕ್ಕೆ ಅಮೇರಿಕ ಒಪ್ಪಿಗೆ: Israel Iran War

post-bars

Leave a Comment

Related post