
ಇಸ್ರೇಲ್ -ಇರಾನ್ ಯುದ್ದ: ಇಸ್ರೇಲ್ ಸಹಾಯಕ್ಕೆ ಅಮೇರಿಕ ಒಪ್ಪಿಗೆ: Israel Iran War
ನವದೆಹಲಿ: (Israel Iran War) ಬಿಗಡಾಯಿಸಿದ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ರಾಷ್ಟಗಳಾದ ಇರಾನ್-ಇಸ್ರೇಲ್ ಮಧ್ಯದ ಸಂಘರ್ಷ. ನಾಗರೀಕರ ಮೇಲೆ ದಾಳಿ ಪ್ರತಿ ದಾಳಿಗೆ ಸಾಕಷ್ಟು ಸಾವು ನೋವು ಸಂಭವಿಸಿದ್ದು ಈ ನಡುವೆಯೇ ಇದೀಗ ಅಮೆರಿಕ ಪ್ರವೇಶ ಪಡೆದಿದ್ದು, ಇರಾನ್ ಮೇಲೆ ದಾಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಗೆ ಸೂಚಿಸಿದ್ದಾರೆ.
ಇಸ್ರೇಲ್ ಜೊತೆಗೆ ಇರಾನ್ ಸಂಘರ್ಷ ವು ಸದ್ಯ ಇರಾನ್ ಮೇಲೆ ಅಮೆರಿಕ ಯಾವುದೇ ಕ್ಷಣದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ.
ನಿನ್ನೆ ನಡೆದ ಸಭೆಯಲ್ಲಿ ಇರಾನ್ ಮೇಲೆ ದಾಳಿಗೆ ಟ್ರಂಪ್ ಒಪ್ಪಿಗೆ ನೀಡಿದ್ದಾರೆ.
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್’ಗೆ “ಭೀಕರ ಪರಿಣಾಮಗಳ” ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಮತ್ತು ಎರಡು ರಾಷ್ಟ್ರಗಳ ನಡುವಿನ ವೈಮಾನಿಕ ದಾಳಿಗಳು ರಾತ್ರಿಯಿಡೀ ಮುಂದುವರೆದಿದ್ದು, ಯುದ್ಧದ ಆರನೇ ದಿನವನ್ನ ಗುರುತಿಸುತ್ತಿರುವುದರಿಂದ ಟೆಹ್ರಾನ್ ಇಸ್ರೇಲ್’ನ ದಾಳಿಗಳಿಗೆ ಕಠಿಣ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ದೇಶದ ಎಲ್ಲೆಡೆ ಸೈರನ್ ಮೊಳಗಿದ್ದು ಜನರ ಜೀವದ ರಕ್ಷಣೆ ಗೆ ಇಸ್ರೇಲ್ ಸಾಕಷ್ಟು ಪ್ರಯತ್ನ ಪಡುತ್ತಿದೆ ಮತ್ತು ಅಮೇರಿಕ ಸಹಾಯ ಯಾಚಿಸುತ್ತಿದೆ.
(Israel Iran War) ಇರಾನ್ ಅಧ್ಯಕ್ಷ ಶರಣಾಗುವುದಿಲ್ಲ ಎಂದು ಅಮೆರಿಕಕ್ಕೆ ಸಂದೇಶ ನೀಡಿದರು ಮತ್ತು ಯಾವುದೇ ಯುಎಸ್ ದಾಳಿಯು ಸರಿಪಡಿಸಲಾಗದ ಗಂಭೀರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು. ಸದ್ಯ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ದ ಮುಂದುವರಿಯುತ್ತಿದ್ದು ಭಾರತದ ವಿದೇಶಿ ಪ್ರಜೆಗಳು ತಾಯ್ನುಡಿಗೆ ಸುರಕ್ಷಿತವಾಗಿ ಮರಳುತ್ತಿದ್ದಾರೆ.